ಫೇಸ್ಬುಕ್ಕಲ್ಲಿ ಹುಡುಗೀರ ಬೇಟೆಗೆ ಬಂದೂಕು ಹಿಡಿದು ಕೂತ ಕಾಮುಕರದ್ದೊಂದು ದೊಡ್ಡ ಸಂಖ್ಯೆಯೇ ಇದೆ. ಈ ಅನಿಷ್ಠ ಕಾರ್ಯಕ್ಕೆ ಹೆಚ್ಚಾಗಿ ಚಿತ್ರರಂಗದ ಹೆಸರೇ ಬಳಕೆಯಾಗುತ್ತಿದೆ ಎಂಬುದು ದುರಂತ ಸತ್ಯ. ಇದೀಗ ತನ್ನನ್ನು ತಾನು ನಿರ್ದೇಶಕ ಅಂತ ಬಿಂಬಿಸಿಕೊಂಡಿರೋ ಪ್ರಕಾಶ್ ಬಸವನಬಾಗೇವಾಡಿ ಎಂಬ ಕಂಮಗಿಯ ವಿರುದ್ಧ ನೀಮಾ ಗೌಡ (ಹೆಸರು ಬದಲಿಸಿದೆ) ಎಂಬ ನವರಂಗಿಯೊಬ್ಬಳು ತಿರುಗಿ ಬಿದ್ದಿದ್ದಾಳೆ!
ಈ ಆಸಾಮಿ ಪ್ರಕಾಶ್ ತನ್ನ ಹೆಸರಿನ ಮುಂದೆ ಪುಣ್ಯಸ್ಥಳವಾದ ಬಸವನಬಾಗೇವಾಡಿಯ ಹೆಸರನ್ನು ತಗುಲಿಸಿಕೊಂಡಿದ್ದಾನೆ. ಫೇಸ್ ಬುಕ್ನಲ್ಲಿ ಇವನದ್ದೊಂದು ಪ್ರೊಫೈಲ್ ಇದೆ. ಅದಕ್ಕೆ `ಸಿನಿಮಾನೇ ನನ್ನ ಉಸಿರು’ ಅನ್ನೋ ಪ್ರೊಫೈಲ್ ಪಿಕ್ಚರ್ ಬೇರೆ ಅಂಟಿಸಿಕೊಂಡಿದ್ದಾನೆ. ಅದರಲ್ಲಿ ಹುಡುಗೀರನ್ನು ಆಯ್ಕೆ ಮಾಡಿಕೊಂಡು ಲಡಾಸು ಇಂಗ್ಲಿಷಿನಲ್ಲಿ ತನ್ನನ್ನು ತಾನು ನಿರ್ದೇಶಕ ಅಂತ ಪರಿಚಯಿಸಿಕೊಳ್ಳುತ್ತಾನೆ ಪ್ರಕಾಶ.
ಆ ಬಳಿಕ ತಾನು ಗೋರಿ ಮೇಲೆ ಲಗೋರಿ ಎಂಬ ಸಿನಿಮಾ ಮಾಡುತ್ತಿದ್ದೇನೆ ಅಂತ ಮೆಸೆಂಜರಿನಲ್ಲಿಯೇ ಕಾವೇರಲು ಶುರು ಮಾಡುತ್ತಾನೆ. ಬಳಿಕ ಮುಂದುವರೆದು ನೇರಾ ನೇರ ಮಂಚಹತ್ತಿಸಿಕೊಳ್ಳುವ ಗೇಮು ಶುರುವಿಡುತ್ತಾನೆ. ಇಂಥಾ ಆಟಕ್ಕೆ ಅದ್ಯಾರ್ಯಾರು ಬಲಿಯಾಗಿದ್ದಾರೆಂಬ ವಿಚಾರ ಇವನ ಬುಡಕ್ಕೆ ಪೊಲೀಸರ ಬೂಟುಗಾಲಿನ ಸ್ಪರ್ಶವಾದ ನಂತರವಷ್ಟೇ ಹೊರಬೀಳಬೇಕಿದೆ. ಆದರೆ ಸದ್ಯ ಇವನ ವಿರುದ್ಧ ಒಬ್ಬಳು ತಿರುಗಿ ಬಿದ್ದಿದ್ದಾಳೆ. ಆಕೆ ನೀಮಾ ಗೌಡ!
