ಸಿನಿಮಾಗಳಲ್ಲಿ ಮೇಜರ್ ಪಾತ್ರಗಳನ್ನೇ ಮಾಡಲಿ, ಚಿಕ್ಕ ಪಾತ್ರಗಳನೇ ಮಾಡಲಿ ಸ್ಕ್ರೀನ್ ಮೇಲೆ ಕಮಾಲು ಮಾಡುವ ನಟಿ ಸುಜಾ ವರುಣಿ. ಈಗಾಗಲೇ ಪೆನ್ಸಿಲ್, ಕಿಡಾರಿ, ಇರುವಕ್ಕು ಆಯಿರಾಮ್ ಕಂಗಲ್ ಸಿನಿಮಾಗಳ ಮೂಲಕ ಅದನ್ನು ನಿರೂಪಿಸಿದ್ದಾರೆ. ಸಿನಿಮಾ ಜರ್ನಿಯ ಜತೆಗೆ ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿದ್ದ ಇವರು ಅಗಾಧ ಅಭಿಮಾನಿಗಳನ್ನು ಸಂಪಾದಿಸಿದಲ್ಲದೇ ಕಮಲ್ ಹಾಸನ್ ಜತೆಗೆ ಉತ್ತಮ ಸ್ನೇಹ ಸಂಪರ್ಕವನ್ನು ಪಡೆದರು.
https://www.instagram.com/p/ByFQrP4l5Q2/?utm_source=ig_web_copy_link
ಶಿವಾಜಿ ಗಣೇಶನ್ ಅವರ ಮೊಮ್ಮಗ ಶಿವಕುಮಾರ್ ಅವರನ್ನು ವಿವಾಹವಾಗಿದ್ದ ಸುಜಾ ವರಣಿ ಕಳೆದ ಯುಗಾದಿ ಹಬ್ಬದಂದು ತಾನು ಗರ್ಭಿಣಿಯಾಗಿರುವುದಾಗಿಯೂ ಅಭಿಮಾನಿಗಳಿಗೆ ತಿಳಿಸಿದ್ದರು. ಸದ್ಯ ತನ್ನ ಬೇಬಿ ಬಂಪ್ ಪೋಟೋಗಳನ್ನು ಸೋಶಿಯಲ್ ಮೀಡಿಯಾಗೆ ಶೇರ್ ಮಾಡಿರುವ ವರುಣಿ, ಆ ಪೋಟೋಗಳನ್ನು ಡಿಸೈನ್ ಮಾಡಿದವರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.
ಪ್ರೀತಿಯ #Kadali_couture ಅವರೇ ನಾನು ಏನನ್ನು ಬಯಸುತ್ತೇನೋ ಅದನ್ನು ನನಗೆ ನಿಮ್ಮ ಕೆಲಸದ ಮೂಲಕ ನೀಡುತ್ತೀರಾ. ನಿಮ್ಮ ಕಾರ್ಯಕ್ಷಮತೆಗೆ ನಾನು ಆಭಾರಿಯಾಗಿರುತ್ತೇನೆ. ನಿಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಹೀಗೆಯೇ ಇರಲಿ ಎಂದಿದ್ದಾರೆ.
No Comment! Be the first one.