ನಿಖಿಲ್ ನಟಿಸಿರೋ ಸೀತಾರಾಮ ಕಲ್ಯಾಣ ಬಿಡುಗಡೆಗೆ ದಿನವೊಂದಷ್ಟೇ ಬಾಕಿ ಉಳಿದುಕೊಂಡಿದೆ. ಅದಾಗಲೇ ಈ ಚಿತ್ರದ ಟಿಕೆಟ್ ಗಾಗಿ ಎಲ್ಲೆಡೆ ಪೈಪೋಟಿ ಆರಂಭವಾಗಿದೆ. ಸೀತಾರಾಮ ಕಲ್ಯಾಣವನ್ನು ಬೇಗನೆ ಕಣ್ತುಂಬಿಕೊಳ್ಳುವ ಸಲುವಾಗಿ ಮುಂಗಡ ಬುಕ್ಕಿಂಗ್ ಕೂಡಾ ಭರ್ಜರಿಯಾಗಿಯೇ ಆರಂಭವಾಗಿದೆ. ಚನ್ನಾಂಬಿಕಾ ಫಿಲಂಸ್ ಬ್ಯಾನರಿನಡಿ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಈಗಾಗತಲೇ ಟೀಸರ್, ಹಾಡುಗಳು ಮತ್ತು ಟ್ರೈಲರ್ ಮೂಲಕ ಸೀತಾರಾಮ ಕಲ್ಯಾಣ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಅದರ ಮೋಡಿ ಎಂಥಾದ್ದೆಂಬುದು ಮುಂಗಡ ಟಿಕೆಟ್ ಬುಕ್ಕಿಂಗ್ ಭರಾಟೆಯಲ್ಲಿಯೇ ಸ್ಪಷ್ಟವಾಗಿ ಪ್ರತಿಫಲಿಸಿದೆ.
ಸೀತಾರಾಮ ಕಲ್ಯಾಣ ಮಾಸ್ ಕಂ ಫ್ಯಾಮಿಲಿ ಕಥೆಯಾಧಾರಿತ ಚಿತ್ರ. ಭರಪೂರ ಮನೋರಂಜನೆ, ಭರ್ತಿ ಲವಲವಿಕೆ, ರೋಮಾಂಚಕ ಪ್ರೇಮ ಸನ್ನಿವೇಶಗಳನ್ನ ಹೊಂದಿರೋ ಈ ಚಿತ್ರದಲ್ಲಿ ಜಬರ್ಧಸ್ತ್ ಫೈಟ್ ಸೀನುಗಳೂ ಇದ್ದಾವೆ. ಫೈಟ್ ಸೀನುಗಳಲ್ಲಿಯೂ ಕೂಡಾ ಹೊಸತನವಿರುವಂತೆ ನಿರ್ದೇಶಕ ಹರ್ಷ ನೋಡಿಕೊಂಡಿದ್ದಾರಂತೆ. ಈ ಸಿನಿಮಾದ ಸಾಹಸ ನಿರ್ದೇಶನ ಮಾಡಿರುವವರು ರಾಮ್ ಲಕ್ಷ್ಮಣ್. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಹೊಂದಿರೋ ಇವರು ಸೀತಾರಾಮನಿಗಾಗಿ ಡಿಫರೆಂಟಾದ ಸಾಹಸ ಪಟ್ಟುಗಳನ್ನ ಪ್ರದರ್ಶಿಸಿದ್ದಾರಂತೆ.
ಸೀತಾರಾಮ ಕಲ್ಯಾಣದಲ್ಲಿ ಒಟ್ಟು ಐದು ಫೈಟ್ ಸೀನುಗಳಿವೆ. ಅದರಲ್ಲಿ ಪ್ರತಿಯೊಂದನ್ನೂ ಒಂದಕ್ಕಿಂತ ಒಂದು ಭಿನ್ನವಾಗಿರುವಂತೆ ನೋಡಿಕೊಳ್ಳಲಾಗಿದೆ. ನೈಜತೆಗೆ ಹತ್ತಿರಾದ ಫೈಟೂ ಸೇರಿದಂತೆ ಎಮೋಷನಲ್ ಫೈಟ್ ಸೀನುಗಳಿ ಈ ಸಿನಿಮಾದ ಮುಖ್ಯ ಆಕರ್ಷಣೆಗಳಲ್ಲೊಂದು
No Comment! Be the first one.