ಸಾಮಾನ್ಯವಾಗಿ ಪ್ರತಿಯೊಬ್ಬ ನಟನಲ್ಲಿಯೂ ನಿರ್ದೇಶಕನಾಗುವ ಲಕ್ಷಣ, ಅರ್ಹತೆ, ಚಾರ್ಮ್ ಇರುತ್ತದೆ. ಸಾಕಷ್ಟು ಜನರಿಗೆ ಅದರ ಅರಿವೇ ಇರಲಿಕ್ಕಿಲ್ಲ. ಮತ್ತೂ ಕೆಲವರು ತನ್ನಲ್ಲಿರುವುದನ್ನು ತಿಳಿದ ಮರು ಕ್ಷಣವೇ ನಟನೆಯ ಜತೆಗೆ ನಿರ್ದೇಶಕನಾಗುವ ಕನಸನ್ನು ಈಡೇರಿಸಿಕೊಳ್ಳುತ್ತಾರೆ. ಆಸೆ ಈಡೇರಿದಾಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಂತಹ ಅಪ್ಪಟ ದೇಸಿ ಕಮ್ ಪ್ರಯೋಗಾತ್ಮಕ ಸಿನಿಮಾಗಳ ತಯಾರಾಗುತ್ತದೆ.

ಇತ್ತೀಚೆಗಷ್ಟೇ ಬ್ಲಾಕ್ ಬಸ್ಟರ್ ಹಿಟ್ ಕಂಡು ಶತಕವನ್ನು ಬಾರಿಸಿದ ಜಯತೀರ್ಥ ನಿರ್ದೇಶನದ ಬೆಲ್ ಬಾಟಂ ಚಿತ್ರದಲ್ಲಿ ಸಗಣಿ ಪಿಂಟೋ ಪಾತ್ರಧಾರಿಯನ್ನು ಯಾರೂ ಮರೆತಿಲಿಕ್ಕಿಲ್ಲ. ಆ ಪಾತ್ರವನ್ನು ಅಭಿನಯಿಸಿದ್ದ ಸುಜಯ್ ಶಾಸ್ತ್ರಿಯೇ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ನಿರ್ದೇಶಕನಾಗಿ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾರೆ. ತಮ್ಮ ತನವನ್ನು ಉಳಿಸಿಕೊಳ್ಳಲೆಂದೇ ಗುಬ್ಬಿಯ ಕಥೆಯಲ್ಲಿಯೂ ನಾಣಿ ಎಂಬ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಗುಬ್ಬಿಯ ಟ್ರೇಲರ್ ನಾಣಿಯ ಪಾತ್ರದ ಪ್ರಾಮುಖ್ಯತೆಯನ್ನು ತೋರಿಸುವುದಲ್ಲದೇ ಒಂದೆರಡು ಡೈಲಾಗ್ ನಿಂದ ನೋಡುಗರು ಬಿದ್ದು ಬಿದ್ದು ನಗುವಂತೆ ಮಾಡುತ್ತಾರೆ.

“ಗುಬ್ಬಿಯ ಕಥೆಯಲ್ಲಿ ನಾಣಿಯದು ಸ್ಪೆಷಲ್ ಕ್ಯಾರೆಕ್ಟರ್ರು. ಸಾವಿನ ಮೇಲೆ ಹೆಚ್ಚಿನ ಒಲವನ್ನಿಟ್ಟಿಕೊಂಡಿರುವ ನಾಣಿ ನಾಯಕ ಕ್ರಿಶ್ ನ ಪ್ರಾಣ ಸ್ನೇಹಿತ ಜತೆಗೆ ಕೋಟ್ಯಧಿಪತಿಯಲ್ಲಿ ಬರುವ ಫೋನ್ ಅಪ್ ಫ್ರೆಂಡ್ ಥರ. ಸಾಕಷ್ಟು ಸಮಯದಲ್ಲಿ ನಾಯಕನಿಗೆ ಆಪತ್ಭಾಂಧವನಾಗಿ ಸಲಹೆ ಸೂಚನೆಗಳನ್ನು ನೀಡುತ್ತಲೇ ಇರುತ್ತಾರೆ. ಹಾಗಿದ್ದರೂ ನಾಯಕನ ಜೀವನ ಹಾಳಾಗಲು ನಾಣಿಯ ಕೈವಾಡವೂ ಇದೆ ಎಂಬುದಕ್ಕೆ ಉತ್ತರ ಮಾತ್ರ ಚಿತ್ರಮಂದಿರದಲ್ಲಿಯೇ ಪಡೆದುಕೊಳ್ಳಿ” ಎನ್ನುತ್ತಾರೆ ಸುಜಯ್ ಶಾಸ್ತ್ರಿ.

CG ARUN

ಗುಬ್ಬಿಯ ಕಥೆಯಲ್ಲಿ ಪರ್ಪಲ್ ಪ್ರಿಯಾ ಮತ್ತು ಕ್ರಿಶ್ ಲವ್ ಸ್ಟೋರಿ!

Previous article

ಕನ್ನಡಿಗರಿಗೆ ಉದ್ಯೋಗ ಹೋರಾಟಕ್ಕೆ ಸಾಥ್ ಕೊಟ್ಟ ಸ್ಯಾಂಡಲ್ ವುಡ್!

Next article

You may also like

Comments

Leave a reply

Your email address will not be published. Required fields are marked *