ಯಾವನ್ರೀ ಇವನು ರಾಮ್ ಗೋಪಾಲ್ ವರ್ಮಾ? ಒಂದು ಕಾಲಕ್ಕೆ ತನ್ನ ನಿರ್ದೇಶನದ ಸಿನಿಮಾಗಳು ಮಾತಾಡುವಂತೆ ಮಾಡುತ್ತಿದ್ದ. ಯಾವಾಗ ಒಳ್ಳೇ ಸಿನಿಮಾ ಮಾಡೋದನ್ನು ಬಿಟ್ಟು ಮಾತಾಡಲು ಶುರು ಮಾಡಿದನೋ ಈತನ ಸಿನಿಮಾಗಳನ್ನು ಜನ ಮೂಸದೇ ಹೋದರು!
ಏನಾದರೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು, ಕೆಲಸಕ್ಕೆ ಬಾರದ್ದನ್ನು ಟ್ವೀಟ್ ಮಾಡಿ ಕಾಂಟ್ರವರ್ಸಿ ಮೈಮೇಲೆಳೆದುಕೊಳ್ಳೋದು ವರ್ಮಾನಿಗೆ ವ್ಯಸನದಂತಾಗಿಹೋಗಿದೆ.
ನಿನ್ನೆ ದಿನ ಜೂನಿಯರ್ ಎಂಟಿಆರ್ ಹುಟ್ಟುಹಬ್ಬವಿತ್ತಲ್ಲಾ… ಪ್ರತೀ ವರ್ಷ ಈತನ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾದ ಟೀಸರು, ಪೋಸ್ಟರು ಏನಾದರೂ ವಿಶೇಷತೆಗಳು ಲೋಕಾರ್ಪಣೆಗೊಳ್ಳುತ್ತಿದ್ದವು. ಈ ಸಲ ಕೊರೋನಾದ ಕರಾಳ ಹೊಡೆತದಿಂದ ಕಂಗಾಲಾಗಿದೆಯಲ್ಲಾ? ಹೀಗಾಗಿ ಯಾವುದೇ ವಿಡಿಯೋ ಬಿಡುಗಡೆ ಮಾಡುವುದಿಲ್ಲ ಅಂತಾ ಎನ್ ಟಿ ಆರ್ ಗಾರು ಮೊದಲೇ ಅನೌನ್ಸು ಮಾಡಿದ್ದರು. ಹೀಗಿದ್ದೂ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ತೆಗೆದ ಹೊಸಾ ಫೋಟೋಗಳನ್ನು ರಿಲೀಸ್ ಮಾಡಿದ್ದಾರೆ. ಇದು ನೆಚಿನ ನಟನ ಬರ್ತಡೇ ಗಿಫ್ಟು ಏನಿಲ್ಲವೆಂದು ಬೇಸರದಲ್ಲಿದ್ದ ಅಭಿಮಾನಿಗಳ ಪಾಲಿಗೆ ಲಾಕ್ ಡೌನ್ ಟೈಮಲ್ಲಿ ಎಣ್ಣೆ ಸಿಕ್ಕಿದಂತಾಗಿದೆ. ಎನ್ ಟಿ ಆರ್ ಅಭಿಮಾನಿಗಳೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಶೇರ್ ಮಾಡಿ ಸಂಭ್ರಮಿಸಿದರು. ಎನ್ ಟಿ ಆರ್ ಮೈಮೇಲೆ ಶರ್ಟು ಇಲ್ಲದ, ಬರಿಮೈ ಫೋಟೋ, ಎನ್ ಟಿ ಆರ್ ಲುಕ್ಕು ನೋಡಿ ಎಲ್ಲರೂ ಥ್ರಿಲ್ ಆಗಿದ್ದರು.
ಇದೇ ಫೋಟೋಗೆ ಟ್ವೀಟ್ ಮಾಡಿರುವ ವಕ್ರಬುದ್ಧಿ ವರ್ಮಾ ʻನಾನು ಸಲಿಂಗಿಯಲ್ಲ ಅಂತಾ ನಿಮಗೆಲ್ಲಾ ಗೊತ್ತು. ಆದರೆ, ಎನ್ ಟಿ ಆರ್ ಫೋಟೋ ನೋಡಿ ನನಗೆ ಹೇಗೇಹೋ ಆಗಿಬಿಟ್ಟಿದೆ. ಜೂನಿಯರ್ ಎನ್ ಟಿ ಆರ್ ದೇಹಸಿರಿ, ಅಂಗಸೌಷ್ಟವವನ್ನು ನೋಡುತ್ತಿದ್ದಂತೆ ನಾನೂ ಯಾಕೆ ಹೀಗೆ ಆಗಬಾರದು ಅನ್ನಿಸುತ್ತಿದೆ… ಆಹಾ…. ಬಾಡಿ ಏಂಟ್ರಾ ನೈನಾ???ʼ ಅಂತಾ ತಿಕ್ಕಲುತಿಕ್ಕಲಾಗಿ ಟ್ವೀಟ್ ಮಾಡಿದ್ದಾನೆ. ಇಷ್ಟು ದಿನ ವರ್ಮಾನ ಸಿನಿಮಾದಲ್ಲಿ ನಟಿಸಲು ಹೆಣ್ಮಕ್ಕಳು ಯೋಚಿಸುತ್ತಿದ್ದರು. ಇನ್ಮುಂದೆ ಗಂಡೈಕ್ಳೂ ಚಿಂತಿಸುವ ಸ್ಥಿತಿಗೆ ಸ್ವತಃ ವರ್ಮಾ ಕಾರಣನಾಗಿದ್ದಾನೆ!