ಕನ್ನಡದ ಖ್ಯಾತ ಗಾಯಕ ಜೈಹೋ ವಿಜಯ್ ಪ್ರಕಾಶ್ ಅವರಿಗೆ ಅಮೆರಿಕಾದಲ್ಲಿ ಅತ್ಯುನ್ನತ ಗೌರವ ದೊರೆತಿದೆ. ಅವರ ಗಾಯನಕ್ಕೆ ಫಿದಾ ಆಗಿರುವ ಅಮೆರಿಕನ್ನಡಿಗರು ಮೇ 12ರಂದು ವಿಜಯ್ ಪ್ರಕಾಶ್ ಡೇಯನ್ನಾಗಿ ಆಚರಿಸಲು ನಿರ್ಧರಿಸಿದ್ದಾರಂತೆ. ಈ ಹಿಂದೆ ವಿಜಯ್ ಪ್ರಕಾಶ್ ಅಮೆರಿಕಾದ ಕಾನ್ಕಾರ್ಡ್ ನಲ್ಲಿ ಒಂದು ಕಾರ್ಯಕ್ರಮ ನೀಡಿದ್ದರು. ಅಮೆರಿಕಾದ ಶಾರ್ಲೆಟ್ ಕನ್ನಡ ಸಂಘದಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಹಾಡುಗಳನ್ನು ಕೇಳಿರುವ ಅಲ್ಲಿನ ಮೇಯರ್ ವಿಲಿಯಂ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು.

ಅದೇ ಕಾರ್ಯಕ್ರಮದಲ್ಲಿ ಮುಂದಿನ ವರ್ಷದಿಂದ ಮೇ 12 ರಂದು ‘ವಿಜಯ ಪ್ರಕಾಶ್ ಡೇ’ ಎಂದು ಪ್ರತಿ ವರ್ಷ ಆಚರಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.  ಮೈಸೂರಿನ ಈ ಹೆಮ್ಮೆಯ ಗಾಯಕ ಬಹುಭಾಷೆಗಳಲ್ಲಿಯೂ ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತಮಿಳು ನಟ ವಿಶಾಲ್ ಹೆಗ್ಗಣದಂತೆ: ನಿರ್ದೇಶಕ ಭಾರತಿರಾಜ್

Previous article

ಸದ್ಯದಲ್ಲೇ ಶ್ರೀನಿಕಲ್ಯಾಣ!

Next article

You may also like

Comments

Leave a reply

Your email address will not be published. Required fields are marked *