ಅಣ್ಣಾತೆ ಅಮೆರಿಕದಿಂದ ಬರ್ತಿದ್ದಾರೆ…

ಟ್ರೀಟ್‌ ಮೆಂಟ್‌ಗೆ ಅಮೆರಿಕಾಗೆ ಹೋಗಿದ್ದ ರಜನೀಕಾಂತ್‌ ಇಂದು ವಾಪಾಸು ಇಂಡಿಯಾಗೆ ಬರುತ್ತಿದ್ದಾರೆ. ಈಗವರು ನಟಿಸುತ್ತಿರುವ ಅಣ್ಣಾತೆ ಚಿತ್ರಕ್ಕಾಗಿ ಎರಡು ದಿನಗಳ ಪ್ಯಾಚ್‌ವರ್ಕ್‌ ನಲ್ಲಿ  ಭಾಗವಹಿಸಬೇಕಿದೆ. ಅ‍ಣ್ಣಾತೆ ಚಿತ್ರದ ಬಹುತೇಕ ಭಾಗ ಹೈದರಾಬಾದಿನ ರಾಮೋಜಿ ಸ್ಟುಡಿಯೋದಲ್ಲಿ ನಡೆದಿತ್ತು. ಈಗ ಉಳಿದಿರುವ ಎರಡು ದಿನಗಳ ಪ್ಯಾಚ್‌ ಕೆಲಸಕ್ಕೆ ಚೆನ್ನೈನಲ್ಲೇ ಸೆಟ್‌ ನಿರ್ಮಿಸಲಾಗಿದೆಯಂತೆ. ಕೊರೋನಾ ಲಾಕ್‌ ಡೌನ್‌ ಸಂದರ್ಭದಲ್ಲಿ ಈ ಚಿತ್ರದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಕೂಡಾ ಮುಕ್ತಾಯವಾಗಿದೆ. ದೀಪಾವಳಿಗೆ ʻಅಣ್ಣಾತೆʼಯನ್ನು ತೆರೆಗೆ ತರಲು ನಿರ್ದೇಶಕ ಶಿವಾ ಸಕಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.

ರಜನಿ ಒಂದು ಚಿತ್ರ ಮುಗಿಸುತ್ತಿದ್ದಂತೇ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಮೂಡುತ್ತದೆ. ಈಗ ಅಣ್ಣಾತೆಯನ್ನು ನಿರ್ದೇಶಿಸಿರುವ ಶಿವಾ ಅವರೇ ಮುಂದಿನ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಮಾತಿತ್ತು. ಈ ಹಿಂದೆ ರಜನಿ ನಟಿಸಿದ್ದ ಪೇಟ್ಟಾ ಚಿತ್ರವನ್ನು ಡೈರೆಕ್ಟ್‌ ಮಾಡಿದ್ದ ಕಾರ್ತಿಕ್‌ ಸುಬ್ಬರಾಜ್‌ ರಜನಿಗಾಗಿ ಕತೆ ರೆಡಿ ಮಾಡಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಆದರೆ ಅದು ಅಸಾಧ್ಯ ಅನ್ನುತ್ತಿದೆ ಮದ್ರಾಸ್‌ ಮೂಲ. ಯಾಕೆಂದರೆ, ಇದೇ ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದಲ್ಲಿ ರಜನಿ ಅಳಿಯ ನಟಿಸಿರುವ ಲೇಟೆಸ್ಟ್‌ ಸಿನಿಮಾ ಜಗಮೇ ತಂಧಿರಮ್‌ ಮಕಾಡೆ ಮಲಗಿದೆ. ಈ ಚಿತ್ರವನ್ನು ಓಟಿಟಿಯಲ್ಲಿ ನೋಡಲೂ ಜನ ಮುಖ ಸಿಂಡರಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕಾರ್ತಿಕ್‌ ಸುಬ್ಬರಾಜ್‌ನನ್ನು ನಂಬಿ ರಜನಿ ಕಾಲ್‌ ಶೀಟ್‌ ಕೊಡೋದು ಡೌಟು.

ಈ ನಡುವೆ ಮಮ್ಮೂಟಿ ಮಗ ದುಲ್ಕರ್‌ ಅಭಿನಯದ ಕಣ್ಣುಂ ಕಣ್ಣುಂ ಕೊಳ್ಳೆಯಡಿತ್ತಾಳ್‌ ಸಿನಿಮಾವನ್ನು ಡೈರೆಕ್ಟ್‌ ಮಾಡಿದ್ದ ದೇಸಿಂಗ್‌ ಪೆರಿಯಸ್ವಾಮಿ ರಜನಿಯ ಮುಂಬರುವ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳಲಿದ್ದಾರೆ. ಎ.ಜಿ.ಎಸ್.‌ ಪ್ರೊಡಕ್ಷನ್‌ ಈ ಚಿತ್ರವನ್ನು ನಿರ್ಮಿಸಲಿದೆ ಎನ್ನುವ ನ್ಯೂಸು ಹರಿದಾಡುತ್ತಿದೆ. ಇವೆಲ್ಲ ಎಷ್ಟು ನಿಜವೋ ಗೊತ್ತಿಲ್ಲ. ಅಮೆರಿಕಾದಿಂದ ಫ್ಲೈಟು ಇಳಿದು ಬರುತ್ತಿದ್ದಂತೇ ಅಣ್ಣಾತೆ ಕೆಲಸ ಕಂಪ್ಲೀಟ್‌ ಮಾಡಿ, ಮುಂದಿನ ಚಿತ್ರಕ್ಕಾಗಿ ತಲೈವಾ ಕತೆ ಕೇಳಲು ಶುರು ಮಾಡುತ್ತಾರಂತೆ. ಯಾರ ಕತೆ ಹೆಚ್ಚು ಇಷ್ಟವಾಗುತ್ತದೋ ಅವರಿಗೆ ಡೇಟು ಕೊಡಲು ನಿರ್ಧರಿಸಿದ್ದಾರೆ ಅನ್ನೋದಂತೂ ನಿಜ…


Posted

in

by

Tags:

Comments

Leave a Reply