RRR ಸೌತ್ ಇಂಡಿಯಾ ಅಷ್ಟೇ ಅಲ್ಲಾ ಇಡೀ ಪ್ಯಾನ್ ಇಂಡಿಯಾದಲ್ಲೇ ಮೋಸ್ಟ್ ಎಕ್ಸ್ಪೆಕ್ಟೇಷನ್ ಹುಟ್ಟು ಹಾಕಿರೋ ದಕ್ಷಿಣ ಭಾರತದ ಹೈ ವೋಲ್ಟೇಜ್ ಸಿನಿಮಾ. ಹೇಳಿ ಕೇಳಿ ನಿರ್ದೇಶಕ ರಾಜಮೌಳಿ ಸಿನಿಮಾ.
ಬಾಬಹುಬಲಿ ಅನ್ನೋ ಸಿನಿಮಾದ ಮೂಲಕ ಇಡೀ ವರ್ಲ್ಡ್ವೈಡ್ ದಾಖಲೆ ಬರೆದ ನಿರ್ದೇಶಕ ರಾಜಮೌಳಿ ಈಗ RRR ಅನ್ನೋ ಸಿನಿಮಾದ ಮೂಲಕ ಟಿಟೌನ್ ಸ್ಟಾರ್ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ರನ್ನ ಒಂದೇ ಫ್ರೇಮ್ನಲ್ಲಿ ಕಣಕ್ಕಿಳಿಸ್ತಿದ್ದಾರೆ. ಈಗಾಗಲೇ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿರೋ ಈ ಸಿನಿಮಾಗೆ ಕಂಟಕ ಎದುರಾಗಿದೆ. ಅದೂ ಕೂಡ ಪ್ರಮುಖ ನಾಯಕ ಜೂನಿಯರ್ ಎನ್ಟಿಆರ್ರಿಂದ ಅಂತಾ ಹೇಳಲಾಗ್ತಿದೆ.
ಹೌದು, ನಿರ್ದೇಶಕ ರಾಜಮೌಳಿ ಮೇಲೆ ಜೂನಿಯರ್ ಎನ್ಟಿಆರ್ ಕೋಪ ಮಾಡ್ಕೊಂಡಿದ್ದಾರೆ, ಹೀಗಾಗಿ ಸದ್ಯ RRR ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿದೆ ಅಂತಾ ಟಿಟೌನ್ನಲ್ಲಿ ಸುದ್ದಿ ಹರಿದಾಡ್ತಿದೆ. ರಾಜಮೌಳಿ ಸಿನಿಮಾ ಕಂಪ್ಲೀಟ್ ಆಗ್ಬೇಕು ಅಂದ್ರೆ ಕನಿಷ್ಠ 2 ವರ್ಷಗಳಾದ್ರು ಬೇಕೆ ಬೇಕು. ಉದಾಹರಣೆಗೆ ‘ಬಾಹುಬಲಿ; ದಿ ಬಿಗಿನಿಂಗ್’ ಸಿನಿಮಾದ ಚಿತ್ರೀಕರಣವನ್ನು 2013 ಜುಲೈ ನಲ್ಲಿ ಪ್ರಾರಂಭಿಸಿದ್ದ ರಾಜಮೌಳಿ, ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿಸಿದ್ದು 2015 ಮಾರ್ಚ್ನಲ್ಲಿ. ರಾಜಮೌಳಿ ಚಿತ್ರೀಕರಣದ ಶೆಡ್ಯೂಲ್ ಯಾವಾಗಲೂ ತುಂಬಾ ಲೇಟ್ ಇರುತ್ತೆ. ಇದು RRR ಸಿನಿಮಾಗೂ ಹೊರತಲ್ಲ.
