ದರ್ಶನ್ ಅವರ ಯಾವುದೇ ನಿರ್ಧಾರದ ಹಿಂದೆ ಸಮಾಜಮುಖಿ ಚಿಂತನೆಗಳಿರುತ್ತವೆ. ಈ ಹಿಂದೆ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಿಂದ ಬಂದ ಹಣವನ್ನು ರೈತರಿಗೆ ನೀಡಿದ್ದರು. ರೈತರ ಪ್ರತಿಯೊಂದು ಸಮಸ್ಯೆಗಳಿಗೂ ಪ್ರತ್ಯಕ್ಷವಾಗಿಯೇ ನೆರವಾಗುತ್ತಾ ಬಂದಿದ್ದಾರೆ. ಈಬಾರಿ ರಾಮರಾಜ್ ಸಂಸ್ಥೆಯ ರಾಯಭಾರಿಯಾಗುವ ಮುಖಾಂತರ ನೇಕಾರರ ಸಂಕಷ್ಟಕ್ಕೆ ಪರೋಕ್ಷವಾಗಿ ಮಿಡಿದಿದ್ದಾರೆ ಎನ್ನಬಹುದು.
ಪಾರಂಪರಿಕ ಶೈಲಿಯ ಉಡುಗೆಗಳನ್ನು ತಯಾರಿಸಿ, ವ್ಯಾಪಾರ ಮಾಡುತ್ತಿರುವ ಕಂಪೆನಿಗಳಲ್ಲಿ ರಾಮರಾಜ್ ಮುಂಚೂಣಿಯಲ್ಲಿದೆ. ಭಾರತದ ಬಹುತೇಕ ಸೂಪರ್ ಸ್ಟಾರ್‌ಗಳು ರಾಮರಾಜ್ ರಾಯಭಾರಿಗಳಾಗಿದ್ದಾರೆ. ಈಗ ಕರ್ನಾಟಕದ ಪ್ರಚಾರ ರಾಯಭಾರಿಯಾಗಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ನೇಮಕಗೊಂಡಿದ್ದಾರೆ. ಅಲ್ಲಿಗೆ ಉನ್ನತ ಗುಣಮಟ್ಟದ ಹತ್ತಿಯಿಂದ ತಯಾರಾಗುವ ರಾಮರಾಜ್ ಪಂಚೆ, ಶರ್ಟು ಮತ್ತು ಧೋತಿಗಳಿಗೆ ಕನ್ನಡ ನೆಲದಲ್ಲಿ ಬೇರೆಯದ್ದೇ ಲೆವೆಲ್ಲಿನ ಖದರ್ರು ಗಿಟ್ಟುವುದು ಗ್ಯಾರೆಂಟಿಯಾಗಿದೆ.
ಈ ಹಿಂದೆ ಭೂಪತಿ, ಬೃಂದಾವನ, ಚಕ್ರವರ್ತಿ, ತಾರಕ್ ಮತ್ತು ಇತ್ತೀಚಿನ ಒಡೆಯ ಚಿತ್ರದ ತನಕ ಅನೇಕ ಸಿನಿಮಾಗಳಲ್ಲಿ ದರ್ಶನ್ ಬಿಳೀ ಪಂಚೆ, ಶರ್ಟುಗಳನ್ನು ತೊಟ್ಟು ನಟಿಸಿದ್ದಾರೆ. ಈ ಧಿರಿಸು ದಾಸನಿಗೆ ಹೇಳಿಮಾಡಿಸಿದಂತಿದೆ ಅನ್ನೋದು ಸ್ವತಃ ಡಿ ಬಾಸ್ ಅಭಿಮಾನಿಗಳ ಅಭಿಪ್ರಾಯ. ತಾರಕ್ ಮತ್ತು ಒಡೆಯ ಸಿನಿಮಾಗಳ ಫಸ್ಟ್ ಲುಕ್ ಫೋಟೋಗಳಲ್ಲಿ ಕೂಡಾ ದರ್ಶನ್ ಬಿಳೀ ಬಣ್ಣದ ಸಾಂಪ್ರದಾಯಿಕ ಬಟ್ಟೆಯಲ್ಲೇ ಕಾಣಿಸಿಕೊಂಡಿದ್ದರು. ಈಗ ಖುದ್ದು ರಾಮ್ ರಾಜ್ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿದ್ದಾರೆ.
ಇದು ಬರೀ ವ್ಯಾಪಾರ ವಹಿವಾಟು ನಡೆಸುವ, ವಿದೇಶಿ ಸರಕನ್ನು ಬಿಕರಿ ಮಾಡುವ ಸಂಸ್ಥೆಯಾಗಿದ್ದರೆ ಬಹುಶಃ ದರ್ಶನ್ ಪ್ರಚಾರ ರಾಯಭಾರಿಯಾಗಲು ಒಪ್ಪುತ್ತಿದ್ದರೋ ಇಲ್ಲವೋ? ಆದರೆ ರಾಮರಾಜ್ ಬ್ರ್ಯಾಂಡ್ ಭಾರತದ ನೇಕಾರರು ತಯಾರಿಸಿದ ಬಟ್ಟೆಯನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸುತ್ತಿದೆ. ಆ ಮೂಲಕ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗುತ್ತಿದೆ. ದರ್ಶನ್ ಕೂಡಾ ಇಂಥದ್ದೊದು ಸಂಸ್ಥೆಯೊಂದಿಗೆ ಕೈ ಜೋಡಿಸಿರುವುದು ನೇಕಾರರಿಗೂ ವರವಾಗಲಿದೆ. ದರ್ಶನ್ ಅವರ ಯಾವುದೇ ನಿರ್ಧಾರದ ಹಿಂದೆ ಸಮಾಜಮುಖಿ ಚಿಂತನೆಗಳಿರುತ್ತವೆ. ಈ ಹಿಂದೆ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಿಂದ ಬಂದ ಹಣವನ್ನು ರೈತರಿಗೆ ನೀಡಿದ್ದರು. ಯಜಮಾನ ದರ್ಶನ್ ರೈತರ ಪ್ರತಿಯೊಂದು ಸಮಸ್ಯೆಗಳಿಗೂ ಪ್ರತ್ಯಕ್ಷವಾಗಿಯೇ ನೆರವಾಗುತ್ತಾ ಬಂದಿದ್ದಾರೆ. ಈಬಾರಿ ರಾಮರಾಜ್ ಸಂಸ್ಥೆಯ ರಾಯಭಾರಿಯಾಗುವ ಮುಖಾಂತರ ನೇಕಾರರ ಸಂಕಷ್ಟಕ್ಕೆ ಪರೋಕ್ಷವಾಗಿ ಮಿಡಿದಿದ್ದಾರೆ ಎನ್ನಬಹುದು. ಇದೆಲ್ಲದರ ಜೊತೆಗೆ ದರ್ಶನ್ ಅವರಿಗೆ ಈಗಿರುವ ಜನಪ್ರಿಯತೆ ರಾಮರಾಜ್ ಬಟ್ಟೆಗೆ ಮೆರುಗು ನೀಡುವುದಂತೂ ನಿಜ.
Leave a Reply
You must be logged in to post a comment.