ಗಾಯಕ ರಾಜೇಶ್ ಕೃಷ್ಣನ್ ಈ ಹಿಂದೆ ಮೂರು ಮದುವೆಯಾಗಿ ದಾಖಲೆ ನಿರ್ಮಿಸಿದ್ದವರು. ಅವರ ಕೊನೆಯ ಪತ್ನಿ ರಮ್ಯಾ ವಸಿಷ್ಠ ಎಲ್ಲಿ ಹೋದರು? ಈಗೇನ್ ಮಾಡುತ್ತಿದ್ದಾರೆ ಅನ್ನೋ ಕುತೂಹಲ ಸಾಕಷ್ಟು ಜನರದ್ದು!
ರಮ್ಯಾ ತೀರಾ ಸಣ್ಣ ವಯಸ್ಸಿನಲ್ಲೇ ಗಾಯಕಿಯಾಗಿದ್ದ ಅವರು ನಂತರ ಕಿರುತೆರೆ ನಟಿಯಾಗಿ, ಕಾರ್ಯಕ್ರಮ ನಿರೂಪಕಿ, ಸಂಗೀತ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ ಹೆಸರು ಮಾಡಿದ್ದಾರೆ. ಈಗ ರಮ್ಯಾ ವಸಿಷ್ಠ ಬರಹಗಾರ್ತಿಯಾಗಿಯೂ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಅದೂ ಮೂರ್ಮೂರು ಭಾಷೆಗಳಲ್ಲಿ ಅವರು ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ವಿಭೂತಿ, ಉರ್ದು ಭಾಷೆಯಲ್ಲಿ ಸಲ್ಮಾತಾಜ್ ಮತ್ತು ಇಂಗ್ಲಿಷಿನಲ್ಲಿ ಆರ್.ವಿ. ಎಂಬ ಕಾವ್ಯನಾಮದಲ್ಲಿ ಪದ್ಯ, ಗದ್ಯಗಳನ್ನು ಬರೆಯುತ್ತಿದ್ದಾರಂತೆ ರಮ್ಯಾ ವಸಿಷ್ಠ.
ಸಾಕಷ್ಟು ಜನ ಪಂಡಿತರು ಮತ್ತು ವಿದುಶಿಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತು ಗಾಯನ ವೃತ್ತಿ ಆರಂಭಿಸಿ ನಂತರ ನಟನೆಯಲ್ಲಿ ಬ್ಯುಸಿಯಾಗಿದ್ದಾಗ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ವರಿಸಿದ್ದ ರಮ್ಯಾ ವಸಿಷ್ಠ ವೈವಾಹಿಕ ಸಂಬಂಧ ಕೆಲವೇ ದಿನಗಳಲ್ಲಿ ಮುರಿದುಬಿದ್ದಿತ್ತು. ಇದರಿಂದ ವಿಚಲಿತರಾಗದ ರಮ್ಯಾ ವಸಿಷ್ಠ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿರುವುದು ಅನೇಕ ಹೆಣ್ಣುಮಕ್ಕಳಿಗೆ ಮಾದರಿಯಾಗಿದೆ.