ವಿನಯ್ ರಾಜ್ಕುಮಾರ್ ಕರಿಕೋಟು ಹಾಕಿ ಅನಂತುv/s ನುಸ್ರತ್ ಚಿತ್ರದಲ್ಲಿ ಅನಂತು ಆಗಿ ಕೋರ್ಟ್ ರೂಂನಲ್ಲಿ ವಾದ ಮಾಡಿದ್ಮೇಲೆ ಈಗ ರಗಡ್ ಬಾಕ್ಸರ್ ಆಗಿಬಿಟ್ಟಿದ್ದಾರೆ. ತಮ್ಮ ಹೊಸ ಚಿತ್ರಕ್ಕಾಗಿ ಫುಲ್ ಫಿಟ್ ಅಂಡ್ ಫೈನ್ ಆಗಿ ಎಂಟ್ರಿ ಕೊಡಲಿದ್ದಾರೆ. ಬಾಕ್ಸಿಂಗ್ ಗೇಮ್ ಸುತ್ತ ನಡೆಯುವ, ಸಾಮಾನ್ಯ ಹುಡುಗ ಬಾಕ್ಸರ್ಆಗುವ ಕತೆಯಲ್ಲಿ ಪಾತ್ರ ಮಾಡಲಿದ್ದಾರೆ ವಿನಯ್. ಇನ್ನೂ ಹೆಸರಿಡದ, ಪುಷ್ಕರ್ ನಿರ್ಮಾಣದ 11ನೇ ಚಿತ್ರ ಸೆಟ್ಟೇರುತ್ತಿದ್ದು. ಕಿರಿಕ್ ಪಾರ್ಟಿ ಚಿತ್ರದ ಸಿನಿಮಾಟೋಗ್ರಾಫರ್ಕರಮ್ ಚಾವ್ಲಾ ಬಹಳ ವರ್ಷಗಳಿಂದ ರೆಡಿಮಾಡಿಕೊಂಡಿರೋ ಒಂದು ಉತ್ತಮ ಕಥೆಯೊಂದಿಗೆ ನಿರ್ದೇಶಕರಾಗುತ್ತಿದ್ದಾರೆ.
ವಿನಯ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದೇ ಅವರ ಬಾಕ್ಸರ್ ಗೆಟಪ್ ರಿವೀಲ್ ಆಗಿದ್ದು, ಹುಟ್ಟುಹಬ್ಬದಂದೇ ಸಿನಿಮಾದ ಮೊದಲು ಲುಕ್ ನ ಫೋಸ್ಟರ್ ಸಹ ಬಿಡುಗಡೆಯಾಗಿದೆ. ಉಳಿದ ತಾರಾಗಣದ ಆಡಿಶನ್ ಪ್ರಕ್ರಿಯೆ ಕೂಡ ನಡೆಯಲಿದೆ. ಜುಲೈ ಆರಂಭದಲ್ಲಿ ಶೂಟಿಂಗ್ಗೆ ಪ್ಲ್ಯಾನ್ಮಾಡಲಾಗಿದೆ. ಮೊದಲಿಗೆ ವಿನಯ್ ಮೊದಲ ಹಂತದ ಆಕ್ಟಿಂಗ್ ಪೋಶನ್ ಮುಗಿಸಲಾಗುತ್ತೆ. ನಂತ್ರ 1 ತಿಂಗಳ ಅವಧಿಯಲ್ಲಿ ವಿನಯ್ 20 ಕೆ ಜಿ ತೂಕಕಳೆದುಕೊಳ್ಳಬೇಕಿದೆ. ನಂತ್ರ ಉಳಿದ ಪೋಶನ್ ಚಿತ್ರೀಕರಣವಾಗಲಿದೆ. ಈ ಪಾತ್ರವನ್ನ ಚಾಲೆಂಜಿಂಗ್ ಆಗಿ ಸ್ವೀಕರಿಸಿರೋ ವಿನಯ್ ಇದಕ್ಕಾಗಿ 2-3 ತಿಂಗಳಿನಿಂದಸಖತ್ ವರ್ಕ್ಔಟ್ ಮಾಡ್ತಾ ಬೆವರಿಳಿಸಿದ್ದಾರೆ.
No Comment! Be the first one.