- ಮಹಂತೇಶ್ ಮಂಡಗದ್ದೆ
ರಮ್ಯಾ ಇದ್ದಕ್ಕಿದ್ದಂಗೆ ಯಾಕೆ ಟ್ವಿಟ್ಟರ್, ಇನ್ಸ್ಟಾಗ್ರಾಮ್ನಿಂದ ದೂರ ಉಳಿದ್ರು ಅನ್ನೋದರ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ.
ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇರ್ತಿದ್ದ ಚೆಲುವೆ ಮತ್ತೆ ಸೆಕೆಂಡ್ ಟೈಮ್ ತಮ್ಮ ಸಾಮಾಜಿಕ ಜಾಲತಾಣದಿಂದ ಕ್ವಿಟ್ ಆಗಿದ್ದಾರೆ. ಮಂಡ್ಯ ಎಲೆಕ್ಷನ್ ನಂತರ ಕಾಣೆಯಾಗಿದ್ದ ರಮ್ಯಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ರು. ವಾರಕ್ಕೊಂದೆರಡು ಪೋಸ್ಟ್ ಹಾಕಿ ಅಭಿಮಾನಿಗಳಿಗೆ ಕಿಕ್ ಕೊಡ್ತಿದ್ದ ಮೋಹಕ ತಾರೆ ಮತ್ತೆ ಇನ್ಸ್ಟಾಗ್ರಾಮ್ನಿಂದ ಔಟ್ ಆಗಿದ್ದಾರೆ. ಅಷ್ಟಕ್ಕೂ ಮತ್ತೆ ಸಾಮಾಜಿಕ ಜಾಲತಾಣಗಳಿಂದ ಲಕ್ಕೀ ಗರ್ಲ್ ಕ್ವಿಟ್ ಆಗಿದ್ಯಾಕೆ.. ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಕಣ್ಣಾಮುಚ್ಚಾಲೆ ಆಟದ ಹಿಂದಿರೋ ರೀಸನ್ ಏನು ಅನ್ನೋದು ಎಲ್ಲರಲ್ಲಿರೋ ಮಿಲಿಯನ್ ಡಾಲರ್ ಪ್ರಶ್ನೆ.
ಸಿನಿಮಾರಂಗದಿಂದ ದೂರವಾಗಿದ್ದಲ್ಲದೇ, ರಾಜಕೀಯದಲ್ಲಿ ಹಿನ್ನಡೆಯಾಗಿ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ರಮ್ಯಾ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿರೋದರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಅಧ್ಯಕ್ಷೆ ಆಗಿದ್ದ ರಮ್ಯಾ ಆಗಾಗ ಸಾಮಾಜಿಕ ಜಾಲತಾಣಗಳಿಂದ ಬ್ರೇಕ್ ತೆಗೆದುಕೊಳ್ತಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮಿರ ಮಿರ ಮಿಂಚುತ್ತಿದ್ದ ಸೇವಂತಿ ಸೇವಂತಿ ಮತ್ತೆ ಸಾಮಾಜಿಕ ಜಾಲತಾಣಗಳಿಮದ ದೂರವಾಗಿದ್ದಾರೆ. ಏಕಾ ಏಕಿ ಸೋಷಿಯಲ್ ಮೀಡಿಯಾದಿಂದ ಔಟ್ ಆಗಿರೋ ರಮ್ಯಾ ಅಚ್ಚರಿ ಮೂಡಿಸಿದ್ದಾರೆ.
ಅಂದಹಾಗೆ ರಮ್ಯಾ ಇದ್ದಕ್ಕಿದ್ದಂಗೆ ಯಾಕೆ ಟ್ವಿಟ್ಟರ್, ಇನ್ಸ್ಟಾಗ್ರಾಮ್ನಿಂದ ದೂರ ಉಳಿದ್ರು ಅನ್ನೋದರ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ಟೆಕ್ನಿಕಲ್ ಕಾರಣಗಳಿಂದ ಏನಾದ್ರೂ ರಮ್ಯಾ ಸೋಷಿಯಲ್ ಮೀಡಿಯಾ ಅಕೌಂಟ್ಗಳು ಅನ್ ಆ್ಯಕ್ಟೀವ್ ಆಗಿವೆಯಾ ಅನ್ನೋ ಅನುಮಾನ ಶುರುವಾಗಿದೆ. ಅವರು ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಕಣ್ಮರೆಯಾಗ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ 2019ರ ಜೂನ್ನಿಂದ 2020 ಆಗಸ್ಟ್ವರೆಗೆ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಒಂದು ವರ್ಷದ ಸೋಷಿಯಲ್ ಮೀಡಿಯಾ ಸಹವಾಸ ಬಿಟ್ಟಿದ್ದ ಮೋಹಕ ತಾರೆ ಮತ್ತೆ ಇತ್ತೀಚೆಗೆ ಆ್ಯಕ್ಟೀವ್ ಆಗಿದ್ರು. ಈಗ ಮತ್ತೆ ಅವರ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಅಕೌಂಟ್ಗಳು ನಿಷ್ಕ್ರಿಯವಾಗಿರೋದು ಅಚ್ಚರಿ ಮೂಡಿಸಿದೆ.
No Comment! Be the first one.