ಕರ್ನಾಟಕದಾದ್ಯಂತ ಆವರಿಸುತ್ತಿರುವ ಬರದ ಛಾಯೆ ಎಲ್ಲೆಡೆ ವ್ಯಾಪಿಸುತ್ತಲೇ ಇದೆ. ಪ್ರಮುಖದ ಸ್ಥಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ಈ ಕುರಿತು ಸರ್ಕಾರವೂ ಸಾಕಷ್ಟು ಗಮನ ಹರಿಸುತ್ತಲಿದೆ. ಸರ್ಕಾರದ ಜತೆಗೆ ಬಹಳಷ್ಟು ಸಂಘಟನೆಗಳು, ಎನ್ ಜಿ ಓಗಳು ಕೈ ಜೋಡಿಸುತ್ತಲೂ ಇವೆ. ಅದೇ ನಿಟ್ಟಿನಲ್ಲಿ ಇಶಾ ಫೌಂಡೇಷನ್ ನ ಸದ್ಗುರು ಜಗ್ಗಿ ವಾಸುದೇವ್ ಕೂಡ ಈ ಹಿಂದೆಯೂ ಅತಿ ದೊಡ್ಡ Rally ನಡೆಸುವ ಮೂಲಕ ಜನಸಾಮಾನ್ಯರಲ್ಲಿ ನೀರಿನ ಕುರಿತಾಗಿ ಅರಿವು ಮೂಡಿಸಲು ಪ್ರಯತ್ನಿಸಿದ್ದರು.

ಈಗ ಮತ್ತೆ ಜಗ್ಗಿ ವಾಸುದೇವ್ ಹೊಸದೊಂದು ಅಭಿಯಾನವನ್ನು ಶುರು ಮಾಡಿದ್ದಾರೆ. ಹೌದು.. ಇಶಾ ಪೌಂಡೇಷನ್ ವತಿಯಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನದ ಮೂಲಕ ಕಾವೇರಿ ನದಿ ನೀರಿನ ಮಟ್ಟವನ್ನು ಹೆಚ್ಚಿಸಲು ‘ಕಾವೇರಿ ಕಾಲಿಂಗ್’ ಎನ್ನುವ ಅಭಿಯಾನವೊಂದು ಶುರುವಾಗಿದೆ. ಸದ್ಯ ಈ ಯೋಜನೆಗೆ ದೇಶದ ಹಲವಾರು ಗಣ್ಯರು ಕೈ ಜೋಡಿಸಿದ್ದು,  ಇದೀಗ ಪವರ್ ಸ್ಟಾರ್ ಪುನೀತ್ ರಾಜ್​ ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಕೂಡ ಸಾಥ್ ಕೊಟ್ಟಿದ್ದಾರೆ.

ನೀರಿನ ಮಟ್ಟ ಹೆಚ್ಚಿಸುವುದು ಜೊತೆಗೆ ಭೂಮಿಯ ಫಲವತ್ತತೆಯನ್ನು ವೃದ್ಧಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಜಲಾನಯನ ಭಾಗದ ರೈತರ ಜಮೀನುಗಳಲ್ಲಿ ಹಣ್ಣಿನ ಸಸಿಗಳನ್ನು ನೆಡುವ ಅಭಿಯಾನ ಕೈಗೊಳ್ಳಲಾಗಿದೆ. ಈಗಾಗಲೇ ನೂರಾರು ರೈತರು ಅಭಿಯಾನಕ್ಕೆ ಹೆಸರು ನೋಂದಾಯಿಸಿದ್ದು 42 ರೂಪಾಯಿ ಬೆಲೆಯ ಸಸಿಗಳನ್ನು ಕೊಂಡು ಜಮೀನುಗಳಲ್ಲಿ ನೆಡುವ ಮೂಲಕ ಕಾವೇರಿಯನ್ನು ಉಳಿಸೋಣ ಅನ್ನುವ ಸಂದೇಶ ರವಾನಿಸಿದ್ದಾರೆ. ಜಗ್ಗಿ ವಾಸುದೇವ್ ಅವರ ಆಹ್ವಾನವನ್ನು ಸ್ವಾಗತಿಸಿರುವ ಪವರ್ ಸ್ಟಾರ್ ಈ ಕುರಿತು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

CG ARUN

ದುಬಾರಿ ಮೊತ್ತಕ್ಕೆ ಗೀತಾ ಸಿನಿಮಾ ಡಿಜಿಟಲ್ ರೈಟ್ಸ್ ಸೇಲ್!

Previous article

ಆಸ್ತಮದಿಂದ ನರಳುತ್ತಿದ್ದವರ ಪರ ನಿಂತಿದ್ದ ಪ್ರಿಯಾಂಕ ಧಮ್ ಹೊಡೆದ್ರಂತೆ!

Next article

You may also like

Comments

Leave a reply

Your email address will not be published. Required fields are marked *