ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. ಆದರೆ ಪ್ರಜ್ಞಾವಂತ ನಟಿ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ಧ!
ಸಾಮಾಜಿಕ ಪಲ್ಲಟಗಳ ಬಗ್ಗೆ ದೊಡ್ಡ ಸ್ವರದಲ್ಲಿ ಧ್ವನಿ ಎತ್ತಲು ನಾನೇನು ಆಕ್ಟಿವಿಸ್ಟ್ ಅಲ್ಲ. ಆದರೆ ನನಗನ್ನಿಸಿದ್ದನ್ನು, ಹೇಳಲೇ ಬೇಕಾಗಿರೋದನ್ನು ಹೇಳಲು ಸಿನಿಮಾ ನನಗೆ ಮಾಧ್ಯಮ. ಸಿನಿಮಾಗಳ ಮೂಲಕವೇ ಇದರ ಸಾಕಾರಕ್ಕಾಗಿ ಪ್ರಯತ್ನಿಸುತ್ತೇನೆ. ಜನರನ್ನು ಎಜುಕೇಟ್ ಮಾಡುವಂಥಾ ಚಿತ್ರಗಳು ಸಿಕ್ಕರೆ ಅಂಥಾದ್ದರಲ್ಲಿ ಬೇಷರತ್ತಾಗಿ ಅಭಿನಯಿಸುತ್ತೇನೆ ಎಂಬುದು ತಾಪ್ಸಿ ಪನ್ನು ತನ್ನೊಳಗಿನ ಸಾಮಾಜಿಕ ಕಳಕಳಿಯನ್ನು ಅನಾವರಣಗೊಳಿಸಿದ ಪರಿ.
ಬಾಲಿವುಡ್ನಲ್ಲಿ ತಾಪ್ಸಿಗೆ ಡೇರಿಂಗ್ ಇಮೇಜೊಂದಿದೆ. ಬಿಡುಬೀಸಾದ ನಟನೆಯ ಜೊತೆಗೆ ಅದೇ ಥರದ ವ್ಯಕ್ತಿತ್ವವನ್ನೂ ಹೊಂದಿರೋ ತಾಪ್ಸಿ ಯಾರಿಗೂ ಕೇರು ಮಾಡುವವಳಲ್ಲ. ಇದೇ ರೀತಿ ಆಕೆಗೆ ಈ ಸಮಾಜಕ್ಕಾಗಿ ಏನನ್ನಾದರೂ ಮಾಡ ಬೇಕು, ಯಾವುದು ಸರಿ ಯಾವುದು ತಪ್ಪೆಂಬ ಬಗ್ಗೆ ಕೈಲಾದಷ್ಟು ಜನರನ್ನು ಪ್ರಭಾವಿಸಬೇಕೆಂಬ ಆಸೆ ಇದೆ. ಆದರೆ ಸಿನಿಮಾದಾಚೆಗೆ ಅಂಥಾದ್ದನ್ನು ಮಾಡಲು ಆಕೆಗಿಷ್ಟವಿಲ್ಲ. ತನಗೆ ಒಲಿದಿರೋ ನಟನೆಯ ಮೂಲಕವೇ ಆ ಕೆಲಸ ಮಾಡಲು ತಾಪ್ಸಿ ತೀರ್ಮಾನಿಸಿದ್ದಾಳಂತೆ.
ಇದೀಗ ತಾಪ್ಸಿ ನೀತಿ ಶಾಸ್ತ್ರ ಅಂತೊಂದಿ ಕಿರು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದರಲ್ಲಿ ಸಿಖ್ಖ್ ಹುಡುಗಿಯ ಪಾತ್ರ ಮಾಡುತ್ತಿರುವ ತಾಪ್ಸಿ ಇಂದು ದೇಶಾದ್ಯಂತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರೋ ದೌರ್ಜನ್ಯ, ನೈತಿಕ ಮಪೊಲೀಸ್ಗಿರಿ ಮುಂತಾದವುಗಳ ವಿರುದ್ಧ ಸಿಡಿದೇಳುವ ಪಾತ್ರ ಮಾಡುತ್ತಿದ್ದಾಳಂತೆ.
No Comment! Be the first one.