ಡಿ.ಜೆ ಸಿನಿಮಾದಲ್ಲಿ ನಟಿಸಿದ್ದ ಪೂಜಾ ಹೆಗಡೆಯ ಕುರಿತಾಗಿ ಹೊಸದೊಂದು ರೂಮರ್ ತೆಲುಗು ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ. ವಾಲ್ಮೀಕಿ ಸಿನಿಮಾದ ಚಿಕ್ಕ ಪಾತ್ರವೊಂದಕ್ಕೆ ಪೂಜಾ ಎರಡು ಕೋಟಿ ಸಂಭಾವನೆಯನ್ನು ಕೇಳಿದ್ದಾರಂತೆ. ಹೌದು ವಾಲ್ಮೀಕಿ ಸಿನಿಮಾದ 15 ನಿಮಿಷದ ದೃಶ್ಯಕ್ಕೆ ಅಷ್ಟೊಂದು ಸಂಭಾವನೆಯೇ ಎಂದು ತೆಲುಗು ಸಿನಿಮಂದಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಆಕೆಯ ಮೇಲೆ ಸಿಡಿಮಿಡಿಯೂ ಗೊಂಡಿದ್ದಾರೆ.
ಟಾಲಿವುಡ್ ನ ತಮನ್ನಾ, ಕಾಜರ್ ಅಗರ್ ವಾಲ್ ಹಾಗೂ ಸಮಂತಾ ಬರುಬರುತ್ತಾ ಚ್ಯೂಸಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಟಾಲಿವುಡ್ ನಾಯಕಿಯರ ಆಹಾಕಾರದಲ್ಲಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡಿರುವ ಪೂಜಾ ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಹರೀಶ್ ಶಂಕರ್ ಹಬ್ಬಿರುವ ಗಾಳಿ ಸುದ್ದಿಯನ್ನು ನಂಬಕೂಡದೆಂದು ಆಕೆ ಅಷ್ಟೊಂದು ಸಂಭಾವನೆಯನ್ನು ಕೇಳಿಲ್ಲವಾಗಿ, ಆಕೆಗಿರುವ ಮಾರ್ಕೇಟ್ ಗೆ ಮ್ಯಾಚ್ ಆಗುವ ಸಂಭಾವನೆಯನ್ನಷ್ಟೇ ಕೇಳಿದ್ದಾರೆ ಎನ್ನಲಾಗಿದೆ.
No Comment! Be the first one.