ಈ ನೀಮಾ ಎಂಬಾಕೆಗೂ ಪ್ರಕಾಶ ಹೀಗೆಯೇ ಮೆಸೆಂಜರಿನಲ್ಲಿ ಅಟಕಾಯಿಸಿಕೊಂಡಿದ್ದಾನೆ. ತನ್ನನ್ನು ತಾನು ಗೋರಿ ಮೇಲೆ ಲಗೋರಿ ಎಂಬ ಸಿನಿಮಾ ನಿರ್ದೇಶಕ ಅಂತ ಪರಿಚಯಿಸಿಕೊಂಡಿದ್ದಾನೆ. ಆ ಬಳಿಕ ಏಕಾಏಕಿ `ಕಾಸು ಕೊಡ್ತೀನಿ ಕಮೀಟ್ ಆಗ್ತೀಯಾ’ ಅಂತ ಮೆಸೇಜು ಬಿಟ್ಟಿದ್ದಾನೆ. ಇದರ ವಿರುದ್ಧ ರೆಬೆಲ್ ಆದ ನೀಮಾ ಅತ್ತಲಿಂದ ನಿನ್ನ ವಿರುದ್ಧ ಫಿಲಂ ಚೇಂಬರ್ಗೆ ದೂರು ನೀಡೋದಾಗಿ ಹೇಳುತ್ತಾಳೆ. ಇಷ್ಟಾದೇಟಿಗೆ ಬಸವನಬಾಗೇವಾಡಿಯ ಈ ಕೀಟ ಹುಚ್ಚೆದ್ದು ಅರಚಿಕೊಳ್ಳುತ್ತೆ. “ನಿಂಗೊಂದು ವಿಷಯ ಹೇಳ್ತೀನಿ ಕೇಳ್ಕೊ. ನಾನು ಎಲ್ಲದಕ್ಕೂ ಸಿದ್ಧನಾಗಿಯೇ ಚಿತ್ರರಂಗಕ್ಕೆ ಬಂದಿದ್ದೇನೆ. ಪೊಲೀಸ್, ರಾಜಕಾರಣ, ರೌಡೀಸ್ ಎಲ್ಲವೂ ಇರೋದರಿಂದಲೇ ಫಿಲಂ ಫೀಲ್ಡಲ್ಲಿ ಇದೀನಿ. ನನ್ನನ್ಯಾರೂ ಏನೂ ಮಾಡಿಕೊಳ್ಳಲಾಗೋದಿಲ್ಲ” ಎಂಬರ್ಥದಲ್ಲಿ ಅವಾಜನ್ನೂ ಬಿಡುತ್ತಾನೆ!
ಇಂಥಾ ಫೇಸ್ಬುಕ್ ಕಾಮುಕರಿಗೆ, ಚಿತ್ರರಂಗದ ಹೆಸರನ್ನು ಖಯಾಲಿಗೆ ಬಳಸಿಕೊಳ್ಳುವ ಪ್ರಕಾಶನಂಥಾ ಕಸಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ಆದರೆ ಈತನ ವಿರುದ್ಧ ತಿರುಗಿ ಬಿದ್ದಿರೋ ಪುಣ್ಯಾತಗಿತ್ತಿ ನೀಮಾಳ ಹಿಸ್ಟರಿ ಏನೆಂದು ನೋಡಹೋದರೆ ಆಕೆಯ ಬಗ್ಗೆಯೂ ಅನುಮಾನಗಳು ಕಾಡುತ್ತವೆ. ಈಕೆ ಪ್ರಕಾಶನೊಂದಿಗೆ ನಡೆಸಿರೋ ಚಾಟ್ ಹಿಸ್ಟರಿಯಲ್ಲಿ ಕೆಲ ಮೆಸೇಜುಗಳು ಡಿಲೀಟ್ ಆಗಿರೋ ಗುಮಾನಿಯೂ ಕಾಡುತ್ತದೆ. ಈಗಾಗಲೇ ಈಕೆ ಹಲವಾರು ದೇವರ ಸಿನಿಮಾಗಳಲ್ಲಿ ದೇವತೆಯಾಗಿ ನಟಿಸಿದ್ದಾಳೆಂಬ ವಿಚಾರವೂ ಜಾಹೀರಾಗುತ್ತದೆ!
ಇದೆಲ್ಲ ಏನೇ ಇದ್ದರೂ ಚಿತ್ರ ರಂಗದ ಹೆಸರು ಹೇಳಿಕೊಂಡು ಹೆಣ್ಣುಮಕ್ಕಳನ್ನು ಕಾಡುವ ಪ್ರಕಾಶನಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ. ಫೇಸ್ಬುಕ್ಕಿನಲ್ಲಿರೋ ಹೆಣ್ಣುಮಕ್ಕಳೂ ಕೂಡಾ ಪ್ರಕಾಶನಂಥಾ ಪ್ರಳಯಾಂತಕರ ಬಗ್ಗೆ ಎಚ್ಚರದಿಂದಿರಬೇಕಿದೆ.
#