ತೆಲುಗು ಚಿತ್ರರಂಗ ಕಿಚ್ಚಾ ಸುದೀಪ್ ಪಾಲಿಗೆ ಹೊಸದೇನೂ ಅಲ್ಲ. ಅಲ್ಲಿ ಈಗಲೂ ಅವರು ನಟಿಸಿರೋ ಈಗ ಚಿತ್ರದ ಯಶಸ್ಸು ಹಾರಾಡುತ್ತಲೇ ಇದೆ. ಸುದೀಪ್ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರೋ ಬಹು ತಾರಾಗಣದ ಸೈರಾ ಚಿತ್ರದಲ್ಲಿ ನಟಿಸುತ್ತಿದ್ದಾರೆಂಬ ವಿಚಾರ ಬಹು ಹಿಂದೆಯೇ ಜಾಹೀರಾಗಿತ್ತು. ಆದರೆ ಅದರಲ್ಲಿ ಕಿಚ್ಚನ ಪಾತ್ರವೇನೆಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿತ್ತು.
ಇದೀಗ ಸೈರಾ ಚಿತ್ರದಲ್ಲಿ ಸುದೀಪ್ ಅವರ ಪಾತ್ರವೇನೆಂಬುದು ಬಯಲಾಗಿದೆ. ಅವರು ಈ ಚಿತ್ರದಲ್ಲಿ ಅವುಕು ಎಂಬ ಪ್ರಾಂತ್ಯದ ರಾಜನಾಗಿ ಕಾಣಿಸಿಕೊಳ್ಳಲಿದ್ದಾರೆ!
ಸೈರಾ ತೆಲುಗುನಾಡಿನ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲುವಾಡ ನರಸಿಂಹ ರೆಡ್ಡಿ ಜೀವನಾಧಾರಿತ ಕಥಾ ಹಂದರ ಹೊಂದಿರುವ ಚಿತ್ರ. ಇಡೀ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನರಸಿಂಹ ರೆಡ್ಡಿಯದ್ದು ದೊಡ್ಡ ಹೆಸರು. ಈತನ ಹೋರಾಟದ ಜೊತೆಗೆ ಅವುಕು ಪ್ರಾತ್ಯದ ರಾಜನೂ ಕೈ ಜೋಡಿಸಿದ್ದ ಉಲ್ಲೇಖಗಳಿದ್ದಾವೆ. ಆದ್ದರಿಂದ ಈ ಚಿತ್ರದಲ್ಲಿ ಸುದೀಪ್ ರಾಜನಾಗಿ, ಬ್ರಿಟೀಷರ ವಿರುದ್ಧ ಹೋರಾಡುವ ಕೆಚ್ಚೆದೆಯ ಯೋಧನಾಗಿಯೂ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಬಾಹುಬಲಿ ಚಿತ್ರದಲ್ಲಿ ಸುದೀಪ್ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸೈರಾ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ಅಂಥಾ ಪಾತ್ರದಲ್ಲಿ ನಟಿಸಲಿರೋದರಿಂದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
#