ತಮಿಳಿನ ಖ್ಯಾತ ಕಾಮಿಡಿ ನಟ ಯೋಗಿ ಬಾಬು ಮತ್ತೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಾಮಿಡಿ ಸ್ಟಾರ್ ಆಗಿ ಮಿಂಚುತ್ತಿದ್ದ ಯೋಗಿ ಬಾಬು ಎರಡನೇ ಬಾರಿ ಹೀರೋ ಆಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಯೋಗಿ ಬಾಬು ನಟನೆಯ ‘ಬೋಟ್’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಬೋಟ್’ ಸಿನಿಮಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಕನ್ನಡದಲ್ಲೂ ಸಿನಿಮಾ ತೆರೆಗೆ ಬರುತ್ತಿದ್ದು ಈ ಮೂಲಕ ಯೋಗಿ ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿದ್ದಾರೆ. ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ಯೋಗಿ ಬಾಬು ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ‘ಬೋಟ್’ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿನಯ ಚಕ್ರವರ್ತಿ ಯೋಗಿ ಬಾಬು ಅಂಡ್ ಟೀಮ್ ಗೆ ಶುಭ ಹಾರೈಸಿದ್ದಾರೆ.
ಬೋಟ್, ಚಿಂಬು ದೇವನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ಚಿಂಬು ದೇವನ್ ದಳಪತಿ ವಿಜಯ್ ನಟನೆಯ ‘ಪುಲಿ’ ಸಿನಿಮಾ ಸೇರಿದಂತೆ ಇನ್ನು ಕೆಲವು ಸೂಪರ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಯೋಗಿ ಬಾಬು ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಎಂದರೆ ಸಂಪೂರ್ಣ ಸಿನಿಮಾ ಸಮುದ್ರದಲ್ಲಿಯೇ ಚಿತ್ರೀಕರಣಗೊಂಡಿದೆ. ಜಪಾನ್, ಚೆನ್ನೈ ಮೇಲೆ ಬಾಂಬ್ ದಾಳಿ ಮಾಡಿದಾಗ ಹತ್ತು ಜನರು ಚಿಕ್ಕ ಬೋಟ್ ಏರಿ ಪರಾರಿಯಾಗುತ್ತಾರೆ. ಬೋಟ್ ನಲ್ಲಿ ಚಿಕ್ಕ ರಂಧ್ರವಾಗುತ್ತೆ. ಬಳಿಕ ಈ ಹತ್ತು ಜನ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ, ಸಮುದ್ರದಿಂದ ಹೇಗೆ ಭೂಮಿ ಸೇರುತ್ತಾರೆ ಎನ್ನುವುದೇ ಚಿತ್ರದ ತಿರುಳು.ಸದ್ಯ ರಿಲೀಸ್ ಆಗಿರುವ ಟೀಸರ್ ಗೆ ಖ್ಯಾತ ನಿರ್ದೇಶಕ ಗೌತಮ್ ಮೆನನ್ ನಿರೂಪಣೆ ಮಾಡಿರುವುದು ವಿಶೇಷ. ಯೋಗಿ ಬಾಬು ಹಾಗೂ ಗೌರಿ ಜಿ ಕಿಶನ್ ಸೇರಿದಂತೆ ದೊಡ್ಡ ತಾರಬಳಗವೇ ಬೋಟ್ ಚಿತ್ರದಲ್ಲಿದೆ. ಘಿಬ್ರಾನ್ ಸಂಗೀತ ಸಂಯೋಜಿಸಿರುವ ಬೋಟ್ ಚಿತ್ರಕ್ಕೆ ಮಾದೇಶ್ ಮಾಣಿಕ್ಕಂ ಅವರ ಛಾಯಾಗ್ರಹಣವಿದೆ. ದಿನೇಶ್ ಅವರ ಸಂಕಲನ ಮತ್ತು ಟಿ ಸಂತಾನಂ ಅವರ ಕಲಾ ನಿರ್ದೇಶನವಿದೆ. ಈ ಚಿತ್ರವನ್ನು ಮಾಲಿ ಮತ್ತು ಮಾನ್ವಿ ಮೂವೀ ಮೇಕರ್ಸ್ ಬ್ಯಾನರ್ನಲ್ಲಿ ಪ್ರಭಾ ಪ್ರೇಮಕುಮಾರ್ ಅವರು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಎಲ್ಲವೂ ಅಂದುಕಂಡಂತೆ ಆದರೆ ‘ಬೋಟ್’ ಸಿನಿಮಾ ಫೆಬ್ರವರಿಯಲ್ಲಿ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
No Comment! Be the first one.