ಇಡೀ ಭಾರತದಾದ್ಯಂತ ಸಂಚಲನ ಸೃಷ್ಟಿಸಿದ್ದ ತೆಲುಗು ಸಿನಿಮಾ ಬಾಹುಬಲಿ. ಇನ್ನು ಬಾಹುಬಲಿ ಮತ್ತು ಬಲ್ಲಾಳ ದೇವನ ಪಾತ್ರವಂತೂ ನೋಡುಗನೂ ನೆನಪಿಟ್ಟುಕೊಳ‍್ಳುವಷ್ಟರ ಮಟ್ಟಿಗೆ ಕನೆಕ್ಟ್ ಕೂಡ ಆಗಿತ್ತು. ಬಾಹುಬಲಿ ಪಾತ್ರವನ್ನು ಪ್ರಭಾಸ್ ಹಾಗೂ ಬಲ್ಲಾಳದೇವನ ಪಾತ್ರವನ್ನು ರಾಣಾ ದಗ್ಗುಬಾಟಿ ನಿರ್ವಹಿಸಿದ್ದರು. ಪ್ರಭಾಸ್ ಸೇರಿದಂತೆ ಬಹಳಷ್ಟು ಮಂದಿಗೆ ಬಾಹುಬಲಿ ಕಮ್ ಬ್ಯಾಕ್ ಸಿನಿಮಾ ಕೂಡ ಆಗಿತ್ತು. ಅದಾದಮೇಲೆ ಪ್ರಭಾಸ್ ಸಾಹೋ ಚಿತ್ರದಲ್ಲಿ ತೊಡಗಿಕೊಂಡರೆ ರಾಣಾ ದಗ್ಗುಪಾಟಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ನಿರ್ಮಾಣದಲ್ಲಿಯೂ ತೊಡಗಿಕೊಳ್ಳಲು ಹವಣಿಸುತ್ತಿದ್ದ ರಾಣ ದಗ್ಗುಬಾಟಿಗೆ ಸಂಬಂಧಿಸಿದ ಸುದ್ದಿಯೊಂದು ಇತ್ತೀಚಿಗೆ ವೈರಲ್ ಆಗಿದ್ದು, ಬಲ್ಲಾಳದೇವನ ಅಭಿಮಾನಿಗಳು ಶಾಕ್ ಆಗುವಂತೆ ಮಾಡಿದೆ.

ಯೆಸ್.. ರಾಣಾ ದಗ್ಗುಬಾಟಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬ ಸಮೇತರಾಗಿ ಯು.ಎಸ್.ಎಗೆ ಹಾರಿದ್ದಾರಂತೆ. ಸಾಕಷ್ಟು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಣಾ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರಂತೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಿಡ್ನಿ ವೈಫಲ್ಯದಲ್ಲಿರುವ ರಾಣಾಗೆ ಅವರ ತಾಯಿಯೇ ಕಿಡ್ನಿ ದಾನ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದ್ದು, ಈ ಬಗ್ಗೆ ರಾಣಾ ಆಗಲಿ ಅವರ ಕುಟುಂಬದವರಾಗಲಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ವಿರಾಟ ಪರ್ವಂ ಸಿನಿಮಾದಲ್ಲಿ ತೊಡಗಿಕೊಂಡಿದ್ದ ರಾಣಾ ಅನೇಕ ದಿನಗಳಿಂದ ಶೂಟಿಂಗ್ ಗೆ ತೆರಳದಿರುವುದೂ ಈ ಎಲ್ಲ ಗಾಳಿಸುದ್ದಿಗೆ ಇಂಬು ಕೊಡುವಂತಿದೆ.

CG ARUN

ಕಿಸ್ ಬೆಟ್ಟೇಗೌಡ v/s ಚಿಕ್ಕಬೋರಮ್ಮ ಹಾಡಿಗೆ ಪವರ್ ಸ್ಟಾರ್ ದನಿ!

Previous article

ಅನೌನ್ಸ್ ಆಯ್ತು ಸಾಹೋ ರಿಲೀಸ್ ಡೇಟ್!

Next article

You may also like

Comments

Leave a reply

Your email address will not be published. Required fields are marked *