ಕಣ್ಣೊಡೆಯುವ ಮೂಲಕ ಪ್ರಪಂಚದಾದ್ಯಂತ ಫೇಮಸ್ ಆದ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್. ಒರು ಅಡಾಲ್ ಸಿನಿಮಾ ಫ್ಲಾಪ್ ಪಟ್ಟಿಗೆ ಸೇರಿದ್ದರೂ ಸಹ ಪ್ರಿಯಾಗೆ ಅವಕಾಶಗಳೇನು ಕಡಿಮೆ ಇಲ್ಲ. ಈಗಾಗಲೇ ಬಹಳಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡು ಬ್ಯುಸಿ ನಟಿರುವ ಈಕೆ ತೆಲುಗಿನ ಚಂದ್ರಶೇಖರ್ ಯೆಲತಿ ನಿರ್ದೇಶನ ಮಾಡುತ್ತಿರುವ ಹಾಗೂ ನಿತೀನ್ ನಟಿಸುತ್ತಿರುವ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಸಿನಿಮಾದ ಕುರಿತು ಮಾತುಕತೆಯೂ ನಡೆದಿದ್ದು, ಅಧಿಕೃತ ವಿಚಾರವಷ್ಟೇ ಹೊರಬೀಳಬೇಕಿದೆ.
ಸದ್ಯ ಭೀಷ್ಮ ಸಿನಿಮಾದಲ್ಲಿ ನಿತೀನ್ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ವೆಂಕಿ ಕೂಡುಮುಲ ನಿರ್ದೇಶನ ಮಾಡುತ್ತಿದ್ದಾರೆ. ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿ. ಇದರ ಜತೆಗೆ ನಿತೀನ್ ಕೃಷ್ಣ ಚೈತನ್ಯ ನಿರ್ದೇಶನ ಮಾಡುತ್ತಿರುವ ಚಾಲ್ ಮೋಹನ್ ರಂಗ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
Leave a Reply
You must be logged in to post a comment.