ಸಂತೋಷ್ ಆನಂದ್ ರಾಮ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರ್ತಾಯಿರೋ ಅದ್ಧೂರಿ ಸಿನಿಮಾ ಯುವರತ್ನ. ರಾಜಕುಮಾರ ಚಿತ್ರದ ಬಳಿಕ ಈ ಜೋಡಿ ಮತ್ತೆ ಒಂದಾಗಿದ್ದಾರೆ. ವಿಶೇಷ ಅಂದ್ರೆ ಈಗಾಗಲೇ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸ್ಪೆಷಲ್ ವ್ಯಕ್ತಿಯೊಬ್ಬರು ಚಿತ್ರತಂಡ ಸೇರಿದ್ದಾರೆ. ಡಾ.ರಾಜ್ ಕುಮಾರ್ ನಟನೆಯ ಹತ್ತಾರು ಸಿನಿಮಾಗೆ ಆ್ಯಕ್ಷನ್ ಹೇಳಿದ್ದ ನಿರ್ದೇಶಕ ಭಗವಾನ್ ಸ್ಪೆಷಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಈ ಬಗ್ಗೆ ಸ್ವತಃ ಸಂತೋಷ್ ಆನಂದ್ ರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ದೊರೆ ಭಗವಾನ್ ವಿನಯ್ ರಾಘವೇಂದ್ರರಾಜ್ಕುಮಾರ್ ನಟಿಸಿದ್ದ ‘ಅನಂತು ವರ್ಸಸ್ ನುಸ್ರತ್’ ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ಮತ್ತೆ ಯುವರತ್ನ ಸಿನಿಮಾಗೆ ಬಣ್ಣ ಹಚ್ಚಿದ್ದು, ಯುವರತ್ನ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
No Comment! Be the first one.