ಈಗ ದೇಶಾದಂತ ಮೀಟೂ ಅಭಿಯಾನವೊಂದು ನಡೆಯುತ್ತಿದೆ. ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಗುರಿಯಿಟ್ಟಿರೋ ಈ ಹೋರಾಟ ಗೌರವಿಸುವಂಥಾದದ್ದೇ. ಆದರೆ ಇದೀಗ ಈ ಅಭಿಯಾನ ಕಹಳತಪ್ಪಿದ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಕೆಲ ನಟಿಯರು ಮೀಟೂ ಆರೋಪ ಮಾಡೋ ಮೂಲಕ ಯಾರದ್ದೋ ಮಾನ ಹರಾಜು ಹಾಕಿ ತಾವು ಪ್ರಚಾರ ಗಿಟ್ಟಿಸಿಕೊಳ್ಳುವ ಖಯಾಲಿ ಆರಂಭಿಸಿದ್ದಾರೆ. ಈ ಕಾಯಿಲೆ ಬಾಲಿವುಡ್ನಲ್ಲಿಯೂ ಇದೆ. ಈಗ ಸ್ಯಾಂಡಲ್ವುಡ್ಡಿಗೂ ಅಮರಿಕೊಂಡಿದೆ!
ಈ ಕಾಯಿಲೆ ಸ್ಯಾಂಡಲ್ವುಡ್ಡಿಗೂ ಕಾಲಿಟ್ಟಿದ್ದರ ಸೂಚನೆ ಎಂಬಂತೆ ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದಾಳೆ. ಚಿತ್ರರಂಗದಲ್ಲಿ ಘನತೆ ಗೌರವ ಹೊಂದಿರೋ ಅರ್ಜುನ್ ಸರ್ಜಾ ಮೇಲೆ ಇಂಥಾದ್ದೊಂದು ಆರೋಪ ಮಾಡಿರೋ ಶ್ರುತಿ ವಿರುದ್ಧ ಸಾಮಾಜಿಕ ಜಾಲತಾಣಗಳ ತುಂಬಾ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ಆಕೆಯ ಅಸಲೀಯತ್ತನ್ನೇ ನೇರವಾಗಿ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಪ್ರಚಾರಕ್ಕಾಗಿ ಯಾಕಿಂಥಾ ಕೀಳು ಮಟ್ಟದ ಹಾದಿ ಹಿಡಿದಿದ್ದೀರಿ ಅಂತ ಶ್ರುತಿಯನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ!
ಈ ಹಿಂದೆ ರಾಷ್ಟ್ರೀಯ ವಾಹಿನಿಯೊಂದರ ಸಮಾರಂಭದಲ್ಲಿ ಕನ್ನಡದಲ್ಲಿಯೂ ಕಾಸ್ಟಿಂಗ್ ಕೌಚ್ ಕಾಟ ಇದೆ ಅಂತ ಮಾತಾಡಿದ್ದಳಲ್ಲಾ ಶ್ರುತಿ? ಆವಾಗಲೇ ಈಕೆಯ ಪ್ರಚಾರದ ಹಪಾಹಪಿ ಎಲ್ಲರಿಗೂ ಅರ್ಥವಾಗಿತ್ತು. ಇದೀಗ ಸರ್ಜಾ ವಿಚಾರದಲ್ಲದು ಮತ್ತೊಮ್ಮೆ ಸಾಬೀತಾಗಿದೆ. ವರ್ಷಾಂತರಗಳ ಹಿಂದೆ ಅರ್ಜುನ್ ಸರ್ಜಾಗೆ ವಿಸ್ಮಯ ಅಂತೊಂದು ಚಿತ್ರದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿದ್ದಳು. ಆ ಚಿತ್ರದ ಚಿತ್ರೀಕರಣದ ರೊಮ್ಯಾನ್ಸ್ ಸೀನುಗಳ ರಿಹರ್ಸಲ್ ಸಮಯದಲ್ಲಿ ಸರ್ಜಾ ತನ್ನನ್ನು ತಬ್ಬಿಕೊಂಡಿದ್ದರು. ಡಿನ್ನರ್ಗೆ ಬರುವಂತೆ ಪದೇ ಪದೆ ಕಾಟ ಕೊಟ್ಟಿದ್ದರು. ಅದರಿಂದಾಗಿ ತಾನು ವಿಪರೀತ ಮಾನಸಿಕ ಹಿಂಸೆ ಅನುಭವಿಸಿದ್ದೆ ಎಂಬುದು ಶ್ರುತಿಯ ರೋಧನೆ.
