ಕನ್ನಡ ಚಿತ್ರರಂಗದ ಕ್ರಿಯಾಶೀಲ, ಕನಸುಗಾರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಇದೀಗ ಉದ್ಘರ್ಷ ಎಂಬ ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶನ ಮಾಡಿರುವ ದೇಸಾಯಿಯವರಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಲಭಿಸಿದೆ. ಇಂಡಿಯನ್ ವರ್ಚುವಲ್ ಅಕಾಡೆಮಿ ವತಿಯಿಂದ ಎಕ್ಸಲೆನ್ಸ್ ಪ್ರಶಸ್ತಿಯನ್ನು ದೇಸಾಯಿಯವರಿಗೆ ಕೊಡಲಾಗಿದೆ.
ಎಂಭತ್ತರ ದಶಕದಲ್ಲಿಯೇ ಮೂವತ್ತು ವರ್ಷದಾಚೆಯ ಆಲೋಚನೆಗಳನ್ನು ಚಿತ್ರವಾಗಿಸಿದ್ದವರು ಸುನೀಲ್ ಕುಮಾರ್ ದೇಸಾಯಿ. ತರ್ಕ ಎಂಬ ವಿಶಿಷ್ಟವಾದ ಸೂಪರ್ ಹಿಟ್ ಚಿತ್ರದ ಮೂಲಕವೇ ನಿರ್ದೇಶಕರಾಗಿ ಹೊರ ಹೊಮ್ಮಿದ್ದ ಅವರು ಭಿನ್ನ ಆಲೋಚನೆಗಳ ಮೂಲಕವೇ ನೆಲೆ ಕಂಡುಕೊಂಡವರು. ಎರಡು ತಲೆಮಾರುಗಳಾಚೆಗೂ ಇಂದಿಗೂ ಪ್ರಸ್ತುತವಾಗಿ ಚಿತ್ರ ಮಾಡೋ ಲವ ಲವಿಕೆ ಹೊಂದಿರುವ ದೇಸಾಯಿ ಕನ್ನಡ ಚಿತ್ರರಂಗದ ಹೆಮ್ಮೆ.ಅವರಿಗೆ ಈಗ ಲಭಿಸಿರುವ ಎಕ್ಸಲೆನ್ಸ್ ಪ್ರಶಸ್ತಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗರಿಮೆ ಎಂದರೂ ಅತಿಶಯೋಕ್ತಿಯಲ್ಲ.
ಅಚ್ಚುಕಟ್ಟಾದ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿರುವ ದೇಸಾಯಿ ಈ ಪ್ರಶಸ್ತಿಯನ್ನು ಕನ್ನಡಿಗರಿಗೆ ಅಭಿಮಾನಿಗಳಿಗೆ ಸಮರ್ಪಿಸಿದ್ದಾರೆ. ರೇಸ್ ಕೋರ್ಸ್ ರಸ್ತೆ ಭಾರತೀ ವಿದ್ಯಾ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಆಯಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಯೂನಿವರ್ಸಿಟಿಯ ಮಾಜಿ ವೈಸ್ ಚಾನ್ಸೆಲರ್ ಡಾ. ಸರ್ವಮಂಗಳ ಶಂಕರ್, ಕೌನ್ಸಿಲ್ ಆಫ್ ಚೈಲ್ಡ್ ಆಯಂಡ್ ಯೂತ್ ಕೇರ್‌ನ ಮಾಜಿ ಸಿಇಓ ಅರುಣ್ ಕುಮಾರ್ ಬುನ್ಯಾನ್, ಸಂಗೀತ ನಿರ್ದೇಶಕ ಬಿ.ವಿ ಶ್ರಿನಿವಾಸ್, ಖ್ಯಾತ ಗಾಯಕಿ ಡಾ.ಬಿ.ಕೆ. ಸುಮಿತ್ರಾ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೌನ್ಸೆಲರ್ ಡಾ. ಎಲ್.ಎಸ್. ನಾರಾಯಣ ರೆಡ್ಡಿ ಭಾರ್ಗವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
#