ರಾಮಚರಣ್ ತೇಜ್ ತನ್ನ ಹೆಂಡತಿ ಉಪಾಸನ ಜತೆಗೆ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಆಫ್ರಿಕಾದ ಟಾಂಜೇನಿಯಾ ಮತ್ತು ಇತರ ಪ್ರದೇಶಗಳಿಗೆ ಭೇಟಿ ಮಾಡಿರುವ ದಂಪತಿ ಜಂಗಲ್ ಸಫಾರಿಗಳಲ್ಲಿ ಬಹಳಷ್ಟು ಸಮಯ ಕಾಲವನ್ನು ಕಳೆದಿದ್ದಾರೆ.
ಇನ್ನು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಉಪಾಸನಾ ಆಫ್ರಿಕಾ ನನಗೆ ಮತ್ತು ನನ್ನ ಪತಿಗೆ ಬಹಳಷ್ಟು ನೀಡಿದೆ. ಹಾಗೂ ಪ್ರಕೃತಿಯನ್ನು ಗೌರವಿಸುವ, ಪ್ರಾಣಿಗಳನ್ನು ಗಮನಿಸುವ ಮತ್ತು ಅವುಗಳಿಂದ ಕಲಿಯುವ, ಪ್ರವೃತ್ತಿಗಳನ್ನು ರೂಡಿಸಿಕೊಳ್ಳುವಲ್ಲಿಯೂ ಬಹಳಷ್ಟು ಪಾಠಗಳನ್ನು ಕಲಿಸಿದೆ. ಸಣ್ಣ ಬದಲಾವಣೆಗಳಿಂದ ದೊಡ್ಡ ಪ್ರಯೋಜನವನ್ನೇ ಪಡೆಯುವ ಕಾಲಾವಕಾಶವನ್ನು ಈ ಪ್ರವಾಸ ನೀಡಿದೆ. ಎಂದು ತಿಳಿಸಿದ್ದಾರೆ. ಮೆಘಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ ಸದ್ಯ ಆರ್ ಆರ್ ಆರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಪಾದದ ಉಳುಕಿನಿಂದ ಶೂಟಿಂಗ್ ಗೆ ವಿರಾಮ ಪಡೆದಿದ್ದ ರಾಮ್ ಚರಣ್ ಸದ್ಯ ಗುಣಮುಖರಾಗುತ್ತಿದ್ದಾರೆ.
Leave a Reply
You must be logged in to post a comment.