ನಟಸಾರ್ವಭೌಮ ಚಿತ್ರದ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಯುವರತ್ನ. ಈಗಾಗಲೇ ತಾರಾಗಣದ ವಿಚಾರವಾಗಿ ಸದ್ದು ಮಾಡುತ್ತಿರುವ ಯುವರತ್ನ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಲೇಜ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ಧಾರೆ. ರಾಜಕುಮಾರ ಚಿತ್ರದ ನಂತರ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನಿನ ಎರಡನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಭರವಸೆಯನ್ನು ಮೂಡಿಸಿದೆ.
ಇತ್ತೀಚಿಗಷ್ಟೇ ಮೇಕಿಂಗ್ ವಿಚಾರವಾಗಿ ಸುದ್ದಿಯಾಗಿದ್ದ ಯುವರತ್ನ ಸದ್ಯ ಡಿಫರೆಂಟ್ ಸ್ಟಿಲ್ ಮೂಲಕ ಸುದ್ದಿಯಾಗಿದೆ. ಯೆಸ್.. ಪುನೀತ್ ರಾಜ್ ಕುಮಾರ್ ಅವರ ಮೇಕಿಂಗ್ ಸ್ಟಿಲ್ ಒಂದು ಲೀಕಾಗಿದ್ದು, ಆ ಫೋಟೋದಲ್ಲಿ ಪುನೀತ್ ರಾಜ್ ಕುಮಾರ್ ಥೇಟ್ ರಾಬಿನ್ ಹುಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದು ಹಾಡೊಂದಕ್ಕೆ ಧರಿಸಿರುವ ಧಿರಿಸೋ ಅಥವಾ ಫೆಟ್ಸ್ ಸೀಕ್ವೆನ್ಸಾ ಎನ್ನುವುದು ಸದ್ಯಕ್ಕೆ ಸೀಕ್ರೆಟ್ಟಾಗಿಯೇ ಉಳಿದಿದೆ.