ಸಿಂಧು ಲೋಕನಾಥ್ ಗೊತ್ತಲ್ಲ? ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿ ಸೈಲೆಂಟಾಗಿದ್ದವರು. ಈಗ ಬಿಡುಗಡೆಯಾಗಿರುವ ಕಾಣದಂತೆ ಮಾಯವಾದನು ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸುವ ಸೂಚನೆ ನೀಡಿದ್ದಾರೆ.

ಮನಸ್ಸಿಗೆ ಹತ್ತಿರವಾಗುವ, ಎಂಥವರನ್ನೂ ಸೆಳೆಯುವ ಕಥೆಯ ಕಾಣದಂತೆ ಮಾಯವಾದನು ಚಿತ್ರ ಎಲ್ಲರಿಂದ ಉತ್ತಮ ವಿಮರ್ಶೆ ಪಡೆದಿದೆ.

https://m.facebook.com/story.php?story_fbid=129243748594325&id=100045261004772&sfnsn=wiwspwa&extid=wRXssQgKh74pT63p&d=w&vh=i

ಈ ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಚಿತ್ರದ ಹೀರೋ ವಿಕಾಸ್, ಸಿಂಧೂ ಸೇರಿದಂತೆ ಚಿತ್ರತಂಡದ ಹಲವರು ಕಾಲೇಜೊಂದಕ್ಕೆ ತೆರಳಿದ್ದರು. ಅಲ್ಲಿನ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಾಸಾಗುತ್ತಿದ್ದರು. ಅದು ಮೈಸೂರಿನ ಜನನಿಬಿಡ ಪ್ರದೇಶ. ಅಷ್ಟದಿಕ್ಕುಗಳಿಂದಲೂ ನುಗ್ಗುವ ವಾಹನ, ಟ್ರಾಫಿಕ್ಕಿನ ನಡುವೆ ಗೂಬೆಯೊಂದು ಕಂಗಾಲಾಗಿ ಕೂತಿತ್ತು. ಅದರ ಕಣ್ಣು ಕಾಣುತ್ತಿರಲಿಲ್ಲವೋ? ಅಥವಾ ಗಾಬರಿ ಬಿದ್ದು ಯಾತನೆ ಪಡುತ್ತಿತ್ತೋ ಗೊತ್ತಿಲ್ಲ. ಸುತ್ತಲಿನ ಜನರೆಲ್ಲಾ ಗೂಬೆಗೂ ತಮಗೂ ಸಂಬಂಧವೇ ಇಲ್ಲವೆನ್ನುವ ಹಾಗೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಸಿಂಧೂ ಮಾತ್ರ ತಾವಿದ್ದ ಕಾರಿನಿಂದ ತಕ್ಷಣ ಕೆಳಕ್ಕಿಳಿದು ಗೂಬೆಯನ್ನು ರಕ್ಷಿಸಲು ಮುಂದಾದರು. ಕೈಲಿ ಹಿಡಿದು ಶುಶ್ರೂಶೆ ಮಾಡುವ ಮನಸ್ಸು ಮಾಡಿದರು. ಸಿಂಧೂ ಕೈ ಸ್ಪರ್ಷವಾಗುತ್ತಿದ್ದಂತೇ ಸಾಂತ್ವನಗೊಂಡಂತೆ ಕಂಡ ಗೂಬೆ ಪುರ್ರನೆ ಹಾರುತ್ತಾ ಕಾಣದಂತೆ ಮಾಯವಾಗಿದೆ!

ಆ ಕ್ಷಣಕ್ಕೆ ಅಪಾಯದಲ್ಲಿರುವ ಜೀವವೊಂದರ ಪರವಾಗಿ ಮಿಡಿದ ಕಾರಣಕ್ಕೆ ಸಿಂಧೂಗೆ ಒಂದು ಸಲ ಜೈ ಅನ್ನಲೇಬೇಕು.. ಅಲ್ಲವೇ?!!

CG ARUN

ನಳನಳಿಸುವ ನವರತ್ನದ ಸುತ್ತ ನಿಗೂಢದ ಹುತ್ತ!

Previous article

ನಾಯ್ಡು ಮೇಡಂ ಅಂದ್ರೆ ಸುಮ್ನೇನಾ?

Next article

You may also like

Comments

Leave a reply

Your email address will not be published. Required fields are marked *

More in cbn