ಒಂದು ವೇಳೆ ಅಂಥಾ ಅನುಭವ ಆಗಿದ್ದೇ ನಿಜವಾಗಿದ್ದರೆ ಸೀದಾ ಆ ಚಿತ್ರದಿಂದ ಹೊರ ಬಂದು ಆವತ್ತೇ ಮೀಟ ಬಹುದಿತ್ತಲ್ಲಾ? ಈವತ್ತು ಈ ಪಾಟಿ ಆವೇಗದಿಂದ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡೋ ಈಕೆಗೆ ಆವತ್ತು ಯಾವ ತೊಡಕಿತ್ತು? ಅಷ್ಟಕ್ಕೂ ಈವರೆಗೆ ಕನ್ನಡವೂ ಸೇರಿದಂತೆ ಅರ್ಜುನ್ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಎಂತೆಂಥಾ ನಟಿಯರು ಅವರಿಗೆ ನಾಯಕಿಯರಾಗಿದ್ದಾರೆ. ಆದರೆ ಯಾರೊಬ್ಬರೂ ಸರ್ಜಾ ಮೇಲೆ ಇಂಥಾದದ್ದೊಂದು ಆರೋಪ ಮಾಡಿಲ್ಲ. ಅರ್ಜುನ್ ಸರ್ಜಾ ಘನತೆಗೆ ಕುಂದುಂಟಾಗುವಂತೆ ನಡೆದುಕೊಂಡೂ ಇಲ್ಲ. ಆದರೆ ಈ ಶ್ರುತಿ ಎಂಬಾಕೆ ಯಾಕೆ ಇಂಥಾ ಕೆಲಸ ಮಾಡುತ್ತಿದ್ದಾಳೆಂಬ ಪ್ರಶ್ನೆಗೆ ಪ್ರಚಾರದ ಹಪಾಹಪಿ ಎಂಬುದನ್ನು ಬಿಟ್ಟು ಬೇರ್ಯಾವ ಉತ್ತರಗಳೂ ಸಿಕ್ಕೋದಿಲ್ಲ.
ಅಷ್ಟಕ್ಕೂ ಈಕೆಯನ್ನು ನಟಿಯಾಗಿ ನೆಲೆ ನಿಲ್ಲುವಂತೆ ಮಾಡಿದ್ದೇ ಕನ್ನಡ ಚಿತ್ರರಂಗ. ಆ ನಂತರ ಇಲ್ಲಿ ನಟಿಯಾಗಿ ಒಂದಷ್ಟು ಅವಕಾಶವನ್ನು ಪಡೆಯುತ್ತಲೇ ಆಕಾಶದಲ್ಲಿ ತೇಲಾಡಲಾರಂಭಿಸಿದ್ದ ಶ್ರುತಿ ನಖರಾ ಆರಂಭಿಸಿದ್ದಳೆಂಬ ಆರೋಪ ಯಾವತ್ತಿನಿಂದಲೂ ಕೇಳಿ ಬರುತ್ತಿದೆ. ಈಗ ಆಕೆಯ ಬಳಿ ಯಾವ ಅವಕಾಶಗಳೂ ಇಲ್ಲ. ಬೇರೆ ಭಾಷೆಗಳಲ್ಲಿಯೂ ಇದೇ ಕಥೆ. ಹೀಗಿರುವಾಗ ಒಂದಷ್ಟು ಪ್ರಚಾರ ಗಿಟ್ಟಿಸಿ ಅದೇ ಪ್ರಭೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಇರಾದೆಯಿಂದಲೇ ಶ್ರುತಿ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾಳೆಂಬುದು ಸಾರ್ವತ್ರಿಕ ಅಭಿಪ್ರಾಯ.