RRR ಸಿನಿಮಾ ಸೆಟ್ಟೇರಿದ್ದು 2018ರಲ್ಲಿ 2021 ಬಂದು 3 ತಿಂಗಳು ಮುಗೀತಿದ್ರೂ ಇನ್ನೂ ಚಿತ್ರೀಕರಣ ಕಂಪ್ಲೀಟ್ ಆಗಿಲ್ಲ. ಸಿನಿಮಾದ ಶೂಟಿಂಗ್ ಲೇಟ್ ಆಗ್ತಿರೋದ್ರಿಂದ ನಿರ್ದೇಶಕ ರಾಜಮೌಳಿ ಮೇಲೆ ಎನ್ಟಿಆರ್ ಕೋಪಗೊಂಡಿದ್ದಾರಂತೆ. ಈ ಬಗ್ಗೆ ಸಿನಿಮಾದ ನಿರ್ಮಾಪಕರ ವಿರುದ್ಧ ತಮ್ಮ ಅಸಮಧಾನ ತೋಡಿಕೊಂಡಿದ್ದಾರಂತೆ. ಎನ್ ಟಿ ಆರ್ ಮುನಿಸಿನಿಂದ ಸದ್ಯ RRR ಸಿನಿಮಾದ ಶೂಟಿಂಗ್ಗೆ ಬ್ರೇಕ್ ಬಿದ್ದಿದೆ ಅಂತಾ ಟಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡ್ತಿದೆ. ಕೊರೊನಾ ನಂತರ ಸಿನಿಮಾದ ಚಿತ್ರೀಕರಣ ಶೆಡ್ಯೂಲ್ ಅನ್ನು ಬದಲಾಯಿಸಿ ಹೊಸದಾಗಿ ಪ್ಲಾನ್ ಮಾಡಿ ಚಿತ್ರೀಕರಣ ಪ್ರಾರಂಭಿಸಲಾಗಿದೆ. ಆದರೂ ಪ್ಲಾನ್ ಪ್ರಕಾರ ಚಿತ್ರೀಕರಣ ನಡೆದಿಲ್ಲ. ಸಿನಿಮಾದ ಚಿತ್ರೀಕರಣ ಇನ್ನಷ್ಟು ತಡವಾಗ್ತಿದೆ.
ಆಲಿಯಾ, ವಿದೇಶಿ ಸ್ಟಾರ್ಗಳಿಂದ ಎನ್.ಟಿ.ಆರ್ ಚಿತ್ರೀಕರಣ ಲೇಟ್ : ಜೂ.ಎನ್ಟಿಆರ್ ಈಗಾಗಲೇ ತಮ್ಮ ಮುಂದಿನ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಟಿಟೌನ್ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಹಾಗೂ ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಸಿನಿಮಾಗಳಿಗೆ ಡೇಟ್ಸ್ ನೀಡಿದ್ದಾರೆ. ಆದರೆ, RRR ಸಿನಿಮಾದ ಶೂಟಿಂಗ್ ಇನ್ನೂ ಮುಗಿದಿಲ್ಲ. ಹೀಗಾಗಿ ತಮ್ಮ ಮುಂದಿನ ಸಿನಿಮಾಗಳ ಮೇಲೆ ಎಫೆಕ್ಟ್ ಬೀಳ್ತಿದೆ ಅಂತಾ ರಾಜಮೌಳಿ ಮೇಲೆ ಎನ್ ಟಿ ಆರ್ ಅಸಮಧಾನಗೊಂಡಿದ್ದಾರೆ ಎನ್ನಲಾಗ್ತಿದೆ. ಆಲಿಯಾ ಭಟ್, ವಿದೇಶಿ ನಟಿ ಒಲಿವಿಯಾ ಮೋರಿಸ್ ಹಾಗೂ ಕೆಲವು ವಿದೇಶಿ ನಟರು ಕೊಟ್ಟಿದ್ದ ಡೇಟ್ಗಳಲ್ಲಿ ವ್ಯತ್ಯಾಸವಾಗಿದೆ.
ಆಲಿಯಾ ಹಾಗೂ ಇನ್ನಿತರ ಪ್ರಮುಖ ನಟರ ಪೋಷನ್ಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇದ್ರಿಂದ ಜೂ.ಎನ್ಟಿಆರ್ ಪಾರ್ಟ್ನ ಚಿತ್ರೀಕರಣಕ್ಕೆ ಲೇಟ್ ಆಗ್ತಿದೆ. ಹೀಗಾಗಿ ನಿರ್ದೇಶಕ ರಾಜಮೌಳಿ ವಿರುದ್ಧ ಎನ್ಟಿಆರ್ ಕೋಪಗೊಂಡಿದ್ದು, ಸದ್ಯ RRR ಸಿನಿಮಾದ ಶೂಟಿಂಗ್ಗೆ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.
No Comment! Be the first one.