ಕಾಮನ್ನಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಕಾಣಸಿಗುವ ಬಹುತೇಕ ಪ್ರಕಟಣೆಗಳಲ್ಲೂ ಸಾರ್ವಜನಿಕರಿಗೆ ವಿನಂತಿ ಎಂಬ ಹೆಡ್ ಲೈನ್ ಗಳನ್ನು ಕಾಣುತ್ತಲೇ ಇರುತ್ತೇವೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿಯೂ ಸೇಮ್ ಟೈಟಲ್ಲೇ ಹೆಚ್ಚು ಸದ್ದು ಮಾಡುತ್ತಿದೆ. ಹೌದು.. ಹೊಸ ಮುಖಗಳೇ ಸೇರಿ ಸಾರ್ವಜನಿಕರಲ್ಲಿ ವಿನಂತಿ ಎಂಬ ಸಿನಿಮಾವನ್ನು ಮಾಡುತ್ತಿದೆ. ಜನಜೀವನದಲ್ಲಿ ನಡೆಯಬಹುದಾದ ಕಥಾ ಹಂದರವೇ ಈ ಚಿತ್ರಕ್ಕೆ ಪ್ರೇರಣೆ ಮತ್ತು ಹೂರಣ.
ಸಾರ್ವಜನಿಕರಲ್ಲಿ ವಿನಂತಿ ಸಿನಿಮಾವನ್ನು ಕೃಪಾ ಸಾಗರ್ ಡೈರೆಕ್ಟ್ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾಗಳಲ್ಲಿ ವರ್ಕ್ ಮಾಡಿರುವ ಅನುಭವವನ್ನು ಹೊಂದಿರುವ ಅವರು ಚೊಚ್ಚಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿರುವುದು ವಿಶೇಷ. ಕಥೆ ಪಬ್ಲಿಕ್ಕಿಗೆ ಕನೆಕ್ಟ್ ಆಗುತ್ತದೆ ಹಾಗೂ ಅವರನ್ನು ಎಚ್ಚರಿಸುವ ಮೆಸೇಜ್ ನೀಡುವ ಸಲುವಾಗಿ ಈ ಟೈಟಲನ್ನು ನಿರ್ದೇಶಕರು ಆರಿಸಿಕೊಂಡಿದ್ದಾರಂತೆ. ಇನ್ನು ಸಿನಿಮಾವನ್ನು ಪ್ರಯೋಗಾತ್ಮಕವಾಗಿ ಕೊಂಡೊಯ್ದಿರುವ ಕಾರಣದಿಂದ ಜನಕ್ಕೆ ಪರಿಚಯವಿಲ್ಲದ ಮುಖಗಳನ್ನೇ ಸೆಲೆಕ್ಟ್ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಕೃಪಾಸಾಗರ್.
ಈ ಚಿತ್ರದಲ್ಲಿ ಪೊಲೀಸರ ಪಾತ್ರವೂ ಗಮನಾರ್ಹವಾಗಿದ್ದು ಅವರಿಗೆ ಸಿನಿಮಾವನ್ನು ಸಮತ್ಪಿಸಲಾಗಿದೆಯಂತೆ. ಅಲ್ಲದೇ ಪೊಲೀಸರಿಗಾಗಿಯೇ ಹಾಡೊಂದನ್ನು ಕಂಪೋಸ್ ಮಾಡಲಾಗಿದ್ದು ಅದನ್ನು ಜೈಹೋ ವಿಜಯ್ ಪ್ರಕಾಶ್ ಹಾಡಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕನಾಗಿ ನವ ನಟ ಮದನ್ ರಾಜ್ ಅಭಿನಯಿಸಿದ್ದು ನಾಯಕಿಯಾಗಿ ಅಮೃತಾ ನಟಿಸಿದ್ದಾರೆ. ಇವರಿಗೆ ರಮೇಶ್ ಪಂಡಿತ್, ಮಂಡ್ಯ ರಮೇಶ್ ಇನ್ನಿತರರು ಸಾಥ್ ನೀಡಿದ್ದಾರೆ. ಇತ್ತೀಚಿಗಷ್ಟೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
No Comment! Be the first one.