ಸಾಮಾನ್ಯವಾಗಿ ವಿಶೇಷ ಸಿನಿಮಾಗಳಲ್ಲಿ ಹೀರೋಗಳು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವುದುಂಟು. ಹೆಚ್ಚೆಂದರೆ ಕೆಲ ಸಿನಿಮಾಗಳಲ್ಲಿ ತ್ರಿಪಾತ್ರಗಳಲ್ಲಿಯೂ ಕೂಡ ಮಿಂಚಿದ ನಟರಿದ್ದಾರೆ. ಇವೆಲ್ಲದರ ನಡುವೆ ಕಮಲ್ ಹಾಸನ್ ಸಂಪ್ರದಾಯ ಮುರಿದು 10 ಅವತಾರಗಳೊಂದಿಗೆ ದಶವತಾರದಲ್ಲಿ ಕಮಾಲು ಮಾಡಿ ಹಿಸ್ಟರಿಯನ್ನೇ ಸೃಷ್ಟಿಸಿದ್ದರು. ಕಾಲಿವುಡ್ ನಲ್ಲಿ ನಿರ್ಮಾಣವಾಗಿದ್ದ ದಶವತಾರಕ್ಕೆ ಸೆಡ್ಡು ಹೊಡೆಯಲು ಮತ್ತೊಂದು ಚಿತ್ರ ತಯಾರಿಸುವ ಭರ್ಜರಿ ಪ್ಲ್ಯಾನ್ ಸದ್ಯಕ್ಕಿದೆ.
ಇನ್ನೂ ಹೆಸರಿಡದ ಈ ಚಿತ್ರದಲ್ಲಿ ನಾಯಕ ಬರೋಬ್ಬರಿ 25 ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಆ ಪಾತ್ರಕ್ಕೆ ನಟ ವಿಕ್ರಂ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಇದು ನಟ ವಿಕ್ರಮ್ ಅಭಿನಯದ 58ನೆ ಚಿತ್ರವಾಗಿದ್ದು, ಡಿಫರೆಂಟ್ ಲುಕ್ ನಲ್ಲಿ ಐ ವಿಕ್ರಂ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ಅನಿಯನ್ ಚಿತ್ರದ ಮೂಲಕ ಅಭಿನಯದ ಚಾಪು ಮೂಡಿಸಿದ್ದ ವಿಕ್ರಮ್ ಅಜಯ್ ಜ್ಞಾನ್ ಮುತ್ತು ನಿರ್ದೇಶನದ ಈ ಚಿತ್ರದಲ್ಲಿ ಮತ್ತೊಮ್ಮೆ ಅಬ್ಬರಿಸಲು ರೆಡಿಯಾಗಿದ್ದಾರೆ. ವಯಕಾಂ 18 ಸ್ಟುಡಿಯೋಸ್ ಹಾಗೂ 7 ಸ್ಕ್ರೀನ್ ಜಂಟಿಯಾಗಿ ನಿರ್ಮಿಸಲಿರುವ ಈ ತಮಿಳು ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ. ಇನ್ನು ಈ ಚಿತ್ರದ ಕಥೆಯು ವಿಕ್ರಂ ಸುತ್ತ ಸುತ್ತಲಿರುವುದರಿಂದ ನಾಯಕಿ ಇರಲಿದ್ದಾರೆಯೇ ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಪ್ರಶ್ನೆಗಳಿಗೆಲ್ಲಾ ಶೀಘ್ರದಲ್ಲೇ ಉತ್ತರ ದೊರೆಯಲಿದ್ದು, ಶೀರ್ಷಿಕೆ ಅನಾವರಣದ ವೇಳೆ ಮತ್ತಷ್ಟು ಮಾಹಿತಿ ಹೊರ ಬೀಳಲಿದೆ.
No Comment! Be the first one.