ಬೆಳ್ಳೂರು ಕ್ರಾಸಿಂದ ಬೆಂಗಳೂರಿಗೆ ಬಂದು ನಿರಂತರ ಅವಕಾಶ ಪಡೆದಿರುವ ಪಾವನಾ ನಿಜಕ್ಕೂ ಅದ್ಭುತ ನಟಿ.
ಈ ಹುಡುಗಿ ಚಿತ್ರರಂಗಕ್ಕೆ ಬಂದು ಸರಿ ಸುಮಾರು ಹನ್ನೆರಡು ವರ್ಷಗಳು ಕಳೆದಿರಬಹುದು. ಹೀರೋಯಿನ್ನಾಗಿಯೇ ಏನಿಲ್ಲವೆಂದರೂ ಒಂಭತ್ತು ವರ್ಷಗಳಾಗಿವೆ. ಹೆಸರು ಪಾವನ ಗೌಡ. ಬೆಳ್ಳೂರು ಕಡೆಯ ಹುಡುಗಿ. ಸಿಕ್ಕಾಪಟ್ಟೆ ಟ್ಯಾಲೆಂಟೆಡ್ಡು. ಇಂಟಲಿಜೆಂಟ್ ಡೈರೆಕ್ಟರ್ ಬಿ.ಎಂ. ಗಿರಿರಾಜ್ ಅವರ ಜೊತೆ ಕೆಲಸ ಮಾಡುತ್ತಾ ಪಳಗಿದವಳು. ಪಾವನಾ ಚಿತ್ರರಂಗಕ್ಕೆ ಬಂದಮೇಲೆ ಹೀರೋಯಿನ್ ಆದ ಎಷ್ಟೋ ಜನ ಇವತ್ತಿಗೆ ನಿವೃತ್ತಿ ಪಡೆದಿದ್ದಾರೆ. ಇನ್ನೊಂದಷ್ಟು ಜನಕ್ಕೆ ಛಾನ್ಸು ಸಿಗುತ್ತಿಲ್ಲ. ಮದುವೆಯಾಗಿ ಮನೆ ಸೇರಿದವರೂ ಇದ್ದಾರೆ. ಆದರೆ ಪಾವನಾ ಮಾತ್ರ ತೀರಾ ಟಾಪ್ ಲೆವೆಲ್ಲಿಗೂ ಹೋಗದೆ, ಅವಕಾಶಗಳಿಗಾಗಿ ಪರದಾಟ ಕೂಡಾ ನಡೆಸದೆ ಒಂದೇ ಲೆವೆಲ್ಲಿನಲ್ಲಿ ಸಾಗಿಬಂದಿದ್ದಾರೆ..
ಅಜಯ್ ರಾವ್ ನಟಿಸಿದ್ದ ಅದ್ವೈತ ಸಿನಿಮಾದಲ್ಲಿ ಪ್ರಮುಖ ಪಾತ್ರದೊಂದಿಗೆ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟವರು ಪಾವನಾ. ನಂತರ ಗೊಂಬೆಗಳ ಲವ್ ಸಿನಿಮಾದ ಪಾತ್ರ ಈಕೆಯ ತಾಕತ್ತೇನು ಅನ್ನೋದನ್ನು ಜಗತ್ತಿಗೇ ತೋರಿತು. ದುನಿಯಾ ವಿಜಯ್ ಅವರ ಜಾಕ್ಸನ್ ಸಿನಿಮಾದಲ್ಲಿ ಪಾವನಾ ಹೀರೋಯಿನ್ ಆದರು. ಇದಾದಮೇಲೆ ಜಟ್ಟ, ವೆನಿಲ್ಲಾ, ಖುಷಿಖುಷಿಯಾಗಿ, ಟಿಪಿಕಲ್ ಕೈಲಾಸ್, ಜಾನ್ ಜಾನಿ ಜನಾರ್ಧನ್ ಸಿನಿಮಾಗಳಲ್ಲೀಕೆ ನಟಿಸಿದರು. ಸದ್ಯ ತೆರೆಗೆ ಬರಲಿರುವ ರುದ್ರಿ, ಮೈಸೂರ್ ಡೈರೀಸ್, ಕಲಿವೀರ ಚಿತ್ರಗಳಲ್ಲೂ ಪಾವನಾ ಹೀರೋಯಿನ್ನು…
ಬೆಳ್ಳೂರು ಕ್ರಾಸಿಂದ ಬೆಂಗಳೂರಿಗೆ ಬಂದು ನಿರಂತರ ಅವಕಾಶ ಪಡೆದಿರುವ ಪಾವನಾ ನಿಜಕ್ಕೂ ಅದ್ಭುತ ನಟಿ. ಪಾತ್ರ ಎಂಥದ್ದೇ ಆದರೂ ನುಂಗಿಕೊಂಡಂತೆ ನಟಿಸುತ್ತಾರೆ. ಸಿನಿಮಾಗಳಲ್ಲಿ ಈಕೆಗೆ ಬಹುತೇಕ ಡಿಗ್ಲಾಮರ್ ರೋಲುಗಳೇ ಸಿಗುವ ಕಾರಣಕ್ಕೋ ಏನೋ ಪಾವನಾ ನಿಜಬದುಕಿನಲ್ಲಿ ಮಾದಕವಾಗಿ ಕಾಣಿಸಿಕೊಳ್ಳುವ ಗುಣ ಬೆಳೆಸಿಕೊಂಡಿದ್ದಾರೆ. ಅದು ಯಾವ ಮಟ್ಟಕ್ಕೆ ಅಂದರೆ, ಇತ್ತೀಚೆಗೆ ನಡೆದ ಕಲಿವೀರ ಪ್ರೆಸ್ ಮೀಟಲ್ಲಿ ಈಕೆ ಬಾಟಮ್ ಲೆಸ್ ಆಗಿ ಬಂದುಬಿಟ್ಟಿದ್ದರು. ಆಗಾಗ ಹಾಟ್ ಲುಕ್ಕಿನ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ಹಾಕಿಕೊಳ್ಳುತ್ತಿರುತ್ತಾರೆ. ಅದು ಆಕೆಯ ಸ್ವಾತಂತ್ರ್ಯ, ಇಚ್ಚೆಗೆ ಬಿಟ್ಟಿದ್ದು. ಹಾಗಂತ ಪತ್ರಿಕಾಗೋಷ್ಟಿಯಂತಾ ಜಾಗಕ್ಕೂ ಹೆಂಗಂದರೆ ಹಂಗೆ ಬಂದುಬಿಡೋಡಾ?
ರಾಗಿಣಿ, ಶಾಕಿಣಿ, ಡಾಕಿಣಿಯರಂಥಾ ಕೆಲವು ಹೆಂಗಸರು ಆಗಾಗ ಹೀಗೆ ಅಸಹ್ಯವಾಗಿ ಕಾಣಿಸಿಕೊಳ್ಳುವುದಿದೆ. ಊಟ, ಬಟ್ಟೆಗಳೆಲ್ಲಾ ಅವರವರ ಆಯ್ಕೆ ಮತ್ತು ಹಕ್ಕು. ಆದರೆ ಮನೆ ಹೆಣ್ಣುಮಕ್ಕಳಂತೆ ಕಾಣುವ ಪಾವನಾರಂಥ ಹುಡುಗಿಯರು ಸಭ್ಯತೆಯ ಎಲ್ಲೆ ಮೀರಬಾರದು ಅಲ್ಲವಾ?
No Comment! Be the first one.