ಜೋಶ್ ಸಿನಿಮಾದ ಮೂಲಕ ಕಾಲೇಜ್ ಬಾಯ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟ ಜಗನ್ ಅಲಿಯಾಸ್ ಜಗನ್ನಾಥ್ ಚಂದ್ರಶೇಖರ್ ಹಾಗೂ ರಕ್ಷಿತಾ ಮುನಿಯಪ್ಪ ಅವರ ಆರತಕ್ಷತೆ ನಿನ್ನೆ ನಗರದ ಪ್ಯಾಲೆಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಮೇ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜಗನ್ ಹಾಗೂ ರಕ್ಷಿತಾ ಅವರ ಆರತಕ್ಷತೆಗೆ ಸ್ಯಾಂಡಲ್ ವುಡ್ ನ ಸೆಲೆಬ್ರೆಟಿಗಳು ಸಾಕ್ಷಿಯಾದರು. ಮರೂನ್ ಕಲರ್ ಸೂಟ್ ನಲ್ಲಿ ಜಗನ್ ಮಿಂಚಿದ್ದು, ಮದುಮಗಳು ರಕ್ಷಿತಾ ಗ್ರೇ ಕಲರ್ ಲೆಹೆಂಗಾದಲ್ಲಿ ಕಲರ್ ಫುಲ್ ಆಗಿ ಕಾಣಿಸುತ್ತಿದ್ದರು. ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ರವಿ ಚಂದ್ರನ್, ನೆನಪಿರಲಿ ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್, ಚಂದನ್ ಶೆಟ್ಟಿ ಬಹುತೇಕ ಸ್ಟಾರ್ ಸೆಲೆಬ್ರೆಟಿಗಳು ಆಗಮಿಸಿ ವಧುವರರನ್ನು ಹಾರೈಸಿದರು. ಕಿರುತೆರೆಯಲ್ಲಿ ಅನೇಕ ಧಾರವಾಹಿಗಳ ಮೂಲಕ ಹೆಸರು ಮಾಡಿದ್ದ ಜಗನ್ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿಯೂ ಸ್ಪರ್ಧಿಸಿ ಜನಮನದಲ್ಲಿ ಉಳಿದಿದ್ದಾರೆ.
No Comment! Be the first one.