ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ಅಮರ್. ಇದೇ ಮೇ 31ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಟ್ರೇಲರ್ ಮತ್ತು ಆಡಿಯೋ ಮೂಲಕ ಈಗಾಗಲೇ ಸಿನಿರಸಿಕರ ಮನಗೆಲ್ಲುವಲ್ಲಿ ಅಮರ್ ಯಶಸ್ವಿಯೂ ಆಗಿದೆ. ಅಂಬಿ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಲೂ ಇದ್ದಾರೆ. ಕಾಮನ್ನಾಗಿ ಸಿನಿಮಾ ರಿಲೀಸ್ ಗೂ ಮುನ್ನವೇ ಆನ್ ಲೈನ್ ನಲ್ಲೇ ಟಿಕೇಟ್ ಸೇಲಿಂಗ್ ಸ್ಟಾರ್ಟ್ ಆಗುವಂತದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೇ ಪ್ರಮುಖ ಚಿತ್ರಗಳೆಂಬ ರೀಸನ್ ಗೆ ಚಿತ್ರದ ಮೊದಲ ಟಿಕೇಟ್ ಗಳನ್ನು ಕೊಂಡು ಸುದ್ದಿಯಾಗುವ ಹೊಸದೊಂದು ಹವ್ಯಾಸ ಈಗೀಗ ಹೆಚ್ಚಾಗುತ್ತಿದ್ದು, ಅಮರ್ ಸಿನಿಮಾ ಮೊದಲ ಟಿಕೇಟ್ ಕೂಡ ಸೇಲಾಗಿದೆ. ಅದೂ ಬರೋಬ್ಬರಿ ಒಂದು ಲಕ್ಷ ರುಪಾಯಿಗೆ.
ಹೌದು ಅಂಬರೀಶ್ ಅವರ ಕಟ್ಟಾ ಅಭಿಮಾನಿಯಾಗಿರುವ ದಾವಣಗೆರೆ ಮೂಲಕ ಮಂಜುನಾಥ್ ಯಂಗ್ ರೆಬರ್ ಸ್ಟಾರ್ ನ ಫಸ್ಟ್ ಡೇ ಫಸ್ಟ್ ಶೋ ನೋಡಲು ನಿರ್ಧರಿಸಿದ್ದರಂತೆ. ಅಲ್ಲದೇ, ಚಿತ್ರದ ಮೊದಲ ಟಿಕೆಟ್ ತಾವೇ ಖರೀದಿಸಲು ಮುಂದಾಗಿರೋ ಅವರು, ಅದಕ್ಕಾಗಿ ಒಂದು ಲಕ್ಷ ರೂಪಾಯಿ ಚೆಕ್ ನ್ನು ನಿರ್ಮಾಪಕ ಸಂದೇಶ ನಾಗರಾಜ್ ಅವರಿಗೆ ನೀಡಿದ್ದಾರೆ. ಅಮರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ನಾಗಶೇಖರ್ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸಂದೇಶ್ ನಾಗರಾಜ್ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇರುವ ‘ಅಮರ್’ ಈಗಾಗಲೆ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ನಿರೀಕ್ಷೆ ಎಷ್ಟಮಟ್ಟಿಗೆ ನಿಜವಾಗುವುದೆಂಬುದನ್ನು ಕಾದು ನೋಡಬೇಕು.
No Comment! Be the first one.