ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಸಾರ ಆರೋಪದಡಿ ಬಂಧನಕ್ಕೊಳಗಾಗಿರುವ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ರಾಸಲೀಲೆಗಳು ಒಂದೊಂದಾಗಿ ಬಯಲಾಗುತ್ತಿವೆ. ನ್ಯಾಯಾಂಗ ಬಂಧನದಲ್ಲಿರುವ ಕುಂದ್ರಾ ಬಗ್ಗೆ ದಿನಕ್ಕೊಂದರಂತೆ ಸ್ಫೋಟಕ ಸತ್ಯಗಳು ಹೊರಬೀಳುತ್ತಿವೆ.
ಆರೋಪಿ ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಕಳೆದ ಏಪ್ರಿಲ್ ನಲ್ಲೇ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ದೂರು ನೀಡಿದ್ದರು. ಆ ದೂರಿನಲ್ಲಿ ರಾಜ್ ಕುಂದ್ರಾ ಅಸಭ್ಯವಾಗಿ ವರ್ತಿಸಿದ್ದ ಬಗ್ಗೆ ಉಲ್ಲೇಖಿಸಿದ್ದರು.
“2019ರಲ್ಲಿ ಮೊಬೈಲ್ ಅಪ್ಲಿಕೇಶನ್ ಒಂದರ ಬ್ಯುಸಿನೆಸ್ ವಿಚಾರವಾಗಿ ರಾಜ್ ಕುಂದ್ರಾ ನನ್ನನ್ನು ಮೀಟಿಂಗ್ ಗೆ ಕರೆದಿದ್ದರು. ಮೀಟಿಂಗ್ ಮುಗಿದ ಬಳಿಕ ನನ್ನ ಜೊತೆ ಅವರು ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ನಮ್ಮಿಬ್ಬರ ಮಧ್ಯೆ ಜಗಳ ನಡೆಯುವಂತಾಯಿತು” ಎಂದು ಶೆರ್ಲಿನ್ ಚೋಪ್ರಾ ತಿಳಿಸಿದ್ದಾಳೆ.
“ನಾನು ಬೇಡ ಎಂದರೂ ಬಲವಂತವಾಗಿ ಮುತ್ತಿಡಲು ಮುಂದಾದರು. ನನಗೆ ಭಯವಾಗಿ ಹೀಗೆಲ್ಲ ವರ್ತಿಸದಂತೆ ಕೇಳಿಕೊಂಡೆ. ಆನಂತರ ಅವರನ್ನು ತಳ್ಳಿ ಅಲ್ಲಿಂದ ಬಚಾವ್ ಆದೆ. ಕೊನೆಗೆ ಅವರಿಂದ ತಪ್ಪಿಸಿಕೊಳ್ಳಲು ಶೌಚಾಲಯದಲ್ಲಿ ಅಡಗಿ ಕುಳಿತೆ” ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾಳೆ.
“ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿ ಇಲ್ಲ” : ಪತ್ನಿ ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿ ಇಲ್ಲ. ಹಾಗಾಗಿ ನಾನು ಯಾವಾಗಲೂ ಒತ್ತಡದಲ್ಲೇ ಇರುವಂತಾಗಿದೆ ಎಂದು ಆರೋಪಿ ರಾಜ್ ಕುಂದ್ರಾ ಸ್ವತಃ ನಟಿ ಶೆರ್ಲಿನ್ ಚೋಪ್ರಾ ಬಳಿ ಹೇಳಿಕೊಂಡಿದ್ದ ಎಂಬ ವಿಚಾರ ಈಗ ಬಹಿರಂಗವಾಗಿದ್ದು, ಭಾರೀ ಸದ್ದು ಮಾಡುತ್ತಿದೆ.
ಕುಂದ್ರಾ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು ತಾನೇ ಎಂದು ನಟಿ ಶೆರ್ಲಿನ್ ಹೇಳುತ್ತಿದ್ದಾರೆ. ಆದರೆ ರಾಜ್ ಕುಂದ್ರಾ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ನಟಿ ಶೆರ್ಲಿನ್ ಚೋಪ್ರಾಗೂ ಬಂಧನದ ಭೀತಿ ಕಾಡುತ್ತಿದೆ. ಹೀಗಾಗಿ ಈಕೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾಳೆ.
- RAMYA
No Comment! Be the first one.