ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ನಿನಲ್ಲಿ ಮೂಡಿಬರುತ್ತಿರುವ ಸಿನಿಮಾ ರಾಬರ್ಟ್. ಈಗಾಗಲೇ ಬಜೆಟ್ಟು, ಪೋಸ್ಟರು, ಶೂಟಿಂಗ್ ರೂಲ್ಸ್ ಗಳಿಂದ ಸಿಕ್ಕಾಪಟ್ಟೇ ಸೌಂಡೇನೋ ಮಾಡುತ್ತಿದೆ. ಹೊಸ ಸುದ್ದಿ ಏನಂದ್ರೆ ರಾಬರ್ಟ್ ಸಿನಿಮಾದಲ್ಲಿ ಮರಿ ಟೈಗರ್ ತಮ್ಮ ಕುಚಿಕು ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೌದು ವಿನೋದ್ ಪ್ರಭಾಕರ್ ನೆಗೆಟೀವ್ ಶೇಡ್ ನ ಪಾತ್ರವೊಂದಕ್ಕೆ ಬಣ್ಣ ಹಚ್ಚುವುದು ಕನ್ ಫರ್ಮ್ ಆಗಿದೆ.
https://www.youtube.com/watch?v=nixTs6GiwOU
ಇದೊಂದು ಪಕ್ಕಾ ಮಾಸ್ ಎಂಟಟೈನ್ ಸಿನಿಮಾವಾಗಿದ್ದು ಹತ್ತು ಹಲವು ಗೆಟಪ್ನಲ್ಲಿ ದರ್ಶನ್ ಮಿಂಚಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ತಾರಾಗಣದ ಬಗ್ಗೆ ಒಂದೊಂದೆ ಹೆಸರುಗಳು ರಿವೀಲ್ ಆಗುತ್ತಿವೆ. ಈ ಹಿಂದೆ ಟಾಲಿವುಡ್ ನಟ ಜಗಪತಿ ಬಾಬು ರಾಬರ್ಟ್ ಅಡ್ಡವನ್ನು ಸೇರಿಕೊಂಡಿದ್ದರು. ನವಗ್ರಹ ಸಿನಿಮಾದ ನಂತರ ಡಿ ಬಾಸ್ ದರ್ಶನ್ ಹಾಗೂ ಮರಿ ಟೈಗರ್ ರಾಬರ್ಟ್ ಮೂಲಕ ಮತ್ತೆ ಒಂದಾಗಿರೋದು ಅಭಿಮಾನಿಗಳ ಸಂತಸಕ್ಕೂ ಕಾರಣವಾಗಿದೆ.
No Comment! Be the first one.