ಕಲರ್ಸ್ ಕ್ಲೌಡ್ಸ್ ಎಂಟರ್ಟೈನ್ಮೆಂಟ್ ವತಿಯಿಂದ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ’ಸೀತಾಯಣ’ ಸಿನಿಮಾದ ಟೀಸರ್ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅನಾವರಣಗೊಳಿಸಿದರು. ಸುಪ್ರೀಂ ಹೀರೋ ಶಶಿಕುಮಾರ್ ನನಗೆ ಸೋದರನಿದ್ದಂತೆ. ಅವರ ಮಗ ಮೂರು ಭಾಷೆಯಲ್ಲಿ ನಾಯಕನಾಗಿ ಪರಿಚಯವಾಗುತ್ತಿರುವುದು ನಿಜವಾಗಿ ಗೌರವ ಪಡುವಂತದ್ದಾಗಿದೆ. ಬೇರೆ ಯಾವ ನಟನಿಗೂ ಸಿಗದಂತ ಗೌರವವಿದು. ನನ್ನಿಂದ ಟೀಸರ್ ರಿಲೀಸ್ ಆಗಿದ್ದು ತುಂಬ ಸಂತಸ ಉಂಟು ಮಾಡಿದೆ. ಸಿನಿಮಾ ಕೂಡ ಖಂಡಿತ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಮಿಕ್ಸೆಡ್ ಕಾಂಟೆಂಪರರಿ ಕಂಟೆಂಟ್ ಆಗಿದ್ದು, ಹಾಡುಗಳು, ಸಂದೇಶ ಕೂಡ ವಿಭಿನ್ನವಾಗಿದೆ. ಮೂರು ಭಾಷೆಗಳಲ್ಲಿ ಒಬ್ಬ ಕನ್ನಡ ಹುಡುಗನನ್ನು ಹಾಕಿಕೊಂಡು ನಿರ್ಮಾಣ ಮಾಡಿರುವ ನಿರ್ಮಾಪಕಿಗೆ ಅಭಿನಂದನೆಗಳು. ರಾಮಾಯಣದಂತೆ ಈ ಸಿನಿಮಾವು ಎಲ್ಲಾ ಭಾಷೆಯಲ್ಲಿ ಚರಿತ್ರೆ ಸೃಷ್ಟಿಸಲಿ. ಅಕ್ಷಿತ್ ಕೂಡ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಪ್ರತಿಭೆ, ಸುಂದರವಾಗಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶಿವರಾಜ್ಕುಮಾರ್ ಶುಭ ಹಾರೈಸಿದರು.
ನಿರ್ಮಾಪಕಿ ಲಲಿತಾ ರಾಜಲಕ್ಷೀ ಮಾತನಾಡಿ ಟೀಸರ್ ಬಿಡುಗಡೆ ಮಾಡಿದ ಡಾ.ಶಿವರಾಜ್ಕುಮಾರ್ ಅವರಿಗೆ ಥ್ಯಾಂಕ್ಸ್. ಸೀತಾಯಣ ಸಿನಿಮಾ ಮಹಿಳೆಯರಿಗೆ ಗೌರವ ನೀಡಿ ಎಂದು ಹೇಳುವ ವಿಷಯವಿದೆ. ಅತಿ ಶೀಘ್ರದಲ್ಲೇ ತೆರೆಗೆ ತರುವ ಯೋಜನೆ ಇದೆ ಎಂದರು. ಅಕ್ಷಿತ್ ಶಶಿಕುಮಾರ್ಗೆ ಜೋಡಿಯಾಗಿ ಅನಹಿತಾ ಭೂಷಣ್ ಉಳಿದಂತೆ ಅಜೆಯ್ ಘೋಷ್, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್, ಮಧುಸೂಧನ್, ವಿಕ್ರಂಶರ್ಮ, ಮೇಘನಾಗೌಡ, ಬೇಬಿ ತ್ರಿಯುಕ್ತ, ವಿದ್ಯಲೇಖರಾಮನ್ ಮುಂತಾದವರು ನಟಿಸಿದ್ದಾರೆ. ಕತೆ ಮತ್ತು ನಿರ್ದೇಶನ ಪ್ರಭಾಕರ್ಆರಿಪ್ಕಾ, ಸಂಗೀತ ಪದ್ಮನಾಭಭಾರದ್ವಾಜ್, ಛಾಯಾಗ್ರಹಣ ದುರ್ಗಾಪ್ರಸಾದ್ಕೊಲ್ಲಿ, ಸಂಕಲನ ಪ್ರವೀಣ್ಪುಡಿ, ಸಾಹಿತ್ಯ ಕವಿರಾಜ್-ಗೌಸ್ಪೀರ್, ಸಾಹಸ ರಿಯಲ್ ಸತೀಶ್ ನಿರ್ವಹಿಸಿದ್ದಾರೆ.
No Comment! Be the first one.