ಕನ್ನಡ ಚಿತ್ರರಂಗದಲ್ಲಿ ಕಳೆದ 3 ದಶಕಗಳಿಂದಲೂ ಸೇವೆ ಸಲ್ಲಿಸುತ್ತಿರುವ ಚಲನಚಿತ್ರ ಪ್ರಚಾರಕರ್ತ ಎಂ.ಜಿ. ಲಿಂಗರಾಜು ಅವರ ಸಂಪಾದಕತ್ವದಲ್ಲಿ  ಹೊರತರಲಾಗುತ್ತಿರುವ  ಕನ್ನಡ ಸಿನಿಮಾ ಟಿವಿ ಡೈರೆಕ್ಟರಿಯ ಇಂಗ್ಲೀಷ್ ಆವೃತ್ತಿಯ ಬಿಡುಗಡೆ ಸಮಾರಂಭ ಭಾರತೀಯ ವಿದ್ಯಾಭವನದಲ್ಲಿ ನೆರವೇರಿತು.  ನಟ ಉಪೇಂದ್ರ ಅವರು  ಸಿನಿಮಾ ಟಿವಿ ಡೈರೆಕ್ಟರಿಯ 2019ರ ಇಂಗ್ಲೀಷ್ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಈ ಸಮಾರಂಭದಲ್ಲಿ ನಟಿಯರಾದ ಹರಿಪ್ರಿಯ, ವೈಷ್ಣವಿ, ಚಲನಚಿತ್ರ ನಿರ್ಮಾಪಕರಾದ ಡಾ.ಎಂ.ದೇವೇಂದ್ರ ರೆಡ್ಡಿ, ಪತ್ರಕರ್ತ ಗಣೇಶ್ ಕಾಸರಗೋಡು, ನಿರ್ದೇಶಕ ಸಾಯಿಪ್ರಕಾಶ್, ಡಾ.ವಿ.ನಾಗೇಂದ್ರಪ್ರಸಾದ್, ರಿಚರ್ಡ್ ಕ್ಯಾಸ್ಟಲಿನೋ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಅವರು ವಹಿಸಿಕೊಂಡಿದ್ದರು.

ಈ ಡೈರೆಕ್ಟರಿ ಬಿಡುಗಡೆ ಮಾಡಿದ ನಂತರ ಮಾತನಾಡಿದ ನಟ ಉಪೇಂದ್ರ “ಲಿಂಗರಾಜು ಅವರು ಬಹಳ ರಿಸ್ಕ್ ತೆಗೆದುಕೊಂಡು ಈ ಪುಸ್ತಕವನ್ನು ಹೊರತಂದಿದ್ದಾರೆ, ಅದೇ ಬೇಸರದಿಂದ ಇದು ಕೊನೆಯ ಆವೃತ್ತಿ ಎಂದು ಹೇಳಿದ್ದಾರೆ, ನಾವೆಲ್ಲ ಜೊತೆಗಿದ್ದೇವೆ. ಇದು ಕೊನೆಯದಾಗಬಾರದು, ಚಿತ್ರರಂಗದ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಉಪಯೋಗಿಸಿಕೊಂಡು ಒಂದು ವೆಬ್‍ಸೈಟ್ ಮಾಡಿ” ಎಂದು ಸಲಹೆ ನೀಡಿದರು. ನಂತರ ಸಾಹಿತಿ ಡಾ.ವಿ. ನಾಗೇಂದ್ರಪ್ರಸಾದ್ ಮಾತನಾಡಿ “ಈಗಿನ ಕಾಲದಲ್ಲಿ ಅಂಗೈಯಲ್ಲಿ ಇಡೀ ವಿಶ್ವವನ್ನು ಇಟ್ಟುಕೊಂಡಿದ್ದೇವೆ. ಆದರೆ 20 ವರ್ಷಗಳ ಹಿಂದೆ ಈ ಡೈರೆಕ್ಟರಿಯ ವಿಷಯದಲ್ಲಿ ಜಗಳಗಳೇ ಆಗುತ್ತಿದ್ದವು. ಆಫೀಸ್‍ನಲ್ಲಿಟ್ಟುಕೊಂಡಿದ್ದನ್ನು ಯಾರೋ ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ನಿಲ್ಲಿಸಬಾರದು. ಡಿಜಿಟಲ್ ರೂಪದಲ್ಲಿಯಾದರೂ ತರಬೇಕು ಎಂದು ಹೇಳಿದರು. ಉಳಿದಂತೆ ನಿರ್ಮಾಪಕರಾದ ದೇವೆಂದ್ರ ರೆಡ್ಡಿ  ಮಾತನಾಡಿ “ಲಿಂಗರಾಜು ಅವರು ಈ ಪುಸ್ತಕವನ್ನು ಹೊರತರಲು ತುಂಬಾ ಹೆಣಗಾಡಿದ್ದಾರೆ. ಅವರ ಈ ಪ್ರಯತ್ನಕ್ಕೆ ಎಲ್ಲರೂ ಪ್ರೋತ್ಸಾಹಿಸಿ” ಎಂದು ಹೇಳಿದರು.

CG ARUN

ರಾಕ್ಷಸುಡು ಟೀಸರ್ ರಿಲೀಸ್!

Previous article

50ರ ಹರೆಯದ ಪಾತ್ರದಲ್ಲಿ ಸಂಚಾರಿ ವಿಜಯ್!

Next article

You may also like

Comments

Leave a reply

Your email address will not be published. Required fields are marked *