ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಅಂದಾಕ್ಷಣ ನೆನಪಾಗುವ ದಂಪತಿಗಳೆಂದರೆ ಉಪೇಂದ್ರ ಮತ್ತು ಪ್ರಿಯಾಂಕ. ಸಿನಿಮಾ ಸಂಸಾರ ಎರಡನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಈ ಜೋಡಿಗೆ ಅಗ್ನಿ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಉಪೇಂದ್ರ ಅಭಿನಯದ ಐ ಲವ್ ಯು ಸಿನಿಮಾ ಈಗಾಗಲೇ ಜೂನ್ 14ಕ್ಕೆ ರಿಲೀಸ್ ಆಗಲು ರೆಡಿಯಾಗಿದೆ. ಅದೇ ರೀತಿ ಅಮ್ಮ ಮಗಳು ಪ್ರಿಯಾಂಕ ಉಪೇಂದ್ರ ಮತ್ತು ಐಶ್ವರ್ಯಾ ಅಭಿನಯದ ದೇವಕಿ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದ್ದು, ಆ ಚಿತ್ರವು ಜೂನ್ ತಿಂಗಳಿನಲ್ಲಿಯೇ ಬರುವ ನಿರೀಕ್ಷೆ ಇದೆ.
ಒಂದೇ ತಿಂಗಳಿನಲ್ಲಿಯೇ ಅಪ್ಪ, ಮಗಳು, ಹೆಂಡತಿ ಎಲ್ಲರೂ ತೆರೆಯಲ್ಲಿ ಮಿಂಚಲು ರೆಡಿಯಾಗಿರೋದು ಅಭಿಮಾನಿಗಳ ಹರ್ಷೋದ್ಗಾರಕ್ಕೆ ಕಾರಣವಾದರೂ ಯಾವ ಸಿನಿಮಾ ಯಾವ ಮಟ್ಟಕ್ಕೆ ಯಶಸ್ಸು ಗಳಿಸಬಲ್ಲದು ಎಂಬ ಲೆಕ್ಕಾಚಾರ ಸಿನಿಪಂಡಿತರದ್ದು. ಪ್ರಜಾಕೀಯದ ಪ್ರಚಾರದಲ್ಲಿದ್ದ ಉಪೇಂದ್ರ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಆಗಿ ಐ ಲವ್ ಯು ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಮಮ್ಮಿ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ನ ನಂತರ ನಿರ್ದೆಶಕ ಲೋಹಿತ್ ಮತ್ತು ಪ್ರಿಯಾಂಕ ಕಾಂಬಿನೇಷನ್ನಿನ ಎರಡನೇ ಸಿನಿಮಾ ದೇವಕಿಯಾಗಿದ್ದು ಮತ್ತದೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅಂದಹಾಗೆ ಉಪೇಂದ್ರ ಪುತ್ರಿ ದೇವಕಿ ಸಿನಿಮಾದ ಮೂಲಕವೇ ಲಾಂಚ್ ಆಗುತ್ತಿರುವುದು ವಿಶೇಷವಾಗಿದೆ.
No Comment! Be the first one.