ಸಾಧು ಕೋಕಿಲಾ ಅವರ ತಾಯಿ ಮಂಗಳ ನಿಧನ ಹೊಂದಿದ್ದಾರೆ. ಈ ವಿಚಾರವನ್ನು ಸಾಧು ಸಹೋದರಿ ಉಷಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಸಾಧು ಕೋಕಿಲಾ ಎಂಬ ಅದ್ಭುತ ಸಂಗೀತ ನಿರ್ದೇಶಕನನ್ನು, ನಟನನ್ನು ರೂಪಿಸಿ ಅವರ ಶಕ್ತಿಯಂತಿದ್ದ ಮಂಗಳಾ ಇನ್ನು ನೆನಪು ಮಾತ್ರ.
ಬಡತನದ ಕೊಂಪೆಯಲ್ಲಿದ್ದರೂ ತಮ್ಮ ಮಕ್ಕಳನ್ನು ಸಂಗೀತದ ವಾತಾವರಣದಲ್ಲಿ ಬೆಳೆಯುವಂತೆ ನೋಡಿಕೊಂಡಿದ್ದವರು ಮಂಗಳ. ಮೂಲತಃ ಆರ್ಕೇಸ್ಟ್ರಾ ಗಾಯಕಿಯಾಗಿದ್ದ ಅವರು ಆ ವೃತ್ತಿಯಿಂದ ಬರುತ್ತಿದ್ದ ಸೀಮಿತವಾದ ಹಣದಿಂದಲೇ ತಮ್ಮ ಮೂವರು ಮಕ್ಕಳನ್ನು ಸಲಹಿದ ಕಷ್ಟದ ದಿನಗಳನ್ನು ಅದೆಷ್ಟೋ ಸಾರಿ ಸಾಧು ಕೋಕಿಲಾ ಅವರೇ ಹೇಳಿಕೊಂಡು ಭಾವುಕರಾದದ್ದಿದೆ.
ಹಾಡುಗಾರಿಕೆಯನ್ನೇ ಅನ್ನದ ಮೂಲವಾಗಿಸಿಕೊಂಡಿದ್ದ ಮಂಗಳ ಸಾಧು ಕೋಕಿಲಾರಂಥಾ ಮಹಾನ್ ಪ್ರತಿಭೆಯ ಹಿಂದಿದ್ದ ಪ್ರೇರಕ ಶಕ್ತಿಯೂ ಹೌದು. ಮದುವೆ ಮನೆಗಳ ಆರ್ಕೇಸ್ಟ್ರಾ ಕಾರ್ಯಕ್ರಮವಿದ್ದಾಗ ಅಲ್ಲಿಂದಲೇ ತಾನು ತಿನ್ನದೆ ಕೊಟ್ಟದ್ದನ್ನೆಲ್ಲ ಮಕ್ಕಳಿಗೆ ತಂದು ತಿನ್ನಿಸಿ ಸಲಹಿದವರು ಮಂಗಳ. ಹಾಡುಗಾರಿಕೆಯ ಸಾಥ್ನಿಂದಲೇ ಸಾಧು ಸೇರಿದಂತೆ ಮಕ್ಕಳೆಲ್ಲರ ವಿಧ್ಯಾಭ್ಯಾಸವನ್ನೂ ನೋಡಿಕೊಂಡಿದ್ದ ಅವರಿಗೆ ತನ್ನ ಮಗನ ಬೆಳವಣಿಗೆಯ ಬಗ್ಗೆ ಅಪಾರ ಹೆಮ್ಮೆಯಿತ್ತು. ಈ ವಿಚಾದಲ್ಲವರು ತೃಪ್ತ ತಾಯಿ.
ಕಡುಗಷ್ಟವನ್ನೇ ಕಂಡು ಬೆಳೆದಿದ್ದ ಮಂಗಳಾ ಮಕ್ಕಳ ಕಾರಣದಿಂದಲೇ ಒಂದಷ್ಟು ನೆಮ್ಮದಿಯ ದಿನಗಳನ್ನೂ ನೋಡಿದ್ದರು. ಆದರೆ ಒಂದಷ್ಟು ಅವರಸರವಾಗಿಯೇ ಹೊರಟಿದ್ದಾರೆ. ಬಹುಶಃ ಸಾಧು ಸಂಗೀತದ ಸ್ವರಗಳಾಗಿ ಅವರು ಬಯಾವತ್ತಿಗೂ ಜೀವಂತವಾಗಿರುತ್ತಾರೆ…
#
No Comment! Be the first one.