ಈ ಬಗ್ಗೆ ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಮಾವ ರಾಜೇಶ್ ಅವರೂ ಕೂಡಾ ಶ್ರುತಿ ಮೇಲೆ ಹರಿ ಹಾಯ್ದಿದ್ದಾರೆ. ಅದೆಷ್ಟೋ ವರ್ಷಗಳ ಹಿಂದಾಗಿದೆ ಎನ್ನಲಾದ ಕಿರುಕುಳವನ್ನು ಈಗ ಕೆದಕೋ ಮೀಟೂ ಅನ್ನೋದೊಂದು ಕಾಯಿಲೆ. ಈಗ ಅದು ಶ್ರುತಿ ಎಂಬ ನಟಿಗೂ ಅಂಟಿಕೊಂಡಿದೆ. ಅರ್ಜುನ್ ಸರ್ಜಾ ವ್ಯಕ್ತಿತ್ವ ಎಲ್ಲರಿಗೂ ಗೊತ್ತಿದೆ. ಅವರ ಮೇಲೆ ಶ್ರುತಿ ಮಾಡುತ್ತಿರೋ ಆರೋಪ ಪ್ರಚಾರದ ಉದ್ದೇಶವನ್ನು ಮಾತ್ರವೇ ಹೊಂದಿದೆ. ಶ್ರುತಿಯಂಥಾ ನಟಿಯರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯವನ್ನು ರಾಜೇಶ್ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ಶೃತಿ ತೀರಾ ಮಡಿವಂತ ಹೆಣ್ಣುಮಗಳೇನಲ್ಲ. ಸೆಕ್ಸ್ ಕುರಿತು ರೇಡಿಯೋ ಕಾರ್ಯಕ್ರಮದಲ್ಲಿ ಈಕೆಯ ಮಾತು ಕೇಳಿದವರು ನಿಜಕ್ಕೂ ಬೆಚ್ಚಿಬಿದ್ದಿದ್ದಿದೆ. ಸಿನಿಮಾ ಶೂಟಿಂಗುಗಳಿಗೆ ಹೋದಾಗ ಈಕೆ ಮತ್ತು ಈಕೆಯ ತಾಯಿ ಕಂಠಮಟ್ಟ ಕುಡಿದು ಚಿತ್ತಾಗುತ್ತಾರೆ ಅನ್ನೋ ಅರೋಪ ಕೂಡಾ ಇದೆ. ಇದೆಲ್ಲಾ ಕೆದಕುತ್ತಾ ಹೋದರೆ ನಂಬಲಸಾಧ್ಯ ಮಾಹಿತಿಗಳೇ ಹೊರಬೀಳುತ್ತವೆ. ಇಷ್ಟಕ್ಕೂ ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಟ್ರೂಪಿನಲ್ಲಿ ಯಕಃಶ್ಚಿತ್ ಡ್ಯಾನ್ಸರ್ ಆಗಿದ್ದ ಶೃತಿ ಹರಿಹರನ್ ಸಿನಿಮಾ ನಟಿಯಾಗಿ ಛಾನ್ಸು ಗಿಟ್ಟಿಸಿಕೊಳ್ಳಲು ತನ್ನ ಪ್ರತಿಭೆಯ ಹೊರತಾಗಿ ಮಾಡಿದ ಸರ್ಕಸ್ಸುಗಳ ಕುರಿತು ದಂತಕತೆಗಳಿವೆ. ಅದನ್ನೆಲ್ಲಾ ಬಯಲಿಗೆಳೆಯದ ಶೃತಿ ಯಾಕೆ ಅರ್ಜುನ್ ಸರ್ಜಾ ಬಗ್ಗೆ ಮಾತ್ರ ಮಾತಾಡುತ್ತಿದ್ದಾಳೆ ಅನ್ನೋದೆಲ್ಲಾ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಶ್ರುತಿ ಹರಿಹರನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆಯಲ್ಲಾ ಆಕ್ರೋಶದ ಕಮೆಂಟುಗಳು? ಅದೇ ಎಲ್ಲವನ್ನೂ ಹೇಳುತ್ತಿವೆ.
cinibuzzಅನ್ನು ಇನಸ್ ಸ್ಟಾಗ್ರಾಮ್ನಲ್ಲಿ ಫಾಲೋ ಮಾಡಿ
https://www.instagram.com/cinibuzzsandalwood #
No Comment! Be the first one.