ಚಾನೆಲ್ಲು ಬಾಗಿಲು ಮುಚ್ಚಿದ ಕಾರಣದಿಂದ ಅವರ ʻಮಗಳು ಜಾನಕಿʼ ಅರ್ಧಕ್ಕೆ ನಿಂತಿದೆ. ಸೀತಾರಾಮ್ ಅವರ ಧಾರಾವಾಹಿಗಳನ್ನು ಜನ ಕಾದಂಬರಿಯ ಫೀಲಿನಲ್ಲಿ ನೀಡಿಕೊಂಡು ಬಂದಿರುತ್ತಾರೆ. ಹಠಾತ್ತನೆ ಅವು ನಿಂತಾಗ ನೋಡುಗರ ಮನಸ್ಸಿಗೂ ಕಸಿವಿಸಿಯಾಗಿರುತ್ತದೆ.
ದಶಕಗಳ ಹಿಂದೆ ನಟ, ಸಾಹಿತಿ, ನಾಟಕಕಾರ, ರಾಜಕಾರಣಿಯಾಗಿ ಗುರುತಿಸಿಕೊಳ್ಳುತ್ತಲೇ ಧಾರಾವಾಹಿ ನಿರ್ದೇಶಕರಾಗಿ ತೀರಾ ದೊಡ್ಡ ಹೆಸರು ಮಾಡಿದವರು, ಇದೇ ಉದ್ಯಮದಲ್ಲಿ ಪೂರ್ಣಪ್ರಮಾಣದಲ್ಲಿ ಗುರುತಿಸಿಕೊಂಡವರು ಟಿ.ಎನ್. ಸೀತಾರಾಮ್. ನಾನಾ ಕ್ಷೇತ್ರಗಳಲ್ಲಿ ಸುತ್ತಾಡಿಕೊಂಡು ಈ ಸೀರಿಯಲ್ ಕ್ಷೇತ್ರದಲ್ಲಿ ನೆಲೆ ನೆಲ್ಲೋ ಹೊತ್ತಿಗೆ ಟಿಎನ್ನೆಸ್ ಗೆ ನಲವತ್ತೆರಡು ದಾಟಿತ್ತಂತೆ. ಮಾಯಾಮೃಗ, ಮನ್ವಂತರ, ಮುಕ್ತಗಳ ಗೆಲುವು ದಕ್ಕಿದ್ದು ಇವರ ಸೆಕೆಂಡ್ ಹಾಫ್ ನಲ್ಲೇ.
ನಿರ್ದೇಶನದ ಜೊತೆಗೆ ಧಾರಾವಾಹಿಗಳ ನಿರ್ಮಾಣವನ್ನೂ ಮಾಡಿದ ಸೀತಾರಾಮ್ ಇಲ್ಲಿ ದೊಡ್ಡ ಮಟ್ಟದಲ್ಲೇ ದುಡಿದವರು. ಸೀರಿಯಲ್ ಜಗತ್ತಿನಲ್ಲಿ ಆ ಪಾಟಿ ದುಡ್ಡು, ಹೆಸರು ಮಾಡಿದ ಇವರಿಗ್ಯಾಕೊ ಸಿನಿಮಾ ಇಂಡಸ್ಟ್ರಿ ಕೈ ಹಿಡಿಯಲೇ ಇಲ್ಲ. ರಾಜಕೀಯದ ಹಿನ್ನೆಲೆ ಹೊಂದಿದ್ದ, ಭೈರಪ್ಪನವರ ಕಾದಂಬರಿ ಆಧಾರಿತ ಮತದಾನ ಒಂಚೂರು ಹೆಸರು ಮಾಡಿದ್ದು ಬಿಟ್ಟರೆ ನಂತರದ ಮೀರಾ ಮಾಧವ, ಕಾಫಿ ತೋಟಗಳು ಕಾರಣಾಂತರಗಳಿಂದ ಕರಾಳ ಸೋಲು ಕಂಡವು.
ಮಾಡಿದ ಸಿನಿಮಾಗಳು ಮತ್ತೆ ಮತ್ತೆ ಹಳ್ಳ ಹಿಡಿದರೂ ಟಿಎನ್ನೆಸ್ಸನ್ನು ಎಬ್ಬೆಬ್ಬಿಸಿ ನಿಲ್ಲಿಸಿದ್ದು ಮಾತ್ರ ಅವರ ನಿರ್ದೇಶನದ ಧಾರಾವಾಹಿಗಳು. ಸೀರಿಯಲ್ಲುಗಳನ್ನು ಹೊಸೆಯುವ ಕಲೆ ಸೀತಾರಾಮ್ ಅವರಿಗೆ ಸಿದ್ದಿಸಿದೆ. ಈ ಕಾರಣದಿಂದಲೇ ಚಾನೆಲ್ಲುಗಳೂ ಕರೆದು, ಕಾದು ಅವರಿಗೆ ಕೆಲಸ ಕೊಟ್ಟಿವೆ. ಚಾನೆಲ್ಲು ಬಾಗಿಲು ಮುಚ್ಚಿದ ಕಾರಣದಿಂದ ಅವರ ʻಮಗಳು ಜಾನಕಿʼ ಅರ್ಧಕ್ಕೆ ನಿಂತಿದೆ. ಸೀತಾರಾಮ್ ಅವರ ಧಾರಾವಾಹಿಗಳನ್ನು ಜನ ಕಾದಂಬರಿಯ ಫೀಲಿನಲ್ಲಿ ನೀಡಿಕೊಂಡು ಬಂದಿರುತ್ತಾರೆ. ಹಠಾತ್ತನೆ ಅವು ನಿಂತಾಗ ನೋಡುಗರ ಮನಸ್ಸಿಗೂ ಕಸಿವಿಸಿಯಾಗಿರುತ್ತದೆ. ಸೀಷಿಯಲ್ ಮೀಡಿಯಾದಲ್ಲಿ ಟಿ ಎನ್ ಎಸ್ ಲೈವ್ ಬಂದಾಗ ಜನ ಕೇಳುವ ಪ್ರಮುಖ ಪ್ರಶ್ನೆ ʻಮಗಳು ಜಾನಕಿ ಮತ್ತೆ ಯಾವಾಗ?ʼ ಎನ್ನುವುದು. ಈ ಪ್ರಶ್ನೆಗೆ ʻಆದಷ್ಟು ಶೀಘ್ರದಲ್ಲಿ ಬರಲಿದ್ದಾಳೆʼ ಅಂತಷ್ಟೇ ಉತ್ತರಿಸುತ್ತಿರುವ ಸೀತಾರಾಮ್ ಅದನ್ನು ಕೊನೆಗೊಳಿಸುವುದಾಗಿ ಹೇಳಿಕೊಂಡಿಲ್ಲ.
ಇದರ ನಡುವೆಯೇ ಮಾಯಾಮೃಗ ಧಾರಾವಾಹಿಯನ್ನು ಓ ಟಿ ಟಿಯಲ್ಲಿ ಮರುಪ್ರಸಾರ ಮಾಡುವ ಎಲ್ಲ ಸಿದ್ದತೆಯನ್ನೂ ನಡೆಸಿದ್ದಾರೆ. ಇಪ್ಪತ್ತೆರಡು ವರ್ಷಳ ಹಿಂದೆ ಟೆಲಿಕಾಸ್ಟ್ ಆಗಿ, ಹೆಸರು ಮಾಡಿದ್ದ ಈ ಸೀರಿಯಲ್ಲನ್ನು ಇವತ್ತಿನ ದಿನಗಳಿಗೆ ಹೊಂದುವಂತೆ ಒಂದಿಷ್ಟು ಸುಣ್ಣ ಬಣ್ಣ ಹಚ್ಚಿ, ಬೇಡದ ದೃಶ್ಯಗಳನ್ನು ಕಿತ್ತೆಸೆದು ಹೊಸಾ ಲುಕ್ಕು ನೀಡಿದ್ದಾರಂತೆ. ಓಂದು ವೇಳೆ ಮಾಯಾಮೃಗ ಓ ಟಿ ಟಿಯಲ್ಲಿ ಗೆಲುವ ಕಂಡರೆ ಸೀತಾರಾಮ್ ಅವರ ಇನ್ನಿತರ ಧಾರಾವಾಹಿಗಳು ಸೇರಿದಂತೆ ಗೆಲುವು ಕಂಡಿದ್ದ ಹಳೇ ಸೀರಿಯಲ್ಲುಗಳೆಲ್ಲಾ ಸಾಲು ಸಾಲಾಗಿ ಅಪ್ ಲೋಡ್ ಆಗೋದು ಗ್ಯಾರೆಂಟಿ!
No Comment! Be the first one.