ಕಿಚ್ಚಾ ಸುದೀಪ್ ನಟಿಸಿರುವ ಪೈಲ್ವಾನ್ ಚಿತ್ರದ ಬಗ್ಗೆ ಅಭಿಮಾನಿಗಳೆಲ್ಲ ಕುಯತೂಹಲಗೊಂಡಿದ್ದಾರೆ. ಈ ವರೆಗೂ ಫಸ್ಟ್ಲುಕ್ ಮತ್ತು ಟೀಸರ್ ನೋಡಿರುವವರು ಮತ್ತಷ್ಟು ಬೆಳವಣಿಗೆಗಳ ಬಗ್ಗೆ ಕಾತರರಾಗಿದ್ದಾರೆ. ಸುದೀಪ್ ಅಭಿಮಾನಿಗಳಂತೂ ಪೈಲ್ವಾನ್ ಚಿತ್ರದ ಅಪ್ಡೇಟ್ಗಳಿಗಾಗಿ ಕಾದು ಕೂತಿದ್ದಾರೆ. ಇದೀಗ ಈ ಚಿತ್ರದ ನಿರ್ದೇಶಕ ಕೃಷ್ಣ ಅಭಿಮಾನಿಗಳನ್ನು ಸಮಾಧಾನ ಪಡಿಸಲು ವಿಶಿಷ್ಟವಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ!
ಅಭಿಮಾನಿಗಳ ಒತ್ತಾಯಕ್ಕೆ ಮಣಿದೇ ಈ ಪೋಸ್ಟರ್ ಬಿಡುಗಡೆ ಮಾಡುತ್ತಿರೋದಾಗಿ ಹೇಳಿರೋ ನಿರ್ದೇಶಕ ಕೃಷ್ಣ, ಇದು ಎಲ್ಲರಿಗೂ ಸರ್ಪ್ರೈಸ್ ಅಂದಿದ್ದಾರೆ. ಜೊತೆಗೆ ಪೈಲ್ವಾನ್ ಚಿತ್ರಕ್ಕೆ ಬೆಂಬಲ ನೀಡುತ್ತಿರುವ, ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅಂದಹಾಗೆ ಈ ವಿಶೇಷವಾದ ಪೋಸ್ಟರ್ ನಾಳೆ ಸಂಜೆ ಅನಾವರಣಗೊಳ್ಳಲಿದೆ.
ಸುದೀಪ್ ಅದೇನೇ ಬ್ಯುಸಿಯಾಗಿದ್ದರೂ ಪೈಲ್ವಾನ್ ಚಿತ್ರಕ್ಕಾಗಿ ಒಂದು ಸಮಯವನ್ನು ಸದಾ ಎತ್ತಿಡುತ್ತಾ ಬಂದಿದ್ದಾರೆ. ಇದೇ ಮೊದಲ ಸಲ ಈ ಚಿತ್ರಕ್ಕಾಗಿ ಸುದೀಪ್ ದೈಹಿಕ ಕಸರತ್ತನ್ನೂ ಮಾಡಿದ್ದಾರೆ. ಒಂದು ಶೇಡಿಗಾಗಿ ವರ್ಕೌಟ್ ಮಾಡಿ ದೇಹವನ್ನು ಸಜ್ಜು ಮಾಡಿಕೊಂಡಿದ್ದ ಅವರು, ಮತ್ತೊಂದು ಶೇಡಿಗಾಗಿ ಕೇಜಿಗಟ್ಟಲೆ ತೂಕವಿಳಿಸಿಕೊಂಡು ಸಣ್ಣಗಾಗಿದ್ದಾರೆ. ನಾಳೆ ಈ ಚಿತ್ರದಲ್ಲಿ ಸುದೀಪ್ ಅವರ ಮತ್ತೊಂದು ಲುಕ್ಕು ಜಾಹೀರಾಗಲಿದೆ.
#
No Comment! Be the first one.