ಮಿಸ್ಟರ್ ಐರಾವತ ಚಿತ್ರದ ನಂತರ ಎ ಪಿ ಅರ್ಜುನ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಕಿಸ್. ಈ ಚಿತ್ರದಲ್ಲಿ ಅರ್ಜುನ್ ಮತ್ತು ಶ್ರೀಲೀಲಾ ಜೋಡಿ ನಟಿಸಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕಿಸ್ ನ ‘ಶೀಲಾ ಸುಶೀಲಾ..’ ಹಾಗೂ ‘ನೀನೆ ಮೊದಲು ನೀನೆ ಕೊನೆ..’ ಹಾಡುಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಸದ್ಯದಲ್ಲಿಯೇ ಬೆಟ್ಟೇಗೌಡ v/s ಚಿಕ್ಕಬೋರಮ್ಮ ಎಂಬ ಹಾಡು ರಿಲೀಸ್ ಆಗಲಿದೆ. ವಿಶೇಷವೆಂದರೆ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಈ ಹಾಡು ಜುಲೈ 26 ರಂದು ಸಂಜೆ 5 ಗಂಟೆ 1 ನಿಮಿಷಕ್ಕೆ ಡಿ ಬೀಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
No Comment! Be the first one.