ಬೆಂಗಳೂರು ದಕ್ಷಿಣವಲಯ ೧ರ ದೊಡ್ಡಗೊಲ್ಲರಹಟ್ಟಿ ಕ್ಲಸ್ಟರ್ನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಟ ನಿರ್ದೇಶಕ ನಿತಿನ್ ನಂಜಪ್ಪ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಪ್ ಇಂಡಿಯಾ ಯೂನಿವರ್ಷಿಟಿಯ ಮಗು ಮತ್ತು ಕಾನೂನು ಕೇಂದ್ರದ ಕುಮಾರ್ ಶೃಂಗೇರಿಯವರು ನೆರವೇರಿಸಿಕೊಟ್ಟಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಥಮ್ ‘ನಾನು ಈ ಮಟ್ಟಕ್ಕೆ ಬರಲು ನಾನು ಓದಿದ ಸರ್ಕಾರಿ ಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮವೇ ಕಾರಣ. ನಾನು ಪಂಚಾಯಿತಿ ಮಟ್ಟದಿಂದ ರಾಜ್ಯಮಟ್ಟದ ಕಾರ್ಯಕ್ರಮದವರೆಗೂ ಭಾಗವಹಿಸಿದ್ದೆ, ಈ ಕಾರ್ಯಕ್ರಮವೇ ನನ್ನನ್ನು ಉತ್ತಮ ನಟನ್ನನ್ನಾಗಿ ಮಾಡಿದೆ. ನನಗೆ ಈ ರೀತಿಯ ಅವಕಾಶಗಳು ಸಿಗದೇ ಇದ್ದಿದ್ದರೆ ನಾನು ಈ ದಿನ ನಿಮ್ಮ ಮುಂದೆ ಈ ರೀತಿಯ ನಟನಾಗಿ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಸರ್ಕಾರಗಳು ಶಾಲೆಗಳನ್ನು ಮುಚ್ಚುವ ಮಾತನಾಡಬಾರದು ಬದಲಿಗೆ ಅವುಗಳನ್ನು ಇನ್ನೂ ಹೆಚ್ಚು ಅಭಿವೃದ್ಧಿಯನ್ನು ಹಾಗೂ ಸಬಲೀಕರಣವನ್ನು ಮಾಡಬೇಕು. ಇಂತಹ ಸಾಮಾಜಿಕ ಕಾರ್ಯಕ್ಕೆ ನಾನು ಸದಾ ಮುಂದಿರುತ್ತೇನೆ’ ಎಂಬ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಚಂದ್ರಕಲಾ ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಭಾಗ್ಯರವರು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
#