ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕತಾರ್ ನಲ್ಲಿ ನಡೆದಿದ್ದ ಸೈಮಾ ಅವಾರ್ಡ್ ಕಾರ್ಯಕ್ರಮದ ಕುರಿತು ನಟ ನಿರ್ದೇಶಕ ರಘುರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾಗಳು 15 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಕೆಜಿಎಫ್, ಅಯೋಗ್ಯ, ಟಗರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಗಳು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಅದರಲ್ಲೂ ಕೆಜಿಎಫ್ ಉಳಿದ ಸಿನಿಮಾಗಳಿಗಿಂತ ಹೆಚ್ಚಿನ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕೇವಲ ಮೂರು ಪ್ರಶಸ್ತಿಗಳನ್ನು ಪಡೆದಿರುವ ಟಗರು (ವಿಲನ್, ಗಾಯಕಿ, ವಿಮರ್ಶಕರ ನಟಿ) ಚಿತ್ರದ ಪರನಿಂತಿರುವ ರಘುರಾಮ್ ಟಗರು ಚಿತ್ರದ ಕುರಿತಂತೆ ಮಾತನಾಡಿದ್ದಾರೆ.

‘#Award’s ಪಡೆದುಕೊಳ್ಳೋದು ಸಂಸ್ಕಾರ. ಕೆಲವರ ಅವಶ್ಯಕತೆಗೆ ಮಿಕ್ಕವರ ಅನಿವಾರ್ಯತೆಗೆ ಪ್ರಶಸ್ತಿಗಳನ್ನು ಕೊಡೋದು ವ್ಯವಹಾರ. ವಿಶ್ವಾದ್ಯಂತ ಜನಪ್ರಿಯವಾಗಿರೋ ಟಗರು ಚಿತ್ರಕ್ಕೆ , ಹಾಡಿಗೆ ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತ್ರಕಥೆಗೆ, ಗುರುತು ಗೌರವ ಸಿಗದೇ ಇರೋದು @siims ಅವರ ಪಕ್ಷಪಾತ ನಿರ್ಧಾರ. #Tagaru’ ಎಂದು ಟ್ಟಿಟರ್ ನಲ್ಲಿ ಬರೆದುಕೊಂಡಿದ್ದಾರೆ.

CG ARUN

ಗಾಯಕಿಯನ್ನು ವರಿಸಿದ ರಾಕ್!

Previous article

ರಕ್ಷಾಬಂಧನ ಆಚರಿಸಿಕೊಂಡ ಸನ್ನಿಲಿಯೋನ್!

Next article

You may also like

Comments

Leave a reply

Your email address will not be published. Required fields are marked *

More in cbn