ಮನು ಕೆ. ಶೆಟ್ಟಹಳ್ಳಿ ಅಪ್ಪಟ ದೇಸೀ ಪ್ರತಿಭೆ. ಈಗಾಗಲೇ ಸಂಭಾಷಣೆಕಾರರಾಗಿ, ಉತ್ತಮ ಚಿತ್ರಕತೆ ಬರೆಯುವುದರಲ್ಲಿ ಹೆಸರು ಮಾಡಿರುವ ಮನು ಈಗ ತೆರೆಗೆ ಬರುತ್ತಿರುವ ರಣಹೇಡಿ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದಾರೆ. ರೈತರ ಬವಣೆಗಳನ್ನೇ ಕಥಾವಸ್ತುವಾಗಿಸಿ ರಣಹೇಡಿ ಚಿತ್ರವನ್ನು ರೂಪಿಸಿದ್ದಾರೆ. ಈ ಚಿತ್ರದ ವಿಶೇಷತೆ ಏನು? ಯಾವ ಕಾರಣಕ್ಕಾಗಿ ಜನ ಈ ಸಿನಿಮಾವನ್ನು ನೋಡಲೇ ಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ವತಃ ಮನು ಇಲ್ಲಿ ಉತ್ತರಿಸಿದ್ದಾರೆ…
ಈ ಚಿತ್ರಕ್ಕೆ ನಿರ್ಮಾಪಕರ ಸಹಕಾರದ ಬಗ್ಗೆ ತಿಳಿಸಿ.
ನಿರ್ಮಾಪಕರು ಇಡೀ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ನನಗೇ ನೀಡಿದ್ದರು. ನನಗೆ ಏನು ಇಡೀ ಸಿನಿಮಾವನ್ನ ಕಟ್ಟಿಕೊಡಬೇಕೆಂದಿತ್ತೋ ಅಷ್ಟನ್ನೂ ಪ್ರಾಮಾಣಿವಾಗಿ ಕಟ್ಟಿಕೊಟ್ಟಿದ್ದೇನೆ. ಈ ಪ್ರಾಮಾಣಿಕತೆಯನ್ನು ನೋಡಿ ಅವರು ನನಗೆ ಎಲ್ಲೂ ಡಿಸ್ಟರ್ಬ್ ಮಾಡಲಿಲ್ಲ. ಈ ಸಿನಿಮಾದ ಒಂದು ಹಾಡಿಗೆ ಕೊರಿಯೊಗ್ರಾಫ್ ಸಹ ನಾನೇ ಮಾಡಿದ್ದೇನೆ. ಕಾರಣ ಏನೆಂದರೆ ಈ ಚಿತ್ರದ ಒಂದು ಹಾಡು ಇಡೀ ಕಥೆಯನ್ನೇ ಹೇಳುತ್ತದೆ. ಈ ಹಾಡು ಹೇಗೆ ಮೂಡಿಬರಬೇಕು ಅಂತ ನನ್ನ ಮನಸ್ಸಿನಲ್ಲಿತ್ತೋ ಹಾಗೇ ಹಾಡನ್ನು ಚಿತ್ರೀಕರಿಸಿದ್ದೇನೆ. ಇದಕ್ಕೆ ನಿರ್ಮಾಪಕರು ಸಂಪೂರ್ಣ ಸಹಕಾರ ನೀಡಿದರು.
ಈ ಚಿತ್ರವನ್ನು ಜನ ಯಾವ ಕಾರಣಕ್ಕಾಗಿ ನೋಡಬೇಕೆಂದು ಬಯಸುತ್ತೀರಿ?
ಈ ಚಿತ್ರ ಅನ್ನದ ಮೌಲ್ಯದ ಮೇಲೆ ಮಾಡಿರುವಂತಹ ಚಿತ್ರ. ಈ ಕಾರಣಕ್ಕೋಸ್ಕರ ಸಿನಿಮಾ ಜನ ಸಿನಿಮಾ ನೋಡಬೇಕೆಂದು ಬಯಸುತ್ತೇನೆ.
ಈ ಸಿನಿಮಾದ ಪಾತ್ರ ವರ್ಗ ಮತ್ತು ತಂತ್ರಜ್ಞರ ಪರಿಚಯ ನೀಡಿ.
ಸಿನಿಮಾದ ನಾಯಕನಟನಾಗಿ ಕರ್ಣಕುಮಾರ್ ಹಾಗೂ ನಾಯಕ ನಟಿಯಾಗಿ ಐಶ್ವರ್ಯರಾವ್, ತೆಲುಗಿನ ಶಫಿ, ರಾಜಾಹುಲಿ ಗಿರಿ, ಅಚ್ಯುತ್ ಕುಮಾರ್, ಕ್ಯಾಮೆರಮನ್ ಅವರು ನನ್ನಕ್ಲಾಸ್ ಮೆಟ್, ನಾಗೇಂದ್ರ ಅರಸ್ ಅವರ ಎಡಿಟಿಂಗ್, ವಿ ಮನೋಹರ್‌ಅವರ ಸಂಗೀತ, ಲಯನ್‌ಗಂಗರಾಜು ಮತ್ತು ನರಸಿಂಹ ಅವರು ಫೈಟ್ ಮಾಡಿದ್ದಾರೆ.
ಈ ಸಿನಿಮಾದಕಥೆ ನಿಮ್ಮ ಮನಸ್ಸಿನಲ್ಲಿ ಹುಟ್ಟಿದ್ದು ಹೇಗೆ ಯಾವಾಗ?
ಸಿನಿಮಾಕಥೆ ಹುಟ್ಟಿ ೩ ವರ್ಷಗಳಾಗಿರಬಹುದು. ಮೂಲತಃ ಒಬ್ಬ ರೈತನಾಗಿ ಚಿಕ್ಕಂದಿನಿಂದಲೂ ರೈತರ ಸಂಕಷ್ಟಗಳನ್ನ ಅರಿತಿದ್ದೆ. ನಾನು ಒಬ್ಬ ಬರಹಗಾರನಾದ ನಂತರ ಇದನ್ನ ಕಥಾರೂಪವನ್ನಾಗಿ ಮಾಡಿ ಸಿನಿಮಾವಾಗಿ ರೂಪಾಂತರಗೊಂಡಿತು.
ಸಂಭಾಷಣಾಕಾರರಾಗಿ ಈಗಾಗಲೇ ಹೆಸರು ಮಾಡಿದ್ದೀರಿ.ಈ ಚಿತ್ರದ ಸಂಭಾಷಣೆಕುರಿತು ತಿಳಿಸಿ.
ಕಮರ್ಷಿಯಲ್ ಸಿನಿಮಾಗಳಿಗೆ ಸಂಭಾಷಣಾಕಾರನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ಪ್ರತಿ ಮಾತೂ ಸಹ ಒಂದು ವಿಷಯವನ್ನು ಹೇಳುತ್ತದೆ. ಗಂಭೀರವಾಗಿರಬಹುದು ಅಥವಾ ಹಾಸ್ಯವಾಗಿರಬಹುದು ಕಥೆಗೆ ಪೂರಕವಾಗಿ ಸಂಭಾಷಣೆಯನ್ನು ಬರೆದಿದ್ದೇನೆ. ಯಾವ ಆಡಂಬರವೂ ಇಲ್ಲದೆ ದಿನ ನಿತ್ಯ ಬಳಸುವಂತಹ ಭಾಷೆಯನ್ನು ಈ ಚಿತ್ರದ ಸಂಭಾಷಣೆಯಲ್ಲಿ ಬಳಸಿದ್ದೇನೆ.
ಮಂಡ್ಯ ಮತ್ತು ಮೈಸೂರು ಭಾಗದ ಹೊರತಾಗಿ ಬೇರೆ ಭಾಗದಜನರಿಗೆ ಈ ಚಿತ್ರ ಹೇಗೆ ಪರಿಣಾಮ ಬೀರುತ್ತದೆ?
ಇದು ರೈತಾಪಿ ಜನಗಳ ಜೀವನಚಿತ್ರಣವೂ ಹೌದು, ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿರುವ ಸಮಸ್ಯೆಗಳೂ ಹೌದು. ಎಲ್ಲರಿಗೂ ಮೂಲ ರೈತ, ನಮ್ಮ ಹಿಂದಿನ ತಲೆಮಾರುಗಳು ರೈತರಾಗಿದ್ದವರು. ಪ್ರತಿ ಮನೆಗೂ ಪ್ರತಿ ಮನುಷ್ಯನಿಗೂ ಸಂಬಂಧಿದ ವಿಷಯ.
ಈ ಚಿತ್ರದ ಚಿತ್ರೀಕರಣದ ಸಂದರ್ಭವನ್ನು ತಿಳಿಸಿ.
ಈ ಚಿತ್ರವನ್ನು ಮಂಡ್ಯದ ಸುತ್ತ ಮುತ್ತದೇವಸ್ಥಾನಗಳು ಕೆರೆ-ಕಟ್ಟೆಗಳಲ್ಲಿ ಚಿತ್ರೀಕರಿಸಿದ್ದೇವೆ. ಬಳ್ಳಾರಿಯ ಒಂದುಕಲ್ಲು ಮನೆಯಲ್ಲಿಒಂದಷ್ಟು ಶೂಟಿಂಗ್ ಮಾಡಿದೆವು. ಅಲ್ಲಿನಜನ ಬಹಳ ಸಪೋರ್ಟ್ ನೀಡಿದರು.ಈ ಸಿನಿಮಾ ಮೂಲಕ ರೈತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದೇನೆ. ಈಗಿನ ಯುವ ಪೀಳಿಗೆಯವರು ವಿದ್ಯಾಭ್ಯಾಸದ ನಂತರ ವ್ಯವಸಾಯವನ್ನು ಬಿಟ್ಟು ನಗರಗಳಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಲಗದ್ದೆಗಳಲ್ಲಿ ೫೦ರ ವಯೋಮಾನದವರು ಮಾತ್ರ ಕೆಲಸ ಮಾಡುವಂತಾಗಿದೆ, ಯುವ ಪೀಳಿಗೆಯವರು ಹೊಲಗದ್ದೆಗಳಲ್ಲಿ ಕೆಲಸ ಮಾಡಲು ನಿರಾಕಿಸುತ್ತಿದ್ದಾರೆ. ಇನ್ನು ೧೫-೨೦ ವರ್ಷಗಳ ನಂತರ ರೈತರೇ ಇರುವುದಿಲ್ಲವಂತಾಗಿದೆ. ದುಡಿದು ಅನ್ನತಿನ್ನಬೇಕು ಅನ್ನೋ ಮಾನಸಿಕ ಸ್ಥಿತಿ ಕಡಿಮೆಯಾಗುತ್ತಿದೆ. ಇದನ್ನು ತಡೆಯೋ ಒಂದು ಪ್ರಯತ್ನವನ್ನ ಈ ಸಿನಿಮಾ ಮೂಲಕ ಮಾಡಿದ್ದೇನೆ.
CG ARUN

ನಾನ್ಸೆನ್ಸ್ ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ!

Previous article

ಮಂಗಳವಾರ ರಜಾದಿನ ಅಂದವರು ಹಾಡಿನಲ್ಲಿ ಕೂಳೆ ಕೊಟ್ಟರು!

Next article

You may also like

Comments

Leave a reply

Your email address will not be published. Required fields are marked *