ಸ್ಯಾಂಡಲ್ ವುಡ್ ನ ಫೇಮಸ್ ನಿರ್ಮಾಪಕ ಕೆ.ಮಂಜು ತಮ್ಮ ಪುತ್ರ ಶ್ರೇಯಸ್ ರನ್ನು ಮಾಸ್ ಸಿನಿಮಾ ಪಡ್ಡೆ ಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ಶ್ರೇಯಸ್ ತಮ್ಮ ಎರಡನೇ ಚಿತ್ರಕ್ಕೂ ರೆಡಿಯಾಗುತ್ತಿರೋದು ಈಗಾಗಲೇ ಜಾಹೀರಾಗಿದೆ. ವಿಷ್ಣುಪ್ರಿಯ ಎಂಬ ಟೈಟಲ್ ನ ರಿಯಲ್ ಸ್ಟೋರಿ ಆಧಾರಿತ ಚಿತ್ರಕ್ಕೆ ಶ್ರೇಯಸ್ ಪ್ರಿಪರೇಷನ್ ಸ್ಟಾರ್ಟ್ ಮಾಡಿದ್ದು, ಈ ಬಾರಿ ಕೆ.ಮಂಜು ಅವರೇ ತಮ್ಮ ಪುತ್ರನ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ವಿ.ಕೆ. ಪ್ರಕಾಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಟೈಟಲ್ ಮೂಲಕವೇ ಸದ್ದು ಮಾಡಿದ್ದ ವಿಷ್ಣುಪ್ರಿಯ ಚಿತ್ರದಲ್ಲಿ ಶ್ರೇಯಸ್ ಗೆ ಈ ಬಾರಿ ನಾಯಕಿ ಯಾರಾಗ್ತಾರೆ ಅನ್ನೋ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿತ್ತು. ಸದ್ಯ ವಿಷ್ಣುಪ್ರಿಯನಿಗೆ ಮಲಯಾಳಂ ನಟಿ ಆಯ್ಕೆಯಾಗಿದ್ದಾರೆ.
ಯೆಸ್.. ತಮ್ಮ ಕಣ್ಸನ್ನೆಯ ಮೂಲಕ ನ್ಯಾಷನಲ್ ಕ್ರಶ್ ಪಟ್ಟವನ್ನು ಅಲಂಕರಿಸಿದ ಪ್ರಿಯಾವಾರಿಯರ್ ವಿಷ್ಣುಪ್ರಿಯ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದು, ಪ್ರಿಯಾ ಕೂಡ ವಿಷ್ಣುಪ್ರಿಯ ಕಥೆಯನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಚೊಚ್ಚಲ ಬಾರಿಗೆ ಪ್ರಿಯಾ ವಾರಿಯರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆಯಲಿದ್ಧಾಳೆ. ಧಾರವಾಡ ಮೂಲದ ಸಿಂಧುಶ್ರೀ ಚಿತ್ರಕಥೆ ಬರೆಯುತ್ತಿರುವ ವಿಷ್ಣುಪ್ರಿಯ ಚಿತ್ರದ ಮುಹೂರ್ತ ಮುಂದಿನ ತಿಂಗಳು ನಡೆಯುವ ಸಾಧ್ಯತೆ ಇದ್ದು, ಚಿತ್ರೀಕರಣವೂ ಸದ್ಯದಲ್ಲಿಯೇ ಆರಂಭವಾಗಲಿದೆ.