ರಿಯಾಲಿಟಿ ಶೋಗಳು, ಕಿರುತೆರೆ ಕಾರ್ಯಕ್ರಮಗಳ ಜತೆ ಜತೆಗೆ ಆಗಾಗ ಥಿಯೇಟರ್ ಗೆ ಬಂದು ಹೋಗುವ ನಟರಲ್ಲಿ ರಮೇಶ್ ಅರವಿಂದ್ ಒಬ್ಬರು. ಸದ್ಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಅವರು ಸದ್ಯದಲ್ಲೇ ಬಟರ್ ಪ್ಲೈ ಕೂಡಾ ಹಾರಿಸಲಿದ್ದಾರೆ. ಅದಕ್ಕೂ ಮುನ್ನವೇ ಮತ್ತೊಂದು ಸಿನಿಮಾ ನಿರ್ದೇಶನ ಮಾಡುವುದಾಗಿ ತಿಳಿಸಿರುವ ರಮೇಶ್ ಅರವಿಂದ್ ತಮ್ಮ ಚಿತ್ರಕ್ಕೆ ನಾಯಕಿಯನ್ನು ಅನೌನ್ಸ್ ಮಾಡಿದ್ದಾರೆ. ಹೌದು ಈ ಹಿಂದೆ ಪುಷ್ಬಕ ವಿಮಾನ ಸಿನಿಮಾದಲ್ಲಿ ಮಗಳಾಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಅವರೇ ರಮೇಶ್ ಮುಂದಿನ ಚಿತ್ರದ ನಾಯಕಿಯಾಗಲಿದ್ದಾರಂತೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅದರಲ್ಲಿ ಒಬ್ಬರು ರಚಿತಾ ರಾಮ್ ಎನ್ನುವುದು ಫಿಕ್ಸ್ ಆಗಿದ್ದು, ಮತ್ತೋರ್ವ ನಾಯಕಿಯ ಹುಡುಕಾಟದಲ್ಲಿ ರಮೇಶ್ ಅರವಿಂದ್ ಇದ್ದಾರೆ. ಚಿತ್ರದಲ್ಲಿ ನಿರ್ದೇಶನದ ಜತೆಗೆ ಅಭಿನಯ ಮಾಡುತ್ತಿರುವುದು ವಿಶೇಷವಾಗಿದೆ.
ಬಾಲಿವುಡ್ ನ ಕ್ವೀನ್ ಕನ್ನಡಕ್ಕೆ ಬಟರ್ ಫ್ಲೈ ಆಗಿ ಬರಲಿದೆ. ರಮೇಶ್ ಅರವಿಂದ್ ಅಭಿನಯದ ಭೈರಾದೇವಿ ಶೂಟಿಂಗ್ ಈಗಾಗಲೇ ಮುಗಿದಿದೆ. ಸದ್ಯ ಶಿವಾಜಿ ಸೂರತ್ಕಲ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕೂಡ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಇದರ ನಡುವೆಯು ಹೊಸ ಸಿನಿಮಾ ಪ್ಲಾನ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ರಚಿತಾ ರಾಮ್ ಸದ್ಯ ಶಿವರಾಜ್ ಕುಮಾರ್ ಅಭಿನಯದ ಆನಂದ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾದಲ್ಲೂ ನಾಯಕಿಯಾಗಿ ಮಿಂಚಿದ್ದಾರೆ. ಐ ಲವ್ ಯೂ ಚಿತ್ರದ ರಿಲೀಸ್ ಗೆ ಕಾಯುತ್ತಿದ್ದಾರೆ. ಇನ್ನು ‘ರುಸ್ತುಂ’ ಚಿತ್ರದಲ್ಲಿ ರಚಿತಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಚಿತಾ ಬಳಿ ಇರುವ ಪ್ರಾಜೆಕ್ಟ್ ಮುಗಿಯುತ್ತಿದಂತೆ ರಮೇಶ್ ಅರವಿಂದ್ ಅವರ ಚಿತ್ರಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ.
No Comment! Be the first one.