ರೌಡಿ ಬೇಬಿ ಖ್ಯಾತಿಯ ಮಲೆಯಾಳಂ ನಟಿ ಕೆಂಪು ಗಲ್ಲದ ಸುಂದರಿ ಸಾಯಿ ಪಲ್ಲವಿ ಬರೋಬ್ಬರಿ ಎರಡು ಕೋಟಿ ರುಪಾಯಿ ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಅಲ್ಲದೇ ರಿಜೆಕ್ಟ್ ಮಾಡಿದ್ದಕ್ಕೆ ಕಾರಣವನ್ನು ನೀಡಿದ್ದಾರೆ.
ಸಾಯಿ ಪಲ್ಲವಿಯ ಪ್ರಕಾರ ಹುಟ್ಟಿನಿಂದ ನಾವು ಹೊಂದಿರಬಹುದಾದ ಬಣ್ಣವನ್ನೇ ಮನಃಪೂರ್ವಕವಾಗಿ ಒಪ್ಪಬೇಕಾಗಿರುತ್ತದೆ. ಅದನ್ನು ಬಿಟ್ಟು ಆರ್ಟಿಫಿಷಿಯಲ್ ಸೌಂದರ್ಯಕ್ಕೆ ಎಂದಿಗೂ ಯಾರೂ ಮಾರುಹೋಗಬಾರದು. ಇಂತಹ ನಂಬಿಕೆಗಳಿಗೆ ಪುಷ್ಟಿ ನೀಡಬಹುದಾದ ಜಾಹೀರಾತುಗಳನ್ನು ನಾನೇಕೆ ಮಾಡಬೇಕು. ಅಲ್ಲದೇ ಇಂತಹ ಜಾಹೀರಾತುವಿನಿಂದ ಬರುವ ಹಣವನ್ನಿಟ್ಟುಕೊಂಡು ನಾನೇನು ಮಾಡಲಿ? ನಾನು ಮನೆಗೆ ಹೋಗಿ ಕೇವಲ ಮೂರು ಚಪಾತಿ ಹಾಗೂ ಸ್ವಲ್ಪ ಅನ್ನವನ್ನು ತಿನ್ನುತ್ತೇನೆ. ಬಳಿಕ ನನ್ನ ಕಾರನ್ನು ಏರಿ ಒಂದು ಸುತ್ತು ಬರುತ್ತೇನೆ. ಇದಕ್ಕಿಂದ ದೊಡ್ಡ ಆಸೆ ನನಗೆ ಯಾವುದು ಇಲ್ಲ. ನನ್ನ ಸುತ್ತಲಿನ ಜನರ ಸಂತೋಷಕ್ಕೆ ನಾನು ಏನು ಮಾಡಬೇಕೆಂಬುದನ್ನು ನೋಡುತ್ತೇನೆ. ನಾನು ನೋಡುತ್ತಿರುವ ಇಂತಹ ಮಾನದಂಡಗಳು ತಪ್ಪು ಎಂದು ತಿಸ್ಕರಿಸುವುದರಲ್ಲಿ ಭಯವೇಕೆ? ಎಂದರು.
No Comment! Be the first one.