ಇವರು ಕೋಟಿಗೊಬ್ಬ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು. ಸುದೀಪ್ ಅವರ ಆತ್ಮೀಯರಲ್ಲೊಬ್ಬರು. ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿ ಹಿರಿಯ ನಿರ್ಮಾಪಕ ಎನಿಸಿಕೊಂಡಿರುವ ಸೂರಪ್ಪ ಬಾಬು ಸಿನಿಬಜ಼್ ಜೊತೆಗೆ ಮಾತನಾಡಿ ತಮ್ಮ ಅನಿಸಿಕೆಯನ್ನು ಇಲ್ಲಿ ವ್ಯಕ್ತಿಪಡಿಸಿದ್ದಾರೆ.
ʻʻಯಾರಾದರೂ ಗಲಾಟೆ ಮಾಡಿಕೊಂಡರು, ಬೈಗುಳ ಪದಗಳನ್ನು ಬಳಸಿದರು ಅಂಥಾ ಗೊತ್ತಾದರೆ, ಸುದೀಪ್ ಅವರು ಮೊದಲು ಅವರನ್ನು ಕರೆಸಿ ಬುದ್ದಿವಾದ ಹೇಳುತ್ತಾರೆ. ಯಾವುದೇ ಸಂದರ್ಭದಲ್ಲೂ ಅವರು ಈ ಜಗಳಗಳನ್ನು ಪ್ರೋತ್ಸಾಹಿಸುವುದಿಲ್ಲ. ಯಾರಿಗೂ ಕುಮ್ಮಕ್ಕು ನೀಡುವುದಿಲ್ಲ. ಸುದೀಪ್ ಅವರ ಗುಣ ಎಂಥದ್ದು ಅಂಥಾ ನಾನು ಪರ್ಸನಲ್ಲಾಗಿ ಬಲ್ಲೆ. ಆನೆ ನಡೆದುಕೊಂಡು ಹೋಗುವಾಗ ಇತರೆ ಜೀವಿಗಳು ಭಯದಿಂದ ಎಗರಾಡುತ್ತವೆ. ಅದರ ಬಗ್ಗೆ ಹೆಚ್ಚು ಗಮನ ಕೊಡಬಾರದು.
ತಮ್ಮ ನಟನೆಯ ಮೂಲಕ ಇಡೀ ಜಗತ್ತಿನಾದ್ಯಂತ ಹೆಸರು ಮಾಡಿರುವ, ಅಸಂಖ್ಯಾತ ಅಭಿಮಾನಿಗಳು, ಪ್ರೀತಿಸುವ ಹೃದಯಗಳನ್ನು ಸಂಪಾದಿಸಿರುವ ದೊಡ್ಡ ನಟ ಸುದೀಪ್. ನಾನು ಸಾಹಸ ಸಿಂಹ ವಿಷ್ಣು ವರ್ಧನ್ ಅವರನ್ನೂ ತೀರಾ ಹತ್ತಿರದಿಂದ ಕಂಡವನು. ಇವತ್ತು ಸುದೀಪ್ ಅವರೊಂದಿಗೂ ಅದೇ ಆತ್ಮೀಯತೆ ಹೊಂದಿದ್ದೇನೆ. ಸುದೀಪ್ ಅವರ ಗುಣ, ಅವರು ಹೊಂದಿರುವ ಘನತೆ, ತೂಕದ ವ್ಯಕ್ತಿತ್ವ ನಿಜಕ್ಕೂ ಪ್ರಪಂಚಕ್ಕೆ ಮಾದರಿಯಾಗುವಂಥದ್ದು. ಚಿತ್ರರಂಗದಲ್ಲಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿ, ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಸೂಪರ್ ಸ್ಟಾರ್ ಕಿಚ್ಚ ಸುದೀಪ. ಅವರ ಬಗ್ಗೆ ಯಾರೋ ಸಣ್ಣತನದ ವ್ಯಕ್ತಿಗಳು ಮಾತಾಡಿದರೆ, ಆಧಾರರಹಿತವಾಗಿ ಆರೋಪಿಸಿದರೆ, ಅಂಥವಕ್ಕೆ ಯಾವ ಕಾರಣಕ್ಕೂ ಸುದೀಪ್ ಅವರ ಅಭಿಮಾನಿಗಳು ಪ್ರತಿಕ್ರಿಯಿಸಬೇಡಿ. ಇದು ಸುದೀಪ್ ಅವರ ಆಪ್ತನಾಗಿ ನನ್ನ ಕೋರಿಕೆʼʼ
ನಾನು ಸಾಹಸ ಸಿಂಹ ವಿಷ್ಣು ವರ್ಧನ್ ಅವರನ್ನೂ ತೀರಾ ಹತ್ತಿರದಿಂದ ಕಂಡವನು. ಇವತ್ತು ಸುದೀಪ್ ಅವರೊಂದಿಗೂ ಅದೇ ಆತ್ಮೀಯತೆ ಹೊಂದಿದ್ದೇನೆ. ಸುದೀಪ್ ಅವರ ಗುಣ, ಅವರು ಹೊಂದಿರುವ ಘನತೆ, ತೂಕದ ವ್ಯಕ್ತಿತ್ವ ನಿಜಕ್ಕೂ ಪ್ರಪಂಚಕ್ಕೆ ಮಾದರಿಯಾಗುವಂಥದ್ದು.