ಅವನೇ ಶ್ರೀಮನ್ನಾರಾಯಣ, ಅವರಾತ ಪುರುಷ, ಭೀಮಸೇನ ನಳಮಹರಾಜ, ಚಾರ್ಲಿ ೭೭೭ ಮುಂತಾದ ಚಿತ್ರಗಳನ್ನು ಒಟ್ಟೊಟ್ಟಿಗೇ ಅನೌನ್ಸ್ ಮಾಡಿಕೊಂಡು ಒದ್ದಾಡುತ್ತಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ. ಒಂದು ಸಿನಿಮಾ ಮಾಡೋದೇ ಯಮಯಾತನೆಯಂತಾಗಿರುತ್ತದೆ. ಇನ್ನು ನಾಲ್ಕಾರು ಚಿತ್ರಗಳನ್ನು ಏಕಕಾಲದಲ್ಲಿ ನರ್ಮಿಸುತ್ತಿರುವ ಬಾಧೆ ಪುಷ್ಕರ್ ಅವರಿಗೇ ಗೊತ್ತು. ಇದರ ನಡುವೆ ಈಗ ಸಿನಿಮಾ ವಿತರಣೆ ಕಾರ್ಯವನ್ನೂ ಆರಂಭಿಸಲಿದ್ದಾರಂತೆ. ಇದಕ್ಕಾಗಿ ಹೊಸಾ ಆಫೀಸನ್ನೂ ತೆರೆದಿದ್ದಾರೆ. ವಿಚಾರ ಅದಲ್ಲ..
ಇಷ್ಟೆಲ್ಲಾ ವ್ಯಾಪಾರ, ವಹಿವಾಟುಗಳ ನಡುವೆ ಹಣ ಹೊಂದಿಸೋದು, ಕಲಾವಿದರನ್ನು ಒಟ್ಟುಮಾಡೋದು ಸೇರಿದಂತೆ ನಾನಾ ರೀತಿಯ ಒತ್ತಡಗಳಿರುತ್ತವೆ. ಇದರಿಂದ ಹೊರಬರಲು ಅವರಿಗಾದರೂ ಮಾರ್ಗ ಬೇಕಲ್ಲಾ? ಹೀಗಾಗಿ ಫೇಸ್ ಬುಕ್ಕಲ್ಲಿ ಪೋಸ್ಟ್ ಹಾಕೋದು, ಟ್ವಿಟರಲ್ಲಿ ಕಮೆಂಟ್ ಮಾಡೋದು, ಅದೂ ಇದೂ ಅಂತಾ ಆನ್ಲೈನಲ್ಲಿ ಆಕ್ಟೀವ್ ಆಗಿರುತ್ತಾರೆ. ಮೊನ್ನೆದಿನ ನಟಿ ಆಶಿಕಾ ರಂಗನಾಥ್ ತಾನು ಡ್ಯಾನ್ಸು ಮಾಡುತ್ತಿರುವ ವಿಡಿಯೋವೊಂದನ್ನು ಹಾಕಿದ್ದಳು. ಅದಕ್ಕೆ ಪುಷ್ಕರ್ ಮಲ್ಲಿಕ್ ನಿನ್ನನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಬಂದು ನನಗೂ ಕಲಿಸು. ಫುಲ್ ಮಿಲ್ಸ್ ಜೊತೆಗೆ ನೈಂಟಿ ಕೊಡಿಸ್ತೀನಿ ಅದೇ ನಿನಗೆ ಫೀಸು ಎನ್ನುವ ರೀತಿಯಲ್ಲಿ ಕಮೆಂಟ್ ಮಾಡಿಬಿಟ್ಟಿದ್ದಾರೆ. ಟ್ರೋಲ್ ಮಾಡೋರಿಗೆ ಸದ್ಯ ಇದು ನೈಂಟಿನೈನ್ ದೋಸೆಯಂತೆ ವೆರೈಟಿ ಆಹಾರವಾಗಿದೆ!
ಪಾಪ ಕಣ್ರೀ ಪುಷ್ಕರ್. ಅವರದ್ದೇ ನೂರೆಂಟು ಸಮಸ್ಯೆಗಳ ಮಧ್ಯೆ ಒಂದಿಷ್ಟು ನಿರಾಳವಾಗಲು ಪ್ರಯತ್ನಿಸುತ್ತಾರೆ. ವಿವಾದಗಳೂ ಅಲ್ಲಿಯೂ ಸೈಕಲ್ ಗ್ಯಾಪಲ್ಲಿ ಬಂದು ಅಟಕಾಯಿಸಿಕೊಳ್ಳುತ್ತವೆ. ಇನ್ಮೇಲಾದರರೂ ಹುಷಾರಾಗಿರಿ ಪುಷ್ಕರ್! ಜನ ಸರಿ ಇಲ್ಲ!!