ಬಿ ಟೌನ್ ಕಿಂಗ್ ಖಾನ್ ಡಾಟರ್ ಸುಹಾನಾ ಖಾನ್ ಸೆಲ್ಫಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಹಾನಾ ಖಾನ್ ಅವರ ಮಿರರ್ ಸೆಲ್ಫಿಯಲ್ಲಿ ಎಟಿಎಂ ಕಾರ್ಡ್ ಕಾಣಿಸಿಕೊಂಡಿದ್ದು, ಎಲ್ಲರ ಕಣ್ಣು ಅದರ ಮೇಲೆ ಬೀಳುವಂತಾಗಿದೆ.
https://www.instagram.com/p/ByQG_76A0lL/?utm_source=ig_web_copy_link
ಕಡಿಮೆ ಜುವೆಲ್ಸ್, ಸ್ಟ್ರಾಪ್ ಲೆಸ್ ಟಾಪ್ ನಲ್ಲಿರುವ ಸುಹಾನಾ ಸಿಂಗಲ್ಲಾಗಿದ್ದರೂ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಲುಕ್ಕಿಗಿಂತ ಅವರು ಹಿಡಿದುಕೊಂಡು ಮೊಬೈಲ್ ಬ್ಯಾಕ್ ಕವರಿನ ಎಟಿಎಂ ಕಾರ್ಡೇ ಗಮನಸೆಳೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಸಾಕಷ್ಟು ಕಾಮೆಂಟ್‌ಗಳನ್ನು ಮಾಡಲಾಗಿದೆ. ವಾಹ್ ಕಾರ್ಡ್ ಮುಜೆ ದೇ ದೇ ಠಾಕೂರ್ (ಕಾರ್ಡ್ ನನಗೆ ಕೊಟ್ಟು ಬಿಡು ಠಾಕೂರ್) ಎಂದು ಗಬ್ಬರ್ ಸಿಂಗ್ ಡೈಲಾಗ್ ಹೊಡೆದಿದ್ದಾರೆ. ಇನ್ನೊಬ್ಬರು, “ಮೊಬೈಲ್ ಕವರ್‌ನಲ್ಲಿ ಎಟಿಎಂ ಕಾರ್ಡ್, ಲಕ್ಕಿ ಗರ್ಲ್, ದಿನನಿತ್ಯದ ಖರ್ಚುಗಳಿಗೇ ಖಂಡಿತ ಕೋಟ್ಯಂತರ ರೂಪಾಯಿ ಇರುತ್ತದೆ” ಎಂದಿದ್ದಾರೆ. ಸದ್ಯಕ್ಕೆ ಸುಹಾನಾ ಲಂಡನ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದ ವರ್ಷ ವೋಗ್ ಇಂಡಿಯಾದ ಆಗಸ್ಟ್ ಸಂಚಿಕೆಯಲ್ಲಿ ಸುಹಾನಾ ಕಾಣಿಸಿಕೊಂಡಿದ್ದರು.
Comments