ಕನ್ನಡದಲ್ಲಿ ಡಿಬಾಸ್ ಬಾಕ್ಸ್ ಆಫೀಸ್ ಸುಲ್ತಾನ ಹೇಗೋ ಬಾಲಿವುಡ್ ನಲ್ಲಿ ಸಲ್ಮಾನ್ ಕೂಡ ಬಾಕ್ಸ್ ಆಫೀಸ್ ಸುಲ್ತಾನ. ಸದ್ಯ ಬಿಟೌನ್ ನಲ್ಲಿ ಬಹುಬೇಡಿಕೆಯಲ್ಲಿರುವ ನಟರ ಪೈಕಿ ಸಲ್ಮಾನ್ ಖಾನ್ ಒಬ್ಬರಾಗಿದ್ದಾರೆ. ಯಾವುದಾದರೊಂದು ಸಿನಿಮಾವನ್ನು ಒಪ್ಪಿಕೊಂಡು ಮಾಡಿ ಮುಗಿಸುವಷ್ಟರಲ್ಲಿ ಮತ್ತಷ್ಟು ಕಥೆಗಳು ಬಾಯಿಜಾನ್ ಮನೆ ಬಾಗಿಲು ಬಡಿಯುತ್ತಿರುತ್ತದೆ. ಅಷ್ಟರಮಟ್ಟಿಗೆ ಬ್ಯುಸಿಯಾಗಿದ್ದಾರೆ ಬ್ಯಾಡ್ ಬಾಯ್.
ಸಲ್ಮಾನ್ ಖಾನ್ ಬರೋಬ್ಬರಿ 19 ವರ್ಷಗಳ ಬಳಿಕ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಜತೆಯಾಗಿದ್ದಾರೆ. ಹೌದು ಸಲ್ಮಾನ್ ಖಾನ್ ಇನ್ಶಾ ಅಲ್ಲಾ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ. ಸಲ್ಲುಗೆ ಆಲಿಯಾ ಭಟ್ ನಾಯಕಿಯಾಗಿರುವುದು ಪ್ರಮುಖ ಆಕರ್ಷಣೆಯಾಗಿದೆ. ಸದ್ಯದಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಉತ್ತಮ ಮತ್ತು ಡಿಫ್ರೆಂಟ್ ಆಗಿರೋ ನಿರ್ದೇಶಕ, ಕೆಲಸದ ಕಡೆ ಹೆಚ್ಚು ಸಮಯ ಕೊಡುವ ಬನ್ಸಾಲಿ ಜೊತೆ ಸಿನಿಮಾ ಮಾಡುವುದು ಹೆಮ್ಮೆ ಎನಿಸುತ್ತಿದೆ. ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ನಟನಾಗಿರುವುದಕ್ಕೆ ಖುಷಿ ತಂದಿದೆ ಎಂದು ಸ್ವತಃ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ ಈ ಮೊದಲು ಬನ್ಸಾಲಿಯಾ ಸವಾರಿಯಾ ಸಿನಿಮಾದಲ್ಲಿ ರಣಬೀರ್ ಕಪೂರ್ ಸೋನಂ ಕಪೂರ್ ನಟಿಸಿದ್ದರು. ಈ ಚಿತ್ರದಲ್ಲಿ ಸಲ್ಲು ಅತಿಥಿಯ ಪಾತ್ರದಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಆದರೆ ಇನ್ಶಾ ಅಲ್ಲಾ ಸಂಪೂರ್ಣ ಲವ್ ಸ್ಟೋರಿ ಸಿನಿಮಾವಾಗಿದ್ದು, ಯುವ ಜನಾಂಗವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಸಾಗಲಿದೆಯಂತೆ. ಮುಂದಿನ ವರ್ಷ ಈದ್ ಹಬ್ಬಕ್ಕೆ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.
No Comment! Be the first one.