ಈ ಇಬ್ಬರು ಕೇಡಿ ಹೆಂಗಸರು ಕನ್ನಡ ಚಿತ್ರರಂಗದ ಹೆಸರು ಕೆಡಿಸಲು ಅದೆಲ್ಲಿಂದ ಬಂದು ವಕ್ಕರಿಸಿಕೊಂಡರೋ? ಕಂಡಕಂಡವರಿಗೆಲ್ಲಾ ಖೆಡ್ಡಾ ತೋಡಿ ತಮ್ಮ ಬಲೆಗೆ ಕೆಡವಿಕೊಂಡಿದ್ದೇ ಈ ಇಬ್ಬರ ಟ್ಯಾಲೆಂಟು-ಸಾಧನೆ. ಅದು ಬಿಟ್ಟರೆ ಸಿನಿಮಾ, ಕ್ಯಾಮೆರಾ ಮುಂದೆ ಈ ಚೆಂಗಲುಗಳು ನಟಿಸಿದ್ದು ಅಷ್ಟಕ್ಕಷ್ಟೇ. ಅದೆಷ್ಟು ಮನೆ ಹಾಳು ಮಾಡಿದ್ದರೋ? ಯಾರ ಕಣ್ಣೀರು ಶಾಪವಾಗಿ ಕಾಡುತ್ತಿದೆಯೋ? ಗೊತ್ತಿಲ್ಲ. ಒಟ್ಟಾರೆ, ಈ ರಾಗಿಣಿ ಮತ್ತು ಸಂಜನಾ ಎಂಬಿಬ್ಬರು 420 ಲೇಡೀಸ್ ಗೆ ನಸೀಬು ಅನ್ನೋದು ಬಿಟ್ಟೂ ಬಿಡದೆ ಅಟ್ಟಾಡಿಸಿ ಕಾಡಿಸುತ್ತಿದೆ!
ಹೋಲಿ ಎನ್ನುವ ಸಿನಿಮಾ ನಂತರ ಕಿಚ್ಚ ಸುದೀಪ ವೀರಮದಕರಿಯಲ್ಲಿ ಛಾನ್ಸು ಕೊಡದೇ ಹೋಗಿದ್ದಿದರೆ ಬಹುಶಃ ರಾಗಿಣಿ ಎಂಬಾಕೆ ಚಿತ್ರರಂಗದಲ್ಲಿ ಇಲ್ಲೀವರೆಗೆ ಉಳಿಯುತ್ತಿರಲಿಲ್ಲವೇನೋ? ಸುದೀಪ್ ಛಾನ್ಸ್ ಕೊಟ್ಟರು ಅನ್ನೋ ಒಂದೇ ಒಂದು ಕಾರಣಕ್ಕೆ ಇತರೇ ಸ್ಟಾರ್ ಗಳ ಸಿನಿಮಾದಲ್ಲೂ ಈಕೆ ಅವಕಾಶ ಪಡೆದಳು. ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರೆನಿಸಿಕೊಂಡಿರುವ ಮಹಾನುಭಾವರೊಬ್ಬರ ಕೃಪಾಕಟಾಕ್ಷದಿಂದ ಈಕೆ ವಿಪರೀತ ಮೆರೆದಳು. ಆ ನಿರ್ಮಾಪಕ ತಮ್ಮ ಆಪ್ತರಿಗೆಲ್ಲಾ ಪರಿಚಯಿಸಿದರು. ಇಂಗ್ಲಿಷ್ ಪೇಪರುಗಳಲ್ಲಿ ದೊಡ್ಡ ದೊಡ್ಡ ಫೋಟೋಗಳು ಪ್ರಕಟವಾಗುತ್ತಿದ್ದವು. ಇದರ ಜೊತೆಜೊತೆಗೇ ರಾಜಕಾರಣಿಗಳ ಸಂಪರ್ಕವೂ ಬೆಳೆಯಿತು. ಕೋಟಿಗಟ್ಟಲೆ ಹಣ ಸಂಪಾದನೆಯಾಯಿತು. ಇಷ್ಟೆಲ್ಲಾ ಇದ್ದಮೇಲೆ ಡ್ರಗ್ ಮಾಫಿಯಾ ಸಂಪರ್ಕಕ್ಕೆ ಬರದಿರತ್ತಾ?
ಇನ್ನು ಸಂಜನಾ ಎನ್ನುವ ನಟೋರಿಯಸ್ ಹೆಂಗಸು ಮಾಡಿದ ಸಿನಿಮಾಗಳಿಗಿಂತಾ ಆಡಿದ ಆಟಗಳೇ ಹೆಚ್ಚು. ನಟನೆಯ ಗಂಧ ಗಾಳಿ ಕೂಡಾ ಗೊತ್ತಿಲ್ಲದ ಈಕೆ ತನ್ನ ಟ್ರಿಕ್ಕುಗಳನ್ನು ಬಳಸಿಯೇ ಅವಕಾಶ ಪಡೆದಳು. ಶ್ರೀಮಂತರ ಸಂಪರ್ಕ ಸಾಧಿಸುವುದೇ ಈಕೆಯ ಪರಮ ಗುರಿಯಾಗಿತ್ತು. ಯಾಮಾರಿ ಇವಳನ್ನು ಸಿನಿಮಾದಲ್ಲಿ ಹಾಕಿಕೊಂಡವರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಪಾಡು.
ಕನ್ನಡ ಚಿತ್ರರಂಗದಲ್ಲಿ ಮೂರೂವರೆ ದಶಕಗಳಿಂದ ಡ್ರಮ್ಮರ್ ಆಗಿ ದುಡಿಯುತ್ತಿರುವ ದೇವಾ ಅವರ ಇವತ್ತಿನ ಕೆಟ್ಟ ಪರಿಸ್ಥಿತಿಗೆ ಪರೋಕ್ಷವಾಗಿ ಕಾರಣವಾಗಿರೋದು ಕೂಡಾ ಇದೇ ಗಂಡ ಹೆಂಡತಿ ಸಂಜನಾ. ಅವರ ಮಗ ವಾರ್ದಿಕ್ ಜೋಸೆಫ್ ನಿರ್ದೇಶಿಸಿದ್ದ ಮಂಡ್ಯ ಟು ಮುಂಬೈ ಸಿನಿಮಾದಲ್ಲಿ ಇವಳಿಗೆ ಛಾನ್ಸು ಕೊಟ್ಟಿದ್ದೇ ಯಡವಟ್ಟಾಗಿತ್ತು. ಆ ಚಿತ್ರತಂಡದ ಒಗ್ಗಟ್ಟನ್ನು ನುಚ್ಚುನೂರು ಮಾಡಿಟ್ಟಿದ್ದಳು. ಸಿನಿಮಾ ವರ್ಷಗಟ್ಟಲೆ ಎಳೆದಾಡಿ, ಅದೊಂದು ದಿನ ರಿಲೀಸಾದರೂ ಬರಖತ್ತಾಗಲಿಲ್ಲ. ಸಂಜನಾ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಲಾಟು ಲಾಟು ಆರೋಪಗಳಿವೆ. ಜಾಹೀರಾತು ಸಂಸ್ಥೆ ನಡೆಸುತ್ತಿದ್ದ ಗ್ಲೋಬಲ್ ಚಂದ್ರಶೇಖರ್ ಎಂಬಾತನಿಗೆ ಒಮ್ಮೆ ಕೊಲೆಬೆದರಿಕೆ ವೊಡ್ಡಿ ಸುದ್ದಿಯಾಗಿದ್ದಳು. ರೌಡಿಗಳು, ಅಧಿಕಾರಿಗಳು, ರಾಜಕಾರಣಿಗಳೆಲ್ಲಾ ನನ್ನ ಬೆಂಬಲಕ್ಕಿದ್ದಾರೆ ಅಂತಾ ಹೇಳಿಕೊಂಡೇ ಡಾನ್ ಥರಾ ವರ್ತಿಸುತ್ತಿದ್ದಳು.
ವಿಪರೀತ ಮೆರೆದ ಯಾರೇ ಅಗಲಿ, ಒಂದು ದಿನ ನೆಲಕ್ಕೆ ಮುಖವಿಟ್ಟು ಮಣ್ಣು ಮುಕ್ಕಲೇಬೇಕು. ಈಗ ರಾಗಿಣಿ ಮತ್ತು ಸಂಜನಾ ಪಾಡು ಕೂಡಾ ಅದೇ ಆಗಿದೆ. ಡ್ರಗ್ಸ್ ಕೇಸಲ್ಲಿ ಸಿಕ್ಕಿಕೊಂಡು ಜೈಲುಪಾಲಾಗಿದ್ದ ಈ ಇಬ್ಬರೂ ಹೆಂಗಸರು ಈಗ ಪರ್ಮನೆಂಟಾಗಿ ಮುದ್ದೆ ಮುರಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ಹತ್ತು ತಿಂಗಳ ಹಿಂದೆ ಇವರ ತಲೆ ಕೂದಲನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಅದರ ವರದಿ ಬಂದಿದೆ. ಇಬ್ಬರೂ ಡ್ರಗ್ಸ್ ಸೇವಿಸಿದ್ದು ನಿಜ ಅನ್ನೋದು ಸಾಬೀತಾಗಿದೆ.
ಸದ್ಯ ಜಾಮೀನಿನ ಮೇಲೆ ಹೊರಬಂದು ಮಹಾನ್ ಸಮಾಜಸೇವಕಿಯರಂತೆ ಪೋಸು ಕೊಡುತ್ತಿರುವ, ಅರ್ಧ ಕೆಜಿ ಅಕ್ಕಿ ಬೆಲ್ಲ, ದಾಲ್ ಕಿಚಡಿ ದಾನ ಮಾಡಿ, ಮೀಡಿಯಾದ ಕ್ಯಾಮೆರಾಗಳನ್ನು ಕರೆಸಿಕೊಂಡು ಬಿಟ್ಟಿ ಪ್ರಚಾರ ಪಡೆಯುತ್ತಿರುವ ಸಂಜನಾ ಮತ್ತು ರಾಗಿಣಿ ಇಬ್ಬರಿಗೂ ಒಳಗೊಳಗೇ ನಡುಕ ಶುರುವಾಗಿದೆ. ಇನ್ನೂ ಒಂದಷ್ಟು ಜನ ನಟಿ-ನಟರ ಒಂದೊಂದೆಳೆ ಕೂದಲಿನ ಎಸಳುಗಳನ್ನು ಕಿತ್ತು ಎಫ್ ಎಸ್ ಎಲ್ ಗೆ ಕಳಿಸಬೇಕು ನೋಡಿ.. ಬೆಂಬಲಕ್ಕೆ ಯಾರೇ ಬಂದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!
No Comment! Be the